ಆಡಿ ಎ3 40 ಟಿಎಫ್‌ಎಸ್‌ಐ ಪ್ರೀಮಿಯಂ ಕಾರು ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿ ಹೊಸತಾದ ಎ3 40 ಟಿಎಎಫ್‌ಎಸ್‌ಐ ಪ್ರೀಮಿಯಂ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಐಷಾರಾಮಿ ಗ್ರಾಹಕರನ್ನು ಕೈಗೆಟಕುವ ಬೆಲೆಗಳಲ್ಲಿ ತಲುಪಲಿದೆ.

ಬೆಲೆ ಮಾಹಿತಿ: 25.5 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

30.2 ಲಕ್ಷ ರುಪಾಯಿಗಳಷ್ಟು ದುಬಾರಿಯಾಗಿದ್ದ ಎ3 ಪ್ರೀಮಿಯಂ ಪ್ಲಸ್ ಮಾರಾಟನವನ್ನು ನಿಲುಗಡೆಗೊಳಿಸಲಾಗಿದ್ದು ಇದರ ಸ್ಥಾನವನ್ನು ಹೊಸ ಮಾದರಿ ತುಂಬಲಿದೆ. ಸಹಜವಾಗಿಯೇ ಹೊಸ ಮಾದರಿಯಲ್ಲಿ ಕೆಲವೊಂದು ವೈಶಿಷ್ಟ್ಯಗಳ ಅಭಾವ ಕಂಡುಬರಲಿದೆ.

ಆಡಿ ಎ3 40 ಟಿಎಫ್‌ಎಸ್ಐ

ಅಂದರೆ 17 ಇಂಚುಗಳ ಬದಲಾಗಿ 16 ಇಂಚುಗಳ ಅಲಾಯ್ ವೀಲ್, ಕ್ಸೆನಾನ್ ಸ್ಥಾನದಲ್ಲಿ ಹ್ಯಾಲೊಗನ್ ಹೆಡ್ ಲ್ಯಾಂಪ್, ಡಿಸ್ ಪ್ಲೇ ಬದಲು ರಿಯರ್ ಪಾರ್ಕಿಂಗ್ ಸೆನ್ಸಾರ್ ನಲ್ಲಿ ಆಡಿಯೋ ಎಚ್ಚರಿಕೆ ಮಾತ್ರ ಕಂಡುಬರಲಿದೆ. ಅಲ್ಲದೆ ರಿಯರ್ ಸೆನ್ಸಾರ್‌, ಫಾಗ್ ಲ್ಯಾಂಪ್ ಮತ್ತು ಚಕ್ರದೊತ್ತಡ ಪರಿಶೀಲನೆ ವ್ಯವಸ್ಥೆಗೂ ಕತ್ತರಿ ಪ್ರಯೋಗ ಮಾಡಲಾಗಿದೆ.

ನೂತನ ಆಡಿ ಎ3 177 ಅಶ್ವಶಕ್ತಿ ಉತ್ಪಾದಿಸಬಲ್ಲ 1.8 ಲೀಟರ್ ಟಿಎಫ್‌ಎಸ್‌ಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಸೆವೆನ್ ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇರಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 16.6 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ.

Most Read Articles

Kannada
Read more on ಆಡಿ audi
English summary
Audi A3 40 TFSI Petrol Variant Launched In India At INR 25,50,000
Story first published: Friday, September 4, 2015, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X