ನಾಳೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಆಟೋ, ಟ್ಯಾಕ್ಸಿ ಸಂಚಾರ ಬಂದ್!

ಕೇಂದ್ರ ಸರಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು 2015 ಸೆಪ್ಟೆಂಬರ್ 02 ಬುಧವಾರದಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿಯಿಂದ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದ್ಯಾಂತ ಬಸ್ ಸಂಚಾರ ಅಸ್ತವ್ಯಸ್ತವಾಗಲಿದೆ.

2015 ಸಾರಿಗೆ ಸುರಕ್ಷತಾ ಮಸೂದೆ ವಾಪಸ್ ಗೆ ಜೊತೆಗೆ ಕೇಂದ್ರ ಸರಕಾರದ ಕಾರ್ತಿಕ ನೀತಿಗೆ ವಿವಿಧ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘಟನೆಯಿಂದಲೂ ಬೆಂಬಲ ವ್ಯಕ್ತವಾಗಿದೆ. ಇದರೊಂದಿಗೆ ಟ್ಯಾಕ್ಸಿ ಹಾಗೂ ಆಟೋ ಸೇವೆಯಲ್ಲೂ ಏರುಪೇರಾಗಲಿದೆ.

ಬಿಎಂಟಿಸಿ

ಬುಧವಾರ ಬೆಳಗ್ಗೆ ಆರಂಭವಾಗಲಿರುವ 24 ತಾಸಿನ ಮುಷ್ಕರವು ಸೆಪ್ಟೆಂಬರ್ 03 ಬೆಳಗ್ಗೆ 06ರ ವರೆಗೆ ಮುಂದುವರಿಯಲಿದೆ. ಮುಷ್ಕರಕ್ಕೆ ರಾಜ್ಯ ಸರ್ಕಾರಿ ಬಸ್ಸುಗಳ ಬೆಂಬಲ ವ್ಯಕ್ತವಾಗಿರುವುದರಿಂದ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗಲಿದೆ. ಹಾಗಿದ್ದರೂ ಖಾಸಗಿ ಬಸ್ಸುಗಳ ಸಂಚಾರವು ಎಂದಿನಂತೆ ಮುಂದುವರಿಯಲಿದೆ.

ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲವಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟುವ ಸಾಧ್ಯತೆಗಳಿವೆ.

ಪ್ರಮುಖ ಬೇಡಿಕೆಗಳು

  • ತಿಂಗಳಿಗೆ ಕನಿಷ್ಠ 15 ಸಾವಿರ ರು. ವೇತನ ನಿಗದಿ
  • 2015 ಸಾರಿಗೆ ಸುರಕ್ಷತಾ ಮಸೂದೆ ಹಿಂಪಡೆಯಬೇಕು
  • ಕಾರ್ಮಿಕ ಕಾಯ್ದೆ ಜಾರಿಯಾಗಬೇಕು
Most Read Articles

Kannada
English summary
Buses And Autos To Stay Off The Road In Bengaluru Tomorrow!
Story first published: Tuesday, September 1, 2015, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X