ಮಾರುತಿ, ಮಾರುತಿ, ಬೈ ಬೈ ಮಾರುತಿ?

By Nagaraja

ನಿಮ್ಮ ನೆಚ್ಚಿನ ಕಾರು ಯಾವುದು. ನಮ್ಮ ನಿಮ್ಮೆಲ್ಲರ ಮನದಲ್ಲಿ ಮೊದಲ ಬರುವ ಉತ್ತರ 'ಮಾರುತಿ ಕಾರು'. ಆದರೂ ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಲಿಷ್ಠ ವ್ಯಾಪಾರ ವಲಯವನ್ನು ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಗತಿಯತ್ತ ದಾಪುಗಾಲನ್ನಿಡುತ್ತಿದೆಯೇ? ಹಾಗೊಂದು ಪ್ರಶ್ನೆ ಮಾಡಿದಾಗ 2015ನೇ ಸಾಲಿನಲ್ಲಿ ಮಾರುತಿಗೆ ಎದುರಾಗುತ್ತಿರುವ ಪ್ರತಿಸ್ಪರ್ಧಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗ ತೊಡಗಿದೆ.

ಅಷ್ಟಕ್ಕೂ ಮಾರುತಿ ಕಾರುಗಳಿಗೆ ಬೈ ಬೈ ಹೇಳಲು ಸಯಮವಾಯಿತೇ? ಪ್ರತಿಸ್ಪರ್ಧಿಗಳು ಹುಟ್ಟಿಸುತ್ತಿರುವ ಭೀತಿಯಾದರೂ ಏನು? ಈ ಎಲ್ಲ ಅಪಾಯಗಳನ್ನು ಎದುರಿಸಲು ಮಾರುತಿ ರೂಪಿಸುತ್ತಿರುವ ಉಪಾಯಗಳೇನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಮುಂದುವರಿಯಿರಿ...

10. ಹ್ಯುಂಡೈ ಎಲೈಟ್ ಐ20

10. ಹ್ಯುಂಡೈ ಎಲೈಟ್ ಐ20

ಹೌದು, ಮಾರುಕಟ್ಟೆಯಲ್ಲಿ ಮಾರುತಿ ಕಾರುಗಳ ಅವಕಾಶ ಕಡಿಮೆಯಾಗುತ್ತಿದೆ ಎಂಬ ಭೀತಿ ಹರಡತೊಡಗಿದೆ. ಯಾಕೆಂದರೆ ಮಾರುತಿ ಸಮಾನವಾದ ಅಥವಾ ಅದಕ್ಕಿಂತಲೂ ಗುಣಮಟ್ಟದ ಕಾರುಗಳನ್ನು ಪ್ರತಿಸ್ಪರ್ಧಿಗಳು ಕಣಕ್ಕಿಳಿಸುತ್ತಿರುವುದು ನಿಜಕ್ಕೂ ಮಾರುತಿಗೆ ಸವಾಲಾಗಿ ಪರಿಣಮಿಸುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಹ್ಯುಂಡೈ ಎಲೈಟ್ ಐ20. ಮೊದಲ ನೋಟದಲ್ಲಿ ಇದು ಮಾರುತಿಯ ಜನಪ್ರಿಯ ಸ್ವಿಫ್ಟ್ ಮಾದರಿಗೆ ಪ್ರತಿಸ್ಪರ್ಧಿ ಅಲ್ಲದಿದ್ದರೂ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ತನ್ನದೇ ಆದ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಲ್ಲದೆ ಹ್ಯುಂಡೈ ಎಲೈಟ್ ಐ20 ಪ್ರತಿ ತಿಂಗಳ ಮಾರಾಟ ಸಂಖ್ಯೆಯು ಹೆಚ್ಚುತ್ತಲೇ ಇದ್ದು, ಇದರಿಂದಾಗಿ ನಿರ್ಮಾಣ ಸಾಮರ್ಥ್ಯವನ್ನು ಏರಿಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

09. ಫೋರ್ಡ್ ಫಿಗೊ - ಹೊಸ ಹ್ಯಾಚ್ ಬ್ಯಾಕ್

09. ಫೋರ್ಡ್ ಫಿಗೊ - ಹೊಸ ಹ್ಯಾಚ್ ಬ್ಯಾಕ್

ಕೆಲವು ಸಮಯಗಳ ಹಿಂದೆಯಷ್ಟೇ ಮಾರುತಿ ಸ್ವಿಫ್ಟ್ ಹೊಸ ಸ್ವರೂಪವನ್ನು ಪಡೆದುಕೊಂಡಿತ್ತು. ಆದರೆ ಬದಲಾವಣೆ ಇಷ್ಟಪಡುವ ಗ್ರಾಹಕರಿಗೆ ಹೊಸ ಸ್ವಿಫ್ಟ್ ಹೇಳುವಂಥದ್ದೇನು ವೈಶಿಷ್ಟ್ಯಗಳು ದೊರಕಲಿಲ್ಲ. ಹಾಗೇ ಇರಬೇಕಾದರೆ ಹೊಸತನವನ್ನು ಇಷ್ಟಪಡುವ ಗ್ರಾಹಕರನ್ನು ಗುರಿಯಿರಿಸಿಕೊಂಡು ಫೋರ್ಡ್ ಸಂಸ್ಥೆಯು ಹೊಸ ಫಿಗೊ ಹ್ಯಾಚ್ ಬ್ಯಾಕ್ ಕಾರನ್ನು ಹೊರತರಲು ಸಜ್ಜಾಗುತ್ತಿದೆ.

08. ಹೋಂಡಾ ಜಾಝ್

08. ಹೋಂಡಾ ಜಾಝ್

ಬಹುನಿರೀಕ್ಷಿತ ಹೋಂಡಾ ಜಾಝ್ ಪ್ರವೇಶ ವಿಬಂಳವಾಗಿರಬಹುದು. ಆದರೆ ಒಂದು ವಿಭಾಗದ ಗ್ರಾಹಕರಂತೂ ಜಾಝ್ ಪ್ರವೇಶವನ್ನು ಕಾತರದಿಂದ ಕಾಯುತ್ತಿದ್ದಾರೆ. ಇಲ್ಲಿ ನಿರ್ಣಾಯಕ ಅಂಶವೆಂದರೆ ಈ ವಿಭಾಗದಲ್ಲಿ ಮಾರುತಿ ಬಳಿ ಪ್ರತಿಸ್ಪರ್ಧಿಯೇ ಇಲ್ಲ. ನೂತನ ವೈಆರ್ ಎ ಮಾದರಿಯನ್ನು ಸಂಸ್ಥೆಯು ಸಿದ್ಧಪಡಿಸುತ್ತಿದ್ದು, ಇದರ ಪ್ರವೇಶದ ವೇಳೆ ಕಾಲ ಮಿಂಚಿತೇ ಎಂಬ ಶಂಕೆ ಕಾಡುತ್ತಿದೆ.

07. ಫೋರ್ಡ್ ಆಸ್ಪೈರ್

07. ಫೋರ್ಡ್ ಆಸ್ಪೈರ್

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಪ್ರತಿ ತಿಂಗಳು 16,000 ಯುನಿಟ್ ಗಳಷ್ಟು ಮಾರಾಟ ಸ್ಥಿರತೆಯನ್ನು ಕಾಯ್ದುಕೊಂಡಿರುವ ಮಾರುತಿ ಸುಜುಕಿಗೆ ಇನ್ನಷ್ಟೇ ಆಗಮನಬೇಕಾಗಿರುವ ಫೋರ್ಡ್ ಆಸ್ಪೈರ್ ಹೇಗೆ ಪ್ರತಿಸ್ಪರ್ಧಿಯಾದಿತು? ಎಂಬ ಪ್ರಶ್ನೆ ಮೂಡಬಹುದು. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಮಾರುತಿ ಮಾರಾಟ ಸ್ಥಿರತೆಯ ಬಗ್ಗೆ ನಾವು ಪ್ರಶ್ನೆ ಎತ್ತುತ್ತಿಲ್ಲ? ಆದರೆ ಇಲ್ಲಿ ಮಾರುತಿ ಪ್ರಗತಿ ಸಾಧಿಸುತ್ತಿದೆಯೇ ಎಂಬುದು ಆಂತಕಕ್ಕೆ ಕಾರಣವಾಗಿದೆ.

06. ಕ್ರಾಸೋವರ್

06. ಕ್ರಾಸೋವರ್

ಕ್ರಾಸೋವರ್ ಎಂಬ ನೂತನ ವಿಭಾಗದಲ್ಲಿ ಈಗಾಗಲೇ ಹ್ಯುಂಡೈ ಐ20 ಆಕ್ಟಿವ್ ಸೇರಿದಂತೆ ನಾಲ್ಕು ಮಾದರಿಗಳ ಪ್ರವೇಶವಾಗಿದೆ. ಆದರೆ ಬೇಸರದ ಸಂಗತಿಯೆಂಬಂತೆ ಮಾರುತಿ ಈ ವಿಭಾಗಕ್ಕೆ ಇನ್ನುಎಂಟ್ರಿಯೇ ಕೊಟ್ಟಿಲ್ಲ. ಪ್ರಸ್ತುತ ಕ್ರಾಸೋವರ್ ವಿಭಾಗದಲ್ಲಿ ಮಾರಾಟ ಕುಂಠಿತವಾಗಿರಬಹುದು. ಆದರೆ ಇಂತಹ ಚಿಕ್ಕ ಚಿಕ್ಕ ವಿಚಾರಗಳು ಮುಂದಿನ ದಿನಗಳಲ್ಲಿ ಮಾರುತಿಗೆ ದುಪ್ಷಾರಿಣಾಮ ಬೀರಿತೇ? ಎಂಬುದು ಚರ್ಚೆಯ ವಿಷಯ.

05. ನ್ಯಾನೋ ಎಎಂಟಿ

05. ನ್ಯಾನೋ ಎಎಂಟಿ

ನಿಕಟ ಭವಿಷ್ಯದಲ್ಲೇ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ಅಗ್ಗದ ನ್ಯಾನೋ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಬಿಡುಗಡೆ ಮಾಡಲಿದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೊ ಕೆ10 ಎಎಂಟಿ ಮಾದರಿಗೆ ಹೋಲಿಸಿದಾಗ ಸರಿ ಸುಮಾರು ಒಂದು ಲಕ್ಷ ರು.ಗಳಷ್ಟು ಅಗ್ಗವೆನಿಸಿರುವ ನ್ಯಾನೋ ಎಎಂಟಿ ಗ್ರಾಹಕರ ನೆಚ್ಚಿನ ಕಾರೆನಿಸಿಕೊಳ್ಳುವ ಸಾಧ್ಯತೆಯಿದೆ.

04. ರೆನೊ ಲೊಡ್ಜಿ

04. ರೆನೊ ಲೊಡ್ಜಿ

ಬಹು ಬಳಕೆಯ ವಾಹನದ ವಿಭಾಗದಲ್ಲಿ ಹೆಚ್ಚು ಸ್ಥಳಾವಕಾಶಯುಕ್ತ ರೆನೊ ಲೊಡ್ಜಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ವಿಭಾಗದಲ್ಲಿ ಮಾರುತಿ ಎರ್ಟಿಗಾ ತೃಪ್ತಿದಾಯಕ ಮಾರಾಟವನ್ನು ಕಾಯ್ದುಕೊಳ್ಳುತ್ತಿದ್ದರೂ ಸಹ ಪ್ರಗತಿ ಇನ್ನು ನಿಶ್ಚಲವಾಗಿದೆ.

 03. ಕಾಂಪಾಕ್ಟ್ ಎಸ್ ಯುವಿ

03. ಕಾಂಪಾಕ್ಟ್ ಎಸ್ ಯುವಿ

ಸದಾ ಸಣ್ಣ ಕಾರುಗಳತ್ತ ಗಮನ ಕೇಂದ್ರಿಕರಿಸಿರುವ ಮಾರುತಿ ಸುಜುಕಿಯ ಬಳಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವೇ ಇಲ್ಲ. ಇನ್ನೊಂದೆಡೆ ಗ್ರಾಹಕರು ನಿಧಾನವಾಗಿ ಸಣ್ಣ ಕಾರುಗಳಿಂದ ಹೆಚ್ಚಿನ ಸೌಲಭ್ಯಗಳಿರುವ ಕಾಂಪಾಕ್ಟ್ ಎಸ್ ಯುವಿಗಳಂತಹ ದೊಡ್ಡ ಕಾರುಗಳತ್ತ ವಾಲುತ್ತಿರುವುದು ಅಧ್ಯಯನ ವರದಿಯಿಂದಲೇ ಬಯಲಾಗುತ್ತದೆ. ಈ ವಿಭಾಗದಲ್ಲಿ ಹ್ಯುಂಡೈ ತನ್ನ ಮಾದರಿಯನ್ನು ಸಿದ್ಧಪಡಿಸುತ್ತಿದ್ದು, ಐಎಕ್ಸ್25 ಬಹುಬೇಗನೇ ಬಿಡುಗಡೆಯಾಗಲಿದೆ. ಆದರೆ ಮಾರುತಿ ನಿರೀಕ್ಷಿತ ಕಾಂಪಾಕ್ಟ್ ಎಸ್ ಯುವಿ ಈಗಲೂ ಮೀನಾಮೇಷ ಎದುರಿಸುತ್ತಿದೆ.

 02. ಮಾರಾಟ ಸ್ಥಿರ

02. ಮಾರಾಟ ಸ್ಥಿರ

ಇತರ ವಾಹನ ತಯಾರಿಕ ಸಂಸ್ಥೆಗಳನ್ನು ತುಲನೆ ಮಾಡಿದಾಗ ಮಾರುತಿ ಮಾರಾಟ ಸಂಖ್ಯೆ ಸ್ಥಿರವಾಗಿಯೇ ಇದೆ. ಆದರೆ ಪ್ರಗತಿ ಮಾತ್ರ ಕುಂಠಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಸ್ವಲ್ಪ ಸ್ವಲ್ಪ ನಷ್ಟಕ್ಕೆ ಗುರಿಯಾಗುತ್ತಿರುವ ಮಾರುತಿ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ಕಟ್ಟಾಬೇಕಾದಿತೇ? ಎಂಬುದು ಭೀತಿಗೆ ಕಾರಣವಾಗಿದೆ.

01. ಉಪಾಯ ಏನು?

01. ಉಪಾಯ ಏನು?

ಈ ಎಲ್ಲ ಅಪಾಯಗಳನ್ನು ಎದುರಿಸಲು ಮಾರುತಿ ಉಪಾಯವೇನು? ಇದಕ್ಕಿರುವ ಸದ್ಯದ ಉತ್ತರ ಇನ್ನಷ್ಟೇ ಆಗಮನಬೇಕಾಗಿರುವ ಸೆಲೆರಿಯೊ ಡೀಸೆಲ್, ಮಾರುತಿ ಎಕ್ಸ್ ಎ ಆಲ್ಪಾ, ಮಾರುತಿ ಎಸ್ ಎಕ್ಸ್4 ಎಸ್ ಕ್ರಾಸ್, ಹೊಸ ಎರ್ಟಿಗಾ, ಹೊಸ ವೈಆರ್ ಎ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ನೂತನ ಕಾಂಪಾಕ್ಟ್ ಎಸ್ ಯುವಿ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Biggest Threats To Maruti Cars In 2015
Story first published: Monday, March 23, 2015, 11:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X