ಭಾರತಕ್ಕೂ ಬರಲಿದೆ ಆಡಿ ಎ4; ಹೇಗಿದೆ ಗೊತ್ತಾ?

By Nagaraja

ಸದಾ ಹೊಸತನವನ್ನುಂಟು ಮಾಡುವ ವಾಹನ ತಯಾರಿಕ ಸಂಸ್ಥೆಗಳಲ್ಲಿ ಆಡಿ ಒಂದಾಗಿದೆ. ಜರ್ಮನಿಯ ಮೂರು ಹೆಸರಾಂತ ಐಷಾರಾಮಿ ಕಾರು ತಯಾರಿಕ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಆಡಿ ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ಹೆಚ್ಚು ಹೆಸರು ಮಾಡಿದೆ.

ಪ್ರಸ್ತುತ ಸಂಸ್ಥೆಯೀಗ ಎ4 ಸೆಡಾನ್ ಕಾರನ್ನು ಅನಾವರಣಗೊಳಿಸಿದೆ. ವಿಶೇಷವೆಂದರೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈಯಲಿರುವ ಆಡಿ ಎ4 ಭಾರತಕ್ಕೂ ಪ್ರವೇಶಿಸಲಿದೆ. ಅಷ್ಟಕ್ಕೂ ಹೊಸ ಆಡಿ4 ಕಾರಿನಲ್ಲಿರುವ ವಿಶೇಷತೆಗಳೇನು ಹೇಳಬಲ್ಲೀರಾ?

ಅಂದತೆಯ ಪ್ರತೀಕ ಆಡಿ ಎ4

ಭಾರತದಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ದಲ್ಲಿ ಆಡಿ ಎ4 ಸೆಡಾನ್ ಕಾರು ಪ್ರದರ್ಶನ ಕಾಣುವ ಸಾಧ್ಯತೆ ಹೆಚ್ಚಾಗಿದೆ. ತದಾ ಬಳಿಕ ಸೂಕ್ತ ಸಮಯದಲ್ಲಿ ಬಿಡುಗಡೆ ಭಾಗ್ಯವನ್ನು ಪಡೆಯಲಿದೆ.

ಅಂದತೆಯ ಪ್ರತೀಕ ಆಡಿ ಎ4

ದಿಟ್ಟವಾದ ಸಿಂಗಲ್ ಫ್ರೇಮ್ ಗ್ರಿಲ್ ನೋಟದತ್ತ ಆಡಿ ಎಂಜಿನಿಯರ್ ಗಳು ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಹೆಡ್ ಲೈಟ್ ಪರಿಷ್ಕೃತಗೊಳಿಸಲಾಗಿದ್ದು, ಎಲ್ ಇಡಿ ಡೇಟೈಮ್ ಬೆಳಕಿನ ಸೇವೆಯು ಕಾರಿಗೆ ಆಧುನಿಕ ಸ್ಪರ್ಶ ನೀಡುತ್ತಿದೆ.

ಅಂದತೆಯ ಪ್ರತೀಕ ಆಡಿ ಎ4

ಬದಿಯಿಂದ ನೋಡಿದಾಗ ಹೆಚ್ಚು ಕ್ರೀಡಾತ್ಮಕ ಕಾರಿನ ಅನುಭವವನ್ನುಂಟು ಮಾಡುತ್ತಿದೆ. ಇದರ ಸ್ಟೈಲಿಷ್ ಅಲಾಯ್ ವೀಲ್ ಗಳು ಉರುಳುವಾಗ ಕಾರಿನ ಅಂದತೆಯನ್ನು ಇಮ್ಮಡಿಗೊಳಿಸುತ್ತಿದೆ.

ಅಂದತೆಯ ಪ್ರತೀಕ ಆಡಿ ಎ4

ಹಿಂದುಗಡೆ ಮೊನಚಾದ ಟೈಲ್ ಲ್ಯಾಂಪ್ ಕೊಡಲಾಗಿದೆ. ಅಂತೆಯೇ ಡ್ಯುಯಲ್ ಎಕ್ಸಾಸ್ಟ್ ಕೊಳವೆಗಳು ಎರಡು ಬದಿಗಳನ್ನು ಪ್ರತ್ಯೇಕಿಸುತ್ತಿದೆ. ಮೇಲ್ಗಡೆ ಏರೋಡೈನಾಮಿಕ್ ವಿನ್ಯಾಸ ಸಂಕೇತವನ್ನು ಕಾಣಬಹುದಾಗಿದೆ.

ಅಂದತೆಯ ಪ್ರತೀಕ ಆಡಿ ಎ4

ಕಾರಿನೊಳಗೂ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಎಲ್ಲ ಹೊಸತನದಿಂದ ಕೂಡಿರುವ ಆಡಿ ಎ4 ಸೆಡಾನ್ ಕಾರಿನಲ್ಲಿ ಬೀಜ್ ಹಾಗೂ ಕಪ್ಪು ವರ್ಣದ ಒಳಮೈ ಜೊತೆಗೆ ವುಡನ್ ಸ್ಪರ್ಶತೆಯನ್ನು ಕೊಡಲಾಗಿದೆ. ಇದರ ಮಾಹಿತಿ ಮನರಂಜನಾ ಸೇವೆಯು ಪರಿಪೂರ್ಣ ಚಾಲನಾ ಅನುಭವ ಪ್ರದಾನ ಮಾಡಲಿದೆ.

ಅಂದತೆಯ ಪ್ರತೀಕ ಆಡಿ ಎ4

ಇಲ್ಲಿದೆ ಆಡಿ ಎ4 ಪ್ರಾಥಮಿಕ ರೇಖಾ ಚಿತ್ರ. ಒಂದೇ ನೋಟದಲ್ಲಿ ನಿಮಗೆ ತೋರಿದ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
Audi has a strong line up of vehicles on offer globally, which include sedans, SUVs, station wagons, performance vehicles and much more. The German manufacturer achieves to be the best automobile maker globally.
Story first published: Monday, June 29, 2015, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X