ಬಜೆಟ್ 2015: ಅಬಕಾರಿ ಸುಂಕ ವಿನಾಯಿತಿಗೆ ಸಿಯಾಮ್ ಬೇಡಿಕೆ

By Nagaraja

ಮುಂಬರುವ 2015 ಕೇಂದ್ರ ಬಜೆಟ್ ವಾಹನೋದ್ಯಮದ ಪಾಲಿಗೆ ಅತಿ ಮಹತ್ವದೆನಿಸಲಿದೆ. ಕಳೆಗುಂದಿರುವ ವಾಹನ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರಕಾರ ಏನೆಲ್ಲ ಕ್ರಮ ಕೈಗೊಳ್ಳಲಿದೆ ಎಂಬುದು ನಿರ್ಣಾಯಕವೆನಿಸಲಿದೆ.

ಹಾಗಿರುವಂತೆಯೇ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟವು (ಸಿಯಾಮ್), 2015 ಕೇಂದ್ರ ಬಜೆಟ್‌ನಲ್ಲಿ ವಾಹನ ತೆರಿಗೆ ವಿನಾಯಿತಿಯನ್ನು ನೀಡುವಂತೆಯೇ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ವಿನಂತಿಸಿಕೊಂಡಿದೆ.

cars

ಕಳೆದ ಡಿಸೆಂಬರ್ ತಿಂಗಳಾಂತ್ಯಕ್ಕೆ ವಾಹನಗಳಿಗೆ ನೀಡಿಕೊಂಡು ಬಂದಿರುವ ಅಬಕಾರಿ ಸುಂಕ ವಿನಾಯಿತಿ ಕ್ರಮವನ್ನು ಹಿಂಪಡೆಯಲಾಗಿತ್ತು. ಇದು ಹಿನ್ನಡೆಯಲ್ಲಿರುವ ಕಾರು ಮಾರಾಟಕ್ಕೆ ಮತ್ತಷ್ಟು ಆಘಾತ ನೀಡುವಂತಾಗಿತ್ತು.

2014-15ನೇ ಸಾಲಿನ ಆರ್ಥಿಕ ಸಾಲಿನಲ್ಲಿ ಎಪ್ರಿಲ್‌ನಿಂದ ಡಿಸೆಂಬರ್ ಅವಧಿಯ ವರೆಗೆ ಶೇಕಡಾ 3.67ರಷ್ಟು ಏರಿಕೆ ಕಂಡಿತ್ತು. ಈ ಅವಧಿಯಲ್ಲಿ 18,94,932 ಯುನಿಟ್‌ಗಳಷ್ಟು ಮಾರಾಟ ದಾಖಲಾಗಿತ್ತು. ಇದಕ್ಕೂ ಮುಂಚಿತ ವರ್ಷದಲ್ಲಿ 18,22,866 ಯುನಿಟ್‌ಗಳ ಮಾರಾಟ ದಾಖಲಾಗಿತ್ತು.

ಮಂದಗತಿಯ ಆರ್ಥಿಕ ಬೆಳವಣಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಕಳೆದ ಯುಪಿಎ ಸರಕಾರ ಮಂಡಿಸಿದ್ದ ತಾತ್ಕಾಲಿಕ ಬಜೆಟ್‌ನಲ್ಲಿ ಸಣ್ಣ ಕಾರುಗಳ ಮೇಲಿನ ಅಬಕಾರಿ ಸಂಕವನ್ನು ಶೇ.12ರಿಂದ 8ಕ್ಕೆ ಅಂತೆಯೇ ಎಸ್‌ಯುವಿ ಮೇಲಿನ ಅಬಕಾರಿ ಸುಂಕವನ್ನು ಶೇ. 30ರಿಂದ 24ಕ್ಕೆ ಹಾಗೂ ಮಧ್ಯದ ಗಾತ್ರದ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇ.24ರಿಂದ 20ಕ್ಕೂ ಮತ್ತು ದೊಡ್ಡ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇ.27ರಿಂದ 24ಕ್ಕೆ ಇಳಿಸಿತ್ತು.

ತದಾ ಬಳಿಕ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜೂನ್ ತಿಂಗಳಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಅಬಕಾರಿ ಸುಂಕ ವಿನಾಯಿತಿಯನ್ನು ಮುಂದಿನ ಆರು ತಿಂಗಳ ವರೆಗೆ ವಿಸ್ತರಿಸಿತ್ತು. ಆದರೆ 2014 ಅಂತ್ಯದಲ್ಲಿ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲಾಗಿತ್ತು.

ಸಹಜವಾಗಿಯೇ 2015 ವರ್ಷಾರಂಭದಿಂದ ದೇಶದ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ತನ್ನೆಲ್ಲ ಮಾದರಿಗಳಿಗೆ ಬೆಲೆ ಏರಿಕೆ ಘೋಷಿಸಿದ್ದವು. ಇದು ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿತ್ತು.

Most Read Articles

Kannada
English summary
Budget 2015: SIAM wants excise duty reduction
Story first published: Tuesday, February 10, 2015, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X