2015 ರೆನೊ ಡಸ್ಟರ್ ಭರ್ಜರಿ ಬಿಡುಗಡೆ; ವಿಶೇಷತೆಗಳೇನು?

By Nagaraja

ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶ ಸಾಧಿಸಿರುವ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿರುವ ರೆನೊ ಡಸ್ಟರ್, ಕಾಲಕ್ಕೆ ತಕ್ಕಂತೆ ಕೆಲವೊಂದು ಮಾರ್ಪಾಡುಗಳೊಂದಿಗೆ ಮರು ಬಿಡುಗಡೆಯ ಭಾಗ್ಯ ಕಂಡಿದೆ. ಈ ಮೂಲಕ ಫ್ರಾನ್ಸ್ ಮೂಲದ ಪ್ರಖ್ಯಾತ ಸಂಸ್ಥೆಯು ಡಸ್ಟರ್ ತಾಜಾತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ.

ಹೌದು, ಎಲ್ಲ ಹೊಸತನದ 2015 ರೆನೊ ಡಸ್ಟರ್ ಭರ್ಜರಿ ಬಿಡುಗಡೆ ಕಂಡಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆ 8.03 ಲಕ್ಷ ರು.ಗಳಾಗಿದೆ. ಪ್ರಮುಖವಾಗಿಯೂ ಕಾರಿನ ಒಳಭಾಗದಲ್ಲಿ ಬದಲಾವಣೆ ಕಂಡುಬಂದಿದೆ. ಡಸ್ಟರ್‌ನಲ್ಲಿ ಆಳವಡಿಸಲಾಗಿರುವ ಇಕೊ ಮೋಡ್‌ನಿಂದ ಹೆಚ್ಚಿನ ಇಂಧನ ಕ್ಷಮತೆ ಗಳಿಸಬಹುದಾಗಿದೆ ಎಂದು ಸಂಸ್ಥೆಯು ಅಭಿಪ್ರಾಯಪಡುತ್ತದೆ.

2015 renault duster

ಕಾರಿನೊಳಗಿನ ಪ್ರಮುಖ ಬದಲಾವಣೆಗಳೆಂದರೆ ಕ್ರೂಸ್ ಕಂಟ್ರೋಲ್, ವೇಗ ನಿಯಂತ್ರಕ, ಹೊಸತಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದವುಗಳು ಕಾರಿಗೆ ಹೊಸ ನೋಟವನ್ನು ನೀಡುತ್ತದೆ. ಇನ್ನು ಮೃದು ಸ್ಪರ್ಶದ ಡ್ಯಾಶ್ ಬೋರ್ಡ್ ಸಹ ನೀವು ಕಾಣಬಹುದಾಗಿದೆ.

ಭಾರತೀಯ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ನೀಡುವುದರಲ್ಲಿ ಬದ್ಧವಾಗಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಡಸ್ಟರ್ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಬಯಸಿದೆ.

ಹೊಸ ಡಸ್ಟರ್ ಕಾರು 1.6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ (104 ಅಶ್ವಶಕ್ತಿ, 148 ತಿರುಗುಬಲ) ನಿಯಂತ್ರಿಸಲ್ಪಡಲಿದೆ. ಇನ್ನು ಡೀಸೆಲ್ ಎಂಜಿನ್ ಎರಡು ಟ್ಯೂನ್‌ಗಳಲ್ಲಿ (200 ತಿರುಗುಬಲದಲ್ಲಿ 85 ಅಶ್ವಶಕ್ತಿ ಮತ್ತು 245 ತಿರುಗುಬಲದಲ್ಲಿ 110 ಅಶ್ವಶಕ್ತಿ) ಲಭ್ಯವಿದ್ದು, ಇವೆರಡು 1.5 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌‌ನಿಂದ ನಿಯಂತ್ರಿಸಲ್ಪಡಲಿದೆ. ಅಂತೆಯೇ 6 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಡೀಸೆಲ್ ಆವೃತ್ತಿನಲ್ಲಿ ಆಲ್ ವೀಲ್ ಡ್ರೈವ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಲಭ್ಯವಿರಲಿದೆ.

ದೇಶದ ಮಾರುಕಟ್ಟೆಯಲ್ಲಿ ರೆನೊ ಡಸ್ಟರ್ ಪ್ರಮುಖವಾಗಿಯೂ ಮಹೀಂದ್ರ ಸ್ಕಾರ್ಪಿಯೊ, ಟಾಟಾ ಸಫಾರಿ ಸ್ಟ್ರೋಮ್, ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಹಾಗೂ ಮುಂಬರುವ ಹ್ಯುಂಡೈ ಐಎಕ್ಸ್15 ಮತ್ತು ಮಾರುತಿ ಸುಜುಕಿ ಎಕ್ಸ್‌ಎ ಆಲ್ಫಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
2015 Renault Duster launched in India: Price, Specs and More Details
Story first published: Saturday, March 14, 2015, 9:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X