ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ; ಮೈಲೇಜ್, ಬೆಲೆ

By Nagaraja

ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವುದರಲ್ಲಿ ಬದ್ದವಾಗಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ದೇಶದಲ್ಲಿ 2015 ಕ್ಯಾಮ್ರಿ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಇರಲಿದ್ದು, ಗರಿಷ್ಠ ಇಂಧನ ಕ್ಷಮತೆ ನೀಡಲಿದೆ.

ಭಾರತಕ್ಕೆ ಪರಿಚಯವಾಗಿರುವ ನೂತನ ಕ್ಯಾಮ್ರಿ ಹೈಬ್ರಿಡ್ ಮಾದರಿಯು 31.92 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ. ಈಗ ಬೆಲೆ, ಮೈಲೇಜ್ ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ

ಆಕ್ರಮಣಕಾರಿ ನೋಟ, ಶಕ್ತಿಶಾಲಿ ಬಂಪರ್, ಎಲ್ ಇಡಿ ಬೆಳಕಿನ ಸೇವೆ ಮುಂತಾದ ವೈಶಿಷ್ಟ್ಯಗಳು ಹೊಸ ಕ್ಯಾಮ್ರಿ ಕಾರಲ್ಲಿ ಕಂಡುಬರಲಿದೆ. ಇನ್ನು ಹಿಂದುಗಡೆಯೂ ಎಲ್ ಇಡಿ ಟೈಲ್ ಗೇಟ್ ಕ್ಲಸ್ಟರ್ ಹಾಗೂ ಹೊಸ ಅಲಾಯ್ ವೀಲ್ ಸೇವೆಯೂ ಇರಲಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ

ಇನ್ನು ಕಾರಿನೊಳಗೂ ನೂತನ ಇನ್ಸ್ಟ್ರಮೆಂಟ್ ಕ್ಲಸ್ಟರ್, ಸಂಟರ್ ಕನ್ಸೋಲ್, 6.1 ಇಂಚುಗಳ ಸ್ಕ್ರೀನ್ ಮುಂತಾದ ಸೌಲಭ್ಯಗಳು ಕಂಡುಬರಲಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ

ಅಂದ ಹಾಗೆ ಟೊಯೊಟಾ ಕ್ಯಾಮ್ರಿ 2.5 ಲೀಟರ್ ಪೆಟ್ರೋಲ್ ಎಂಜಿನ್ 160 ಅಶ್ವಶಕ್ತಿ (213 ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ ಎಲೆಕ್ಟ್ರಿಕ್ ಮೋಟಾರು ಮತ್ತಷ್ಟು 143 ಅಶ್ವಶಕ್ತಿ (230 ತಿರುಗುಬಲ) ಉತ್ಪಾದಿಸಲು ಸಹಕಾರಿಯಾಗಲಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ

ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎಂಜಿನ್ ಗಳು ಜೊತೆಯಾಗಿ 205 ಅಶ್ವಶಕ್ತಿ ಉತ್ಪಾದಿಸಲಿದ್ದು, ಪ್ರತಿ ಲೀಟರ್ ಗೆ ಗಮನಾರ್ಹ 19.16 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಬಿಡುಗಡೆ

ಕಂಪ್ಲೀಟ್ ಬೀಲ್ಟ್ ಯುನಿಟ್ (ಸಿಬಿಯು) ಕ್ಯಾಮ್ರಿ ಭಾರತ ಪ್ರವೇಶ ಪಡೆಯಲಿದೆ. ಇನ್ನು ಸಾಮಾನ್ಯ ಪೆಟ್ರೋಲ್ ಮಾದರಿಯು 28.8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಸಂಸ್ಥೆಯ ಪ್ರಕಾರ 2014ರಲ್ಲಿ 523ರಷ್ಟು ಕ್ಯಾಮ್ರಿ ಹೈಬ್ರಿಡ್ ಮಾರಾಟವಾಗಿದ್ದರೆ ಪೆಟ್ರೋಲ್ ಆವೃತ್ತಿಯು 197 ಯುನಿಟ್ ಗಳಿಗೆ ಮಾತ್ರ ಸೀಮಿತಗೊಂಡಿತ್ತು.

Most Read Articles

Kannada
English summary
2015 Toyota Camry Hybrid launched in India at Rs 31.92 lakh
Story first published: Thursday, April 30, 2015, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X