ತೆರಿಗೆ ಕಡಿಮೆ ಮಾಡಿ: ಕೇಂದ್ರಕ್ಕೆ ಬೆಂಝ್ ಬೇಡಿಕೆ

By Nagaraja

ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಕನಸಿನ ಯೋಜನೆ ಯಶಸ್ವಿಯಾಗಬೇಕಾದರೆ ಆಟೋ ವಿಭಾಗದಲ್ಲಿ ವಿಧಿಸಿರುವ ಅಸಾಮಾನ್ಯ ತೆರಿಗೆಯನ್ನು ಕೇಂದ್ರ ಸರಕಾರ ಕಡಿಮೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿದೆ ಎಂದು ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ತಿಳಿಸಿದೆ.

ಇಂತಹುದೇ ನಿಲುವು ವ್ಯಕ್ತಪಡಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, ಆಮದು ಸುಂಕವನ್ನು ಕಡಿತಗೊಳಿಸುವ ಭರವಸೆಯಿದೆ ಎಂದಿದೆ.

mercedes benz cla class

"ಪ್ರತಿಯೊಂದು ರಾಜ್ಯಗಳಲ್ಲಿ ತೆರಿಗೆ ರಚನೆ ವಿಭಿನ್ನವಾಗಿದ್ದು, ಅನೇಕ ರೀತಿಯ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಭಾರತದ್ಯಾಂತ ವ್ಯಾಪಾರ ನಡೆಸುವುದು ಬಹಳ ಕಷ್ಟವಾಗಿದೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ವ್ಯವಾಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎಬೆರ್ ಹಾರ್ಡ್ ಕೆರ್ನ್ ವಿವರಿಸಿದ್ದಾರೆ.

ಈ ನಡುವೆ ಕೇಂದ್ರ ಸರಕಾರ ಮಹತ್ತರ 'ಮೇಕ್ ಇನ್ ಇಂಡಿಯಾ'ದ ಯೋಜನೆಗೆ ಸಂಸ್ಥೆಯ ಪೂರ್ಣ ಬೆಂಬಲವಿರುವುದಾಗಿ ಅವರು ತಿಳಿಸಿದರು. ಪ್ರಸ್ತುತ ಮಹಾರಾಷ್ಟ್ರದ ಚಕನ್‌ನಲ್ಲಿ ಘಟಕವಿರುವ ಬೆಂಝ್ ವಾರ್ಷಿಕವಾಗಿ 20,000 ಯುನಿಟ್‌ಗಳ ನಿರ್ಮಾಣ ಸಾಮರ್ಥ್ಯವನ್ನು ಹೊಂದಿದೆ. ಇವೆಲ್ಲದರ ಜೊತೆಗೆ ಫ್ಲ್ಯಾಗ್‌ಶಿಪ್ ಎಸ್ ಕ್ಲಾಸ್ ಹಾಗೂ ಈಗಷ್ಟೇ ಬಿಡುಗಡೆಯಾದ ಸಿಎಲ್‌ಇ ಜೊತೆಗೆ ಆರು ಮಾದರಿಗಳನ್ನು ಜೋಡಣೆ ಮಾಡುತ್ತಿದೆ.

Most Read Articles

Kannada
English summary
Bring down the high taxation on the auto sector for 'Make in India' campaign to be successful, according to German luxury carmaker Mercedes-Benz.
Story first published: Friday, January 23, 2015, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X