ಜಿನೆವಾಗಿಂತಲೂ ಮುಂಚಿತವಾಗಿ ಆಸ್ಟನ್ ಮಾರ್ಟಿನ್ ವೋಲ್ಕನ್ ಅನಾವರಣ

By Nagaraja

ಈಗಷ್ಟೇ ರೋಚಕ ವೀಡಿಯೋವೊಂದರ ಮೂಲಕ ವಾಹನ ಉತ್ಸಾಹಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಬ್ರಿಟನ್‌ನ ಅತಿ ಪುರಾತನ ಕಾರು ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್, ಈಗ ಜಿನೆವಾ ಪ್ರದರ್ಶನಕ್ಕೂ ಮುಂಚಿತವಾಗಿ ಎಲ್ಲ ಹೊಸತನದಿಂದ ಕೂಡಿರುವ ವೋಲ್ಕನ್ ಮಾದರಿಯನ್ನು ಅನಾವರಣಗೊಳಿಸಿದೆ.

ನಿಮ್ಮ ಮಾಹಿತಿಗಾಗಿ, ರೋಮನ್ ಅಗ್ನಿ ದೇವತೆಯಿಂದ ಸ್ಪೂರ್ತಿ ಪಡೆದಿರುವ ಆಸ್ಟನ್ ಮಾರ್ಟಿನ್ ವೋಲ್ಕನ್ 7.0 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಅಲ್ಲದೆ ಗರಿಷ್ಠ 800ಗಿಂತಲೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

aston martin vulcan

ಆಸ್ಟನ್ ಮಾರ್ಟಿನ್ ವೋಲ್ಕನ್ ನಿರ್ಮಾಣದಲ್ಲಿ ಕಾರ್ಬನ್ ಫೈಬರ್ ಬಳಕೆ ಮಾಡಲಾಗಿದ್ದು, ತೂಕ ಗಣನೀಯವಾಗಿ ಇಳಿಕೆ ಮಾಡಲು ಸಹಕಾರಿಯಾಗಿದೆ. ಈ ಮೂಲಕ ಗರಿಷ್ಠ ನಿರ್ವಹಣೆಯನ್ನು ಕಾಪಾಡಿಕೊಳ್ಳಲಾಗಿದೆ.
aston martin vulcan

ಹಾಗಿದ್ದರೂ ಆಸ್ಟನ್ ಮಾರ್ಟಿನ್ ವೋಲ್ಕನ್ ಸೀಮಿತ 24 ಯುನಿಟ್‌ಗಳಷ್ಟೇ ಉತ್ಪಾದನೆಯಾಗಲಿದೆ. ಇದು ನಿಜವಾಗ್ಲೂ ಬೇಸರ ತರಿಸಿದರೂ ಈ ಮೂಲಕ ಬ್ರಿಟನ್‌ನ ಈ ಐಕಾನಿಕ್ ಸಂಸ್ಥೆಯು ಬೇಡಿಕೆ ಕಾಯ್ದುಕೊಳ್ಳುವ ಇರಾದೆಯಲ್ಲಿದೆ.
aston martin vulcan

ಅಂದ ಹಾಗೆ ಆಸ್ಟನ್ ಮಾರ್ಟಿನ್ ವೋಲ್ಕನ್ 2015 ಜಿನೆವಾರ ಮೋಟಾರು ಶೋದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಇದು ಪುಶ್‌ರೊಡ್ ಸಸ್ಪೆನ್ಷನ್, ಆ್ಯಂಟಿ ರೋಲ್ ಬಾರ್, ಸಿಕ್ಸ್ ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್, ಕಾರ್ಬನ್ ಸೆರಮಿಕ್ಸ್ ಡಿಸ್ಕ್, ಹೊಂದಾಣಿಕಯ ಆ್ಯಂಟಿ ಲಾಕ್ ಬ್ರೇಕ್, ಬ್ರೆಂಬೊ ಕ್ಯಾಲಿಪರ್, ಟ್ರಾಕ್ಷನ್ ಕಂಟ್ರೋಲ್ ಹಾಗೂ 19 ಇಂಚಿನ ಚಕ್ರಗಳನ್ನು ಪಡೆಯಲಿದೆ.
Most Read Articles

Kannada
English summary
Aston Martin, after teasing the world with the the new car, the company thought it would be a good idea to reveal a few facts about the Aston Martin Vulcan.
Story first published: Wednesday, February 25, 2015, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X