ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಭಾರತದಲ್ಲಿ ಹೊಚ್ಚ ಹೊಸ ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಕಾರನ್ನು ಬಿಡುಗಡೆಗೊಳಿಸಿದೆ. ಇದು ತನ್ನ ನಿಕಟ ಪ್ರತಿಸ್ಪರ್ಧಿಗಳಾದ ಮರ್ಸಿಡಿಸ್ ಬೆಂಝ್ ಸಿಎಲ್ ಎಸ್ ಕೂಪೆ ಹಾಗೂ ಆಡಿ ಎ7 ಸವಾಲನ್ನು ಎದುರಿಸಲಿದೆ.

'ಇಂಡಿಯನ್ ಬ್ರೈಡಲ್ ವೀಕ್ 2015' ಅದ್ದೂರಿ ಸಮಾರಂಭದ ವೇಳೆ ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಭರ್ಜರಿ ಪ್ರವೇಶ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ನಟಿ ಸೋನಾಕ್ಷಿ ಸಿಖ್ಹಾ ಸೇರಿದಂತೆ ರೂಪದರ್ಶಿಗಳು ಪ್ರಮುಖ ಆಕರ್ಷಣೆಯಾಗಿದ್ದರು.

ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಬಿಡುಗಡೆ

2015 ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಕಾರು ಹಲವಾರು ವಿನ್ಯಾಸ ಹಾಗೂ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಮಾತ್ರ ಯಾವುದೇ ಬದಲಾವಣೆ ತರಲಾಗಿಲ್ಲ.

ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಬಿಡುಗಡೆ

ಹೊಸತಾದ ಕಿಡ್ನಿ ಗ್ರಿಲ್, ಪರಿಷ್ಕೃತ ಬಂಪರ್, ಹೊಸ ಅಲಾಯ್ ವೀಲ್, ಎಲ್ ಇಡಿ ಮಲ್ಟಿ ಬೀಮ್ ಲ್ಯಾಂಪ್, ಡ್ಯುಯಲ್ ಟೋನ್ ಲೆಥರ್ ಹೋದಿಕೆ ಹಾಗೂ ಹೆಡ್ ಅಪ್ ಡಿಸ್ ಪ್ಲೇ ಹೊಸ ಕಾರಿನ ಪ್ರಮುಖ ವಿಶಿಷ್ಟತೆಯಾಗಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಎಮಿನೆನ್ಸ್ ಟ್ರಿಮ್: 1.14 ಕೋಟಿ ರು.

ಡಿಸೈನ್ ಪ್ಯೂರ್: 1.21 ಕೋಟಿ ರು.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್, ಟ್ವಿನ್ ಟರ್ಬೊ, ಡೀಸೆಲ್,

313 ಅಶ್ವಶಕ್ತಿ,

630 ತಿರುಗುಬಲ

8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ವಿಶೇಷತೆ

ವಿಶೇಷತೆ

ಅಡಾಪ್ಟಿವ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,

ಕ್ರೀಡಾತ್ಮಕ 19 ಇಂಚುಗಳ ಮಲ್ಟಿ ಸ್ಪೋಕ್ ಅಲಾಯ್ ವೀಲ್ಸ್,

ಏರೋಡೈನಾಮಿಕ್ ಸೈಡ್ ಮಿರರ್ ಜೊತೆ ಇಂಟೇಗ್ರೇಟಡ್ ಇಂಡಿಕೇಟರ್,

ಎಲ್ ಇಡಿ ಫಾಗ್ ಲೈಟ್ಸ್.

ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಬಿಡುಗಡೆ

ನೂತನ ಬಿಎಂಡಬ್ಲ್ಯು 6 ಸಿರೀಸ್ ಗ್ರ್ಯಾನ್ ಕೂಪೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತದವನ್ನು ತಲುಪಲಿದ್ದು, ಕೇವಲ 5.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.

ಆಯಾಮ

ಆಯಾಮ

ಉದ್ದ - 5007 ಎಂಎಂ

ಅಗಲ - 1894 ಎಂಎಂ

ಎತ್ತರ - 1393 ಎಂಎಂ

Most Read Articles

Kannada
English summary
BMW has launched the facelifted model of the 6 Series Gran Coupe in India today. This new 6 Series Gran Coupe from BMW will take on its fellow rivals Audi A7 and Mercedes Benz CLS coupe.
Story first published: Friday, May 29, 2015, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X