ಅಧ್ಯಯನ ಅಭಿವೃದ್ಧಿಗಾಗಿ ಭಾರತಕ್ಕೆ ಬಂದಿಳಿದ 2016 ಫಾರ್ಚ್ಯುನರ್

By Nagaraja

ಟೊಯೊಟಾ ಫಾರ್ಚ್ಯುನರ್ - ದೇಶದ ಅತ್ಯಂತ ಜನಪ್ರಿಯ ಕ್ರೀಡಾ ಬಳಕೆಯ ವಾಹನ. ರಾಜಕೀನ ನೇತಾರ ಸೇರಿದಂತೆ ದೇಶದ ಅನೇಕ ಗಣ್ಯ ವ್ಯಕ್ತಿಗಳ ಜನಪ್ರಿಯ ಗಾಡಿಯಿದು. ಹೀಗೆ ಶ್ರೀಮಂತ ಗ್ರಾಹಕರ ಪ್ರೀತಿ ವಿಶ್ವಾಸ ಗಿಟ್ಟಿಸಿಕೊಂಡಿರುವ ಟೊಯೊಟಾ ಫಾರ್ಚ್ಯುನರ್ ಈಗ ಹೊಸ ಸ್ವರೂಪ ಪಡೆದುಕೊಳ್ಳಲಿದೆ.

Also Read: ಭಾರತಕ್ಕೆ ಬರುತ್ತಿದೆ ಟೊಯೊಟಾ ಹೈಏಸ್ ಮಿನಿವ್ಯಾನ್ ಮುಂದಕ್ಕೆ ಓದಿ

ಸದ್ಯ ಲಭಿಸಿರುವ ಮಾಹಿತಿಗಳ ಪ್ರಕಾರ 2016 ಟೊಯೊಟಾ ಫಾರ್ಚ್ಯುನರ್ ಅಧ್ಯಯನ ಹಾಗೂ ಅಭಿವೃದ್ಧಿಗಾಗಿ ಭಾರತವನ್ನು ಬಂದು ತಲುಪಿದೆ. ತವರೂರಾದ ಜಪಾನ್ ನಿಂದ ದೇಶದಲ್ಲಿರುವ ಟೊಯೊಟಾ ಆರ್ ಆಂಡ್ ಡಿ ಘಟಕಕ್ಕೆ ಫಾರ್ಚ್ಯುನರ್ ಆಮದು ಮಡಲಾಗಿದೆ.

ಅಧ್ಯಯನ ಅಭಿವೃದ್ಧಿಗಾಗಿ ಭಾರತಕ್ಕೆ ಬಂದಿಳಿದ 2016 ಫಾರ್ಚ್ಯುನರ್

ಟೊಯೊಟಾದ ಹೊಸ 'ಜಿಡಿ' ಫ್ಯಾಮಿಲಿಗೆ ಸೇರಿದ 2.8 ಲೀಟರ್ ಡೀಸೆಲ್ ಎಂಜಿನ್ ಇದರಲ್ಲಿ ಬಳಕೆ ಮಾಡಲಾಗಿದೆ. ಇದರಲ್ಲಿ 2.4 ಲೀಟರ್ ಎಂಜಿನ್ ಆಯ್ಕೆ ಸಹ ಇರಲಿದ್ದು, ಆದರೆ ಇದು ಭಾರತದಲ್ಲಿ ಲಭ್ಯವಾಗುವ ಸಾಧ್ಯತೆ ಕಡಿಮೆಯಾಗಿದೆ.

ಅಧ್ಯಯನ ಅಭಿವೃದ್ಧಿಗಾಗಿ ಭಾರತಕ್ಕೆ ಬಂದಿಳಿದ 2016 ಫಾರ್ಚ್ಯುನರ್

ಥಾಯ್ಲೆಂಡ್‌ನಲ್ಲಿ ಜಾಗತಿಕ ಪಾದಾರ್ಪಣೆ ಗೈದಿದ್ದ 2016 ಟೊಯೊಟಾ ಫಾರ್ಚ್ಯುನರ್‌ನ 2.8 ಎಂಜಿನ್ ಎರಡು ವಿಭಿನ್ನ ಪವರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ

  • 150 ಅಶ್ವಶಕ್ತಿ ಮತ್ತು 400 ಎನ್‌ಎಂ ತಿರುಗುಬಲ.
  • 177 ಅಶ್ವಶಕ್ತಿ ಮತ್ತು 450 ಎನ್‌ಎಂ ತಿರುಗುಬಲ.
  • ಅಧ್ಯಯನ ಅಭಿವೃದ್ಧಿಗಾಗಿ ಭಾರತಕ್ಕೆ ಬಂದಿಳಿದ 2016 ಫಾರ್ಚ್ಯುನರ್

    ಆರು ಸ್ಪೀಡ್ ಮ್ಯಾನುವಲ್ ಹಾಗೂ ಆರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಅಂತೆಯೇ ರಿಯರ್ ವೀಲ್ ಡ್ರೈವ್ ಆಯ್ಕೆಯೂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇನ್ನು ಫೋರ್ ವೀಲ್ ಚಾಲನಾ ಆಯ್ಕೆಯೂ ಟಾಪ್ ಎಂಡ್ ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

    ಗಮನಾರ್ಹ ವೈಶಿಷ್ಟ್ಯಗಳು

    ಗಮನಾರ್ಹ ವೈಶಿಷ್ಟ್ಯಗಳು

    • ಸ್ಮಾರ್ಟ್ ಕೀ,
    • ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಗಾಗಿ ಪುಶ್ ಬಟನ್,
    • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಿರರ್,
    • ಪವರ್ ಫೋಲ್ಡಿಂಗ್ ಫಂಕ್ಷನ್,
    • ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಪೆಡಲ್ ಶಿಫ್ಟರ್ (ಆಟೋಮ್ಯಾಟಿಕ್ ವೆರಿಯಂಟ್ ನಲ್ಲಿ),
    • ಕ್ರೂಸ್ ಕಂಟ್ರೋಲ್,
    • ಎಂಐಡಿಗಾಗಿ ಟಿಎಫ್‌ಟಿ ಸ್ಕ್ರೀನ್,
    • ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಡಿವಿಡಿ, ಯುಎಸ್‌ಬಿ, ಆಕ್ಸ್‌,ಇನ್, ಬ್ಲೂಟೂತ್, ನೇವಿಗೇಷನ್ ಸಪೋರ್ಟ್,
    • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
    • ರಿಯರ್ ಎಸಿ ವೆಂಟ್ಸ್.
    • ಚಿಲ್ಡ್ ಗ್ಲೋವ್ ಬಾಕ್ಸ್,
    • ಲೆಥರ್ ಸೀಟು ಹೋದಿಕೆ,
    • ಎಂಟು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲನಾ ಸೀಟು.
    • ಸುರಕ್ಷತೆ

      ಸುರಕ್ಷತೆ

      • ಡ್ಯುಯಲ್ ಫ್ರಂಟ್ ಏರ್ ಬ್ಯಾಕ್,
      • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
      • ಮೊಣಕಾಲು ಏರ್ ಬ್ಯಾಗ್
      • ಒಟ್ಟು ಏಳು ಏರ್ ಬ್ಯಾಗ್
      • ಎಬಿಎಸ್,
      • ಇಬಿಡಿ ಮತ್ತು ಬ್ರೇಕ್ ಅಸಿಸ್ಟ್,
      • ಇಎಸ್‌ಸಿ, ಟಿಸಿಎಸ್,
      • ರಿವರ್ಸ್ ಕ್ಯಾಮೆರಾ ಜೊತೆ ಪಾರ್ಕಿಂಗ್ ಸೆನ್ಸಾರ್,
      • ಟ್ರಾಕ್ಟರ್ ಸ್ವೇ ಕಂಟ್ರೋಲ್,
      • ಹಿಲ್ ಅಸಿಸ್ಟ್ ಮತ್ತು ಡೌನ್ ಹಿಲ್ ಅಸಿಸ್ಟ್ ಕಂಟ್ರೋಲ್
      • ಅಧ್ಯಯನ ಅಭಿವೃದ್ಧಿಗಾಗಿ ಭಾರತಕ್ಕೆ ಬಂದಿಳಿದ 2016 ಫಾರ್ಚ್ಯುನರ್

        ಆದರೆ 2016 ಟೊಯೊಟಾ ಫಾರ್ಚ್ಯುನರ್ ಭಾರತ ಬಿಡುಗಡೆ ಇನ್ನು ಸ್ವಲ್ಪ ತಡವಾಗುವ ಸಾಧ್ಯತೆಯಿದೆ. ಇದು 2017ರ ವೇಳೆಯಲ್ಲಷ್ಟೇ ಭಾರತ ಮಾರುಕಟ್ಟೆ ತಲುಪಲಿದೆ ಎಂಬ ಬಗ್ಗೆ ಮಾಹಿತಿಗಳು ದೊರಕಿದೆ.

Most Read Articles

Kannada
English summary
2016 Toyota Fortuner Imported to India For Research & Development. This 2016 Toyota Fortuner Car is expected to be launched at the Delhi Auto Expo.
Story first published: Wednesday, October 21, 2015, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X