ಬಿಎಂಡಬ್ಲ್ಯು ಶಕ್ತಿಶಾಲಿ ಕಾರುಗಳು ಬಿಡುಗಡೆಗೆ ಸಜ್ಜು

By Nagaraja

ಈಗಷ್ಟೇ ಕೋಟಿ ಬೆಲೆ ಬಾಳುವ ಎಂ6 ಗ್ರ್ಯಾನ್ ಕೂಪೆ ಕಾರನ್ನು ದೇಶಕ್ಕೆ ಪರಿಚಯಿಸಿರುವ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಬಿಎಂಡಬ್ಲ್ಯು ಇದೇ ಮುಂಬರುವ 2015 ಅಕ್ಟೋಬರ್ 15ರಂದು ಮತ್ತೆರಡು ಪ್ರೀಮಿಯಂ ಮಾದರಿಗಳನ್ನು ದೇಶಕ್ಕೆ ಪರಿಚಯಿಸುತ್ತಿದೆ. ಅದುವೇ,

  • ಬಿಎಂಡಬ್ಲ್ಯು ಎಕ್ಸ್5 ಎಂ
  • ಬಿಎಂಡಬ್ಲ್ಯು ಎಕ್ಸ್6 ಎಂ

ನಿಮಗಿದು ಗೊತ್ತೇ?
ಇಲ್ಲಿ ಬಿಎಂಡಬ್ಲ್ಯು 'ಎಂ' ಎಂಬುದು ಗರಿಷ್ಠ ನಿರ್ವಹಣೆಯ ಮೋಟಾರು ಸ್ಪೋರ್ಟ್ ವಿಭಾಗವನ್ನು ಸೂಚಿಸುತ್ತದೆ. ಅಂದರೆ ಗಲಿಬಿಲಿಗೊಳ್ಳಬೇಕೇ? ಮತ್ತೆರಡು ಗರಿಷ್ಠ ನಿರ್ವಹಣೆ ಕಾರುಗಳು ಭಾರತ ಮಾರುಕಟ್ಟೆ ಪ್ರವೇಶಿಸಲು ವೇದಿಕೆ ಸಜ್ಜುಗೊಂಡಿದ್ದು, ಪ್ರೀಮಿಯಂ ಕಾರು ಖರೀದಿಗಾರರಿಗೆ ತಾಜಾ ಅನುಭವ ನೀಡಲಿದೆ.

ಬಿಎಂಡಬ್ಲ್ಯು ಎಕ್ಸ್5 ಎಂ

ಪ್ರಸ್ತುತ ಎಂ3, ಎಂ4, ಎಂ5 ಮತ್ತು ಎಂ6 ಗ್ರ್ಯಾನ್ ಕೂಪೆ ಮಾದರಿಗಳು ದೇಶದಲ್ಲಿ ಮಾರಾಟದಲ್ಲಿದೆ. ಇದಕ್ಕೀಗ ಮತ್ತೆರಡು ಹೊಚ್ಚ ಹೊಸ ಮಾದರಿಗಳು ಸೇರ್ಪಡೆಯಾಗಲಿದೆ.

ನಿಮ್ಮ ಮಾಹಿತಿಗಾಗಿ, ಈಗ ಮಾರಾಟದಲ್ಲಿರುವ ಎಕ್ಸ್5 ಕ್ರೀಡಾ ಬಳಕೆಯ ತಳಹದಿಯಲ್ಲಿ ಎಕ್ಸ್5 ಎಂ ನಿರ್ಮಾಣಗೊಂಡಿದೆ. ಇನ್ನೊಂದೆಡೆ ಎಕ್ಸ್6ಎಂ ಮಾದರಿಯು ಎಕ್ಸ್6 ತಳಹದಿಯಲ್ಲಿ ಅಭಿವೃದ್ಧಿಗೊಂಡಿದೆ.

ಬಿಎಂಡಬ್ಲ್ಯು ಎಕ್ಸ್6 ಎಂ

ಇವೆರಡು ಹೈ ಪರ್ಫಮೆನ್ಸ್ ಕಾರುಗಳು 4.4 ಲೀಟರ್ ಟ್ವಿನ್ ಟರ್ಬೊ ಎಂಟು ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 750 ಎನ್ ಎಂ ತಿರುಗುಬಲದಲ್ಲಿ 567 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಎಂಟು ಸ್ಪೀಡ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಇನ್ನುಳಿದಂತೆ 21 ಇಂಚುಗಳ ಅಲಾಯ್ ವೀಲ್, ಎಂ ಕೌಂಪಡ್ ಬ್ರೇಕ್ ಕಂಡುಬರಲಿದ್ದು, 1.5ರಿಂದ 2.5 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕೂಪೆ ಮಾದರಿಗೆ ಎದುರಾಳಿಯಾಗಲಿದೆ.

Most Read Articles

Kannada
English summary
BMW X5 M And X6 M Launching In India On 15th October
Story first published: Saturday, October 3, 2015, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X