ಬಸ್, ಟ್ರಕ್ ಗಳಿಗೆ ಎಬಿಎಸ್ ಕಡ್ಡಾಯ; ಏನಿದರ ಮಹತ್ವ?

By Nagaraja

2015-16ನೇ ಸಾಲಿನ ಹೊಸ ಆರ್ಥಿಕ ಸಾಲು 2015 ಎಪ್ರಿಲ್ 01ಕ್ಕೆ ಜಾರಿಗೆ ಬಂದಿರುವಂತೆಯೇ ಹೊಸ ನಿಯಮವನ್ನು ಪ್ರಕಟಿಸಿರುವ ಕೇಂದ್ರ ಸರಕಾರ, ಬಸ್ ಮತ್ತು ಟ್ರಕ್ ಸೇರಿದ ಎಲ್ಲ ವಾಣಿಜ್ಯ ವಾಹನಗಳಿಗೂ ಆ್ಯಂಟಿ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಕಡ್ಡಾಯಗೊಳಿಸಿದೆ.

ಅಂದರೆ ಎಪ್ರಿಲ್ 01ರಿಂದ ನಿರ್ಮಾಣವಾಗಲಿರುವ ಎಲ್ಲ ವಾಣಿಜ್ಯ ವಾಹನಗಳಲ್ಲಿ ಎಬಿಎಸ್ ಕಡ್ಡಾಯವಾಗಿ ಆಳವಡಿಸಬೇಕಾಗುತ್ತದೆ. 2016ರ ಬಳಿಕ 40ರಿಂದ 49 ಟನ್ ಹೊತ್ತುಕೊಂಡು ಸಾಗಬಲ್ಲ ಟ್ರ್ಯಾಕ್ಟರ್ ಗಳಿಗೂ ಇದು ಕಡ್ಡಾಯವಾಗಲಿದೆ. ಅಷ್ಟಕ್ಕೂ ಎಬಿಎಸ್ ಮಹತ್ವವೇನು? ಮುಂದಕ್ಕೆ ಓದಿರಿ...

ಎಬಿಎಸ್ ಎಂದರೇನು?

ಎಬಿಎಸ್ ಎಂದರೇನು?

ಎಬಿಎಸ್ ಪೂರ್ಣ ರೂಪ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ.

ಎಬಿಎಸ್ ಹೇಗೆ ಕೆಲಸ ಮಾಡುತ್ತದೆ?

ಎಬಿಎಸ್ ಹೇಗೆ ಕೆಲಸ ಮಾಡುತ್ತದೆ?

ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಸ್ವಯಂಚಾಲಿತ ಬ್ರೇಕಿಂಗ್ ತಂತ್ರಜ್ಞಾನವನ್ನು ಕಂಡುಹುಡುಕಿದ್ದಾರೆ. ಇದರಂತೆ ಬ್ರೇಕ್ ಅದುಮಿದ ಸಂದರ್ಭದಲ್ಲಿ ಚಕ್ರ ಹಠಾತ್ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರಿಗೆ ಗಾಡಿಯ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ.

ಬೆಲೆ ದುಬಾರಿ

ಬೆಲೆ ದುಬಾರಿ

ತಾಂತ್ರಿಕ ವಿಶ್ಲೇಷಕರ ಪ್ರಕಾರ ಎಬಿಎಸ್ ಆಳವಡಿಕೆ ಮಾದರಿಯಿಂದ ಮಾದರಿಗೆ ಭಿನ್ನವಾಗಿರಲಿದ್ದು, 50,000 ರು.ಗಳಿಂದ 75,000 ರು.ಗಳಷ್ಟು ದುಬಾರಿಯೆನಿಸಲಿದೆ. ಅಂದರೆ ಈ ಸುರಕ್ಷಾ ವೈಶಿಷ್ಟ್ಯಕ್ಕಾಗಿ ಗ್ರಾಹಕರು ಸರಿ ಸುಮಾರು ಒಂದು ಲಕ್ಷ ರು.ಗಳಷ್ಟು ಹೆಚ್ಚುವರಿ ದುಡ್ಡು ಪಾವತಿಸಬೇಕಾಗುತ್ತದೆ.

125 ಸಿಸಿ ಬೈಕ್‌ಗಳಿಗೂ ಎಬಿಎಸ್ ಕಡ್ಡಾಯ?

125 ಸಿಸಿ ಬೈಕ್‌ಗಳಿಗೂ ಎಬಿಎಸ್ ಕಡ್ಡಾಯ?

ಭಾರತದ ಸಾರಿಗೆ ಅಧಿಕಾರಿಗಳು ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಿದ್ದಾರೆ. ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಇದರಿಂದ ಬೈಕ್ ಕೂಡಾ ದುಬಾರಿಯಾಗಲಿದೆ.

ಎಬಿಎಸ್ ತಂತ್ರಜ್ಞಾನದ ಉಗಮ

ಎಬಿಎಸ್ ತಂತ್ರಜ್ಞಾನದ ಉಗಮ

1929ನೇ ಇಸವಿಯಲ್ಲಿ ಫ್ರಾನ್ಸ್ ಮೂಲದ ಆಟೋಮೊಬೈಲ್ ಹಾಗೂ ವಿಮಾನಯಾನ ಪ್ರವರ್ತಕ ಗ್ಯಾಬ್ರಿಯಲ್ ವಾಯ್ ಸಿನ್ ಎಂಬವರು ಮೊದಲ ಬಾರಿಗೆ ವಿಮಾನಗಳಿಗಾಗಿ ಎಬಿಎಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು.

ಎಬಿಎಸ್ ತಂತ್ರಜ್ಞಾನ - ವೀಡಿಯೋ ವೀಕ್ಷಿಸಿ

Most Read Articles

Kannada
English summary
ABS becomes mandatory for all commercial vehicles (Bus & Trucks)
Story first published: Wednesday, April 1, 2015, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X