ದೇಶದತ್ತ ಮುಖ ಮಾಡಿದ 2015 ಹೋಂಡಾ ಸಿಆರ್-ವಿ

By Nagaraja

ಜಪಾನ್ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮಗದೊಂದು ಆಕರ್ಷಕ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ. ಅಮೇಜ್ ಕಾಂಪಾಕ್ಟ್ ಸೆಡಾನ್, ಸಿಟಿ ಮಿಡ್ ಸೈಜ್ ಸೆಡಾನ್ ಹಾಗೂ ಮೊಬಿಲಿಯೊ ಎಂಪಿವಿ ವಾಹನಗಳ ಯಶಸ್ಸಿನ ಬೆನ್ನಲ್ಲೇ ಪುಳಕಿತಗೊಂಡಿರುವ ಸಂಸ್ಥೆಯೀಗ ಪ್ರೀಮಿಯಂ ಕಾರೊಂದನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಬ್ರಿಟನ್‌ನಲ್ಲಿ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿರುವ 2015 ಸಿಆರ್-ವಿ ಮಾದರಿಯನ್ನು ಭಾರತಕ್ಕೆ ತರುವುದು ಹೋಂಡಾ ಯೋಜನೆಯಾಗಿದೆ. ಈ ಕ್ರೀಡಾ ಬಳಕೆಯ ವಾಹನವು ಸದ್ಯದಲ್ಲೇ ಭಾರತ ವಾಹನ ಮಾರುಕಟ್ಟೆ ಪ್ರವೇಶವಾಗಲಿದೆ ಎಂಬುದು ತಿಳಿದು ಬಂದಿದೆ.

honda cr v

ಇನ್ನೊಂದೆಡೆ ಸಿಆರ್-ವಿ ಸಣ್ಣ ಮಾದರಿಯಾಗಿರುವ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಸಹ ಭಾರತ ಪ್ರವೇಶ ಪಡೆದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಸದ್ಯ ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಕಾರುಗಳ ಸಾಲಿನಲ್ಲಿ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸಹ ಸೇರಿಕೊಂಡಿದೆ.

ಯುರೋಪ್ ಮಾದರಿಯ 2015 ಸಿಆರ್-ವಿ ತಾಂತ್ರಿಕತೆ
1.6 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ - 118 ಅಶ್ವಶಕ್ತಿ, 350 ಎನ್‌ಎಂ ಟಾರ್ಕ್
1.6 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ - 158 ಅಶ್ವಶಕ್ತಿ
ಮ್ಯಾನುವಲ್ ಅಥವಾ 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಆಟೋಮ್ಯಾಟಿಕ್ ಡೀಸೆಲ್ ಎಂಜಿನ್ ಮೈಲೇಜ್ - 20.4 kpl
ಫ್ರಂಟ್ ವೀಲ್ ಡ್ರೈವ್ ಹಾಗೂ ಆಲ್ ವೀಲ್ ಡ್ರೈವ್ ಸೌಲಭ್ಯ

ವೈಶಿಷ್ಟ್ಯಗಳು
ಇಂಟರ್‌ನೆಟ್ ರೆಡಿಯೋ,
ಡಿಎಬಿ, ಎಫ್‌ಎಂ, ಎಎಂ, ಬ್ಲೂಟೂತ್ ಕನೆಕ್ಟಿವಿಟಿ,
ಸ್ಯಾಟಲೈಟ್ ನೇವಿಗೇಷ್,
ಇಂಟರ್‌ನೆಟ್ ಬ್ರೌಸಿಂಗ್,
ಹೋಂಡಾ ಕನೆಕ್ಟ್ ಇನ್ಮೋಟೈನ್ಮೆಂಟ್ ಸಿಸ್ಟಂ.

ವಿಶಿಷ್ಟತೆ
ರಿಯರ್ ವ್ಯೂ ಪಾರ್ಕಿಂಗ್ ಕ್ಯಾಮೆರಾ,
ಅಕಾಪ್ಟಿವ್ ಕ್ರೂಸ್ ಕಂಟ್ರೋಲ್ ಅಥವಾ ಐ-ಎಸಿಸಿ,
ಯುರೋ ಎನ್‌ಸಿಎಪಿ ಫೈವ್ ಸ್ಟಾರ್ ರೇಟಿಂಗ್,
ಹೋಂಡಾ ಸೆನ್ಸಿಂಗ್,
ಆಟೋಮ್ಯಾಟಿಕ್ ಲೊ ಸ್ಪೀಡ್ ಬ್ರೇಕಿಂಗ್,
ಅವಘಡ ತಗ್ಗಿಸುವ ಬ್ರೇಕಿಂಗ್ ವ್ಯವಸ್ಥೆ,
ಕ್ರಾಸ್ ಟ್ರಾಫಿಕ್ ಮಾನಿಟರ್,
ಟ್ರಾಫಿಕ್ ಚಿಹ್ನೆ ಗುರುತಿಸುವ ವ್ಯವಸ್ಥೆ,
ಬ್ಲೈಂಡ್ ಸ್ಪಾಟ್ ಮಾಹಿತಿ,
ಹೈ ಬೀಮ್ ಬೆಂಬಲ ವ್ಯವಸ್ಥೆ

ಇನ್ನು ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಮೂಲಕ 2015 ಹೋಂಡಾ ಸಿಆರ್-ವಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಬ್ರಿಟನ್‌ ಮಾದರಿಗೆ ಹೋಲಿಸಿದರೆ ಕೆಲವೊಂದು ವೈಶಿಷ್ಟ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ.

Most Read Articles

Kannada
English summary
Japanese automobile giant Honda will be launching new products in India during 2015. They plan to introduce Jazz premium hatchback, HR-V compact SUV and HR-V SUV.
Story first published: Tuesday, January 27, 2015, 9:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X