ಬಜೆಟ್ ಪ್ರಭಾವ; ಸದ್ಯ ಕಾರು, ಬೈಕ್ ಅಗ್ಗದ ಮಾತು ದೂರ!

By Nagaraja

ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2015-16ನೇ ಸಾಲಿನ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡಿಸಿರುತ್ತಾರೆ. ಇದರಲ್ಲಿ ವಾಹನೋದ್ಯಮದ ಮೇಲೆ ಬೀರುರುವ ಪರಿಣಾಮವಾದರೂ ಏನು ಎಂಬುದು ವಾಹನ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಜೆಟ್ ಅನ್ನು ಅವಲೋಕಿಸಿದಾಗ ವಾಹನೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಿಲ್ಲ ಎಂದೇ ವಿಶ್ಲೇಷಿಸಬಹುದಾಗಿದೆ. ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದು, ಏಕರೂಪದ ಸರಕು ಹಾಗೂ ಸೇವಾ ತೆರಿಗೆ ಆದಷ್ಟು ಬೇಗನೇ ಕಾರ್ಯರೂಪಕ್ಕೆ ತರುವುದು ಮುಂತಾದ ಬೇಡಿಕೆಗಳ ಕೂಗು ಆಟೋ ವಲಯದಿಂದ ಕೇಳಿ ಬಂದಿದ್ದವು.

mahindra scorpio

ಆದರೆ ಆಟೋ ಜಗತ್ತು ಇರಿಸಿಕೊಂಡಿರುವ ಹೆಚ್ಚಿನ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಕಂಡುಬಂದಿಲ್ಲ. ಹಾಗಿದ್ದರೂ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 30ರಿಂದ 25ಕ್ಕೆ ಇಳಿಕೆ ಮಾಡಿರುವುದು ಪರೋಕ್ಷವಾಗಿ ವಾಹನ ಜಗತ್ತಿಗೆ ನೆರವು ಮಾಡುವುದಲ್ಲದೆ ಇದರಿಂದ ಮೂಲ ಸೌಕರ್ಯಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಲು ಸಾಧ್ಯವಾಗಲಿದೆ.

ಕಾರು, ಬೈಕ್ ಅಗ್ಗದ ಮಾತು ದೂರ...
ಅಬಕಾರಿ ಸುಂಕ ಇಳಿಕೆ ಮಾಡುವುದು ಭಾರತ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟ ಸಿಯಾಮ್‌ನ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಇದಕ್ಕೆ ಕೇಂದ್ರ ಸರಕಾರ ಅಸಮ್ಮತಿ ಸೂಚಿಸಿರುವುದರಿಂದ ಸದ್ಯಕ್ಕೆ ಕಾರು, ಬೈಕ್ ಅಗ್ಗವಾಗುವುದು ಕಷ್ಟಕರೆನಿಸಿದೆ. ಈ ಹಿಂದಿನ ಯುಪಿಎ ಸರಕಾರ ಮಂಡಿಸಿದ ಬಜೆಟ್‌ನಲ್ಲಿ (2014 ಫೆಬ್ರವರಿ) ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಲಾಗಿತ್ತು. ಬಳಿಕ ಬಂದ ನರೇಂದ್ರ ಮೋದಿ ಸರಕಾರ ಮಂಡಿಸಿದ್ದ ತಾತ್ಕಾಲಿಕ ಬಜೆಟ್‌ನಲ್ಲೂ ಆರು ತಿಂಗಳ ವರೆಗೆ (ಡಿ. 31, 2014) ತೆರಿಗೆ ವಿನಾಯಿತಿ ಮುಂದುವರಿಸಲಾಗಿತ್ತು. ಆದರೆ ಹೊಸ ವರ್ಷ ಆಗಮನವಾದಂತೆ ಕೇಂದ್ರ ಸರಕಾರ ಹಳೆಯ ನೀತಿಗೆ ಮೊರೆ ಹೋಗಿತ್ತು.

tata bolt

ಏಕರೂಪದ ಸರಕು ಹಾಗೂ ಸೇವಾ ತೆರಿಗೆ ಜಾರಿಗೆ...
ಒಟ್ಟಿನಲ್ಲಿ ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಕಂಡುಬರದಿರಬಹುದು. ಆದರೆ ವಾಹನ ಜಗತ್ತಿನ ಬಹು ದಿನಗಳ ಬೇಡಿಕೆಯಾಗಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಎಲ್ಲ ರಾಜ್ಯಗಳಲ್ಲೂ ಏಕರೂಪದ ತೆರಿಗೆ ರಚನೆಯಾಗಲಿದೆ. ಅಷ್ಟೇ ಅಲ್ಲದೆ 2016 ಎಪ್ರಿಲ್ ತಿಂಗಳಿಂದ ಹೊಸ ನೀತಿ ಅನುಷ್ಠಾನಕ್ಕೆ ಬರಲಿದೆ ಎಂಬುದನ್ನು ಕೇಂದ್ರ ಸರಕಾರ ಘೋಷಿಸಿದೆ.

ಏತನ್ಮಧ್ಯೆ ವಾಹನೋದ್ಯಮವು ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ನೆರವು ಸಂಸ್ಥೆಗಳು ವಾಹನಕ್ಕೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಕಡಿತ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇದರಿಂದ ಖರೀದಿಗಾರರ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಕ್ಕೆ ಕೊಂಚ ನಿರಾಳತೆ ತರಲಿದೆ. ಈ ಬಗ್ಗೆಯೂ ಬಜೆಟ್‌ನಲ್ಲೂ ಯಾವುದೇ ಪ್ರಸ್ತಾವನೆ ಉಂಟಾಗಿಲ್ಲ.

mahindra reva

ವಿದ್ಯುತ್ ಚಾಲಿತ ಕಾರಿಗೆ ಬಂಪರ್...
ಈ ನಡುವೆ ವಿದ್ಯುತ್ ಚಾಲಿತ ಕಾರುಗಳ ನಿರ್ಮಾಣಕ್ಕೆ 75 ಕೋಟಿ ರು.ಗಳ ಅನುದಾನ ನೀಡುವುದಾಗಿ 2015 ಕೇಂದ್ರ ಬಜೆಟ್ ಘೋಷಿಸಿದೆ. ಇದು ಭವಿಷ್ಯದಲ್ಲಿ ಪರಿಸರ ಸ್ನೇಹಿ ವಾಹನಗಳ ಓಡಾಟಕ್ಕೆ ನೆರವಾಗಲಿದೆ. ಅಲ್ಲದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ನೀಡಿಕೊಂಡು ಬರುತ್ತಿರುವ ತೆರಿಗೆ ವಿನಾಯಿತಿಯನ್ನು ಮುಂದುವರಿಸಲಾಗುವುದು.

ರಸ್ತೆ ಮೂಲ ಸೌಕರ್ಯಕ್ಕೆ ನೆರವು...
ಇನ್ನು ರಸ್ತೆ ಮೂಲ ಸೌಕರ್ಯ ವೃದ್ಧಿಗೆ 79,000 ಕೋಟಿ ರು.ಗಳ ಅನುದಾನವನ್ನು ಘೋಷಿಸಲಾಗಿದೆ. ಈ ಮೂಲಕ ದೇಶದ ಕನಸಿನ ಒಂದು ಲಕ್ಷ ಕೀ.ಮೀ.ಗಳಷ್ಟು ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುವುದು.

ಮೇಕ್ ಇನ್ ಇಂಡಿಯಾ...
ಹಾಗಿದ್ದರೂ ಒಂದೇ ಸವನೆ ಸೀಮಾಸುಂಕವನ್ನು ಶೇಕಡಾ 10ರಿಂದ 40ಕ್ಕೆ ಏರಿಸಿರುವುದು ಕಂಪ್ಲೀಟ್ ಬೀಲ್ಟ್ ಯುನಿಟ್ (ಸಿಬಿಯು) ಮೂಲಕ ಭಾರತಕ್ಕೆ ಆಮದಾಗಿರುವ ವಾಹನಗಳ ಮೇಲೆ ನೇರ ಪರಿಣಾಮ ಬೀರಲಿದೆ. ಇನ್ನೊಂದೆಡೆ ಇದು ಮೇಕ್ ಇನ್ ಇಂಡಿಯಾ ಭಾಗವಾಗಿ ದೇಶದಲ್ಲೇ ಸ್ಥಳೀಯವಾಗಿ ವಾಹನಗಳನ್ನು ನಿರ್ಮಿಸುವಂತೆ ಪ್ರೋತ್ಸಾಹಿಸಲಿದೆ.

Most Read Articles

Kannada
English summary
The highly anticipated budget has been revealed by the Modi-led Government. They have addressed several issues, however, we want to tell you what impact it has on the automotive industry. Here is a breakdown of what the budget tells us auto-enthusiasts.
Story first published: Monday, March 2, 2015, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X