ಬ್ರೇಕ್ ಫೇಲ್; 4 ದೇಶಗಳಲ್ಲಿ ಸೆಲೆರಿಯೊ ಓಡಾಟ ಸ್ಥಗಿತ

By Nagaraja

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರೇಕ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನಪ್ರಿಯ ಸುಜುಕಿ ಸೆಲೆರಿಯೊ ಮಾದರಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮಾರುತಿ ಸುಜುಕಿ ಸೆಲೆರಿಯೊದಲ್ಲೂ ಇಂತಹದೊಂದು ಸಮಸ್ಯೆ ಕಾಣಿಸಿಕೊಂಡಿರಬಹುದೇ ಎಂಬುದು ಆತಂಕಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ ಬ್ರಿಟನ್‌ನಲ್ಲಿ ಮಾರಾಟವಾಗುತ್ತಿರುವ ಸೆಲೆರಿಯೊದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಸುಜುಕಿಯ ಥಾಯ್ಲೆಂಡ್ ಘಟಕದಲ್ಲಿ ನಿರ್ಮಿಸಲಾಗಿತ್ತು. ಆಟೋಕಾರ್ ನಿಯತಕಾಲಿಕ ಪತ್ರಕರ್ತರು ನಡೆಸಿದ ಟೆಸ್ಟ್ ಡ್ರೈವ್ ನಡೆಸುತ್ತಿದ್ದ ವೇಳೆ ಸಮಸ್ಯೆ ಪತ್ತೆ ಹಚ್ಚಲಾಗಿದೆ.

Suzuki Celerio

ತುರಂತ್ ಆಗಿ ಎಚ್ಚೆತ್ತುಕೊಂಡಿರುವ ಸುಜುಕಿ ಸೆಲೆರಿಯೊಗೆ ವಾಪಾಸ್ ಕರೆ ನೀಡಿದೆ. ವೇಗವಾಗಿ ಸಾಗುವಾಗ (ಗಂಟೆಗೆ 80 ಕೀ.ಮೀ.) ತುರ್ತು ಬ್ರೇಕ್ ಸಂದರ್ಭದಲ್ಲಿ ಬ್ರೇಕ್ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ಆಟೋಕಾರ್ ವರದಿ ಮಾಡಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಜುಕಿ ಸಂಸ್ಥೆಯು ಬ್ರಿಟನ್ ಜೊತೆಗೆ ಐರ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲೂ ಸೆಲೆರಿಯೊಗೆ ಹಿಂದಕ್ಕೆ ಕರೆ ನೀಡಲಾಗಿದ್ದು, ಕಾರು ಮಾಲಿಕರಲ್ಲಿ ವಾಹನ ಚಾಲನೆ ಮಾಡದಂತೆ ವಿನಂತಿಸಿಕೊಂಡಿದೆ.

ಫೆಬ್ರವರಿ 1ರಂದು ಬ್ರಿಟನ್ ಮಾರುಕಟ್ಟೆ ಪ್ರವೇಶಿಸಿದ ಸೆಲೆರಿಯೊ ಇದುವರೆಗೆ 100ರಷ್ಟು ಸಂಖ್ಯೆಯಲ್ಲಿ ಮಾತ್ರ ಮಾರಾಟವಾಗಿತ್ತು. ಹಾಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆಯೇ ಸುಜುಕಿ ರಿಕಾಲ್‌ಗೆ ಕರೆ ನೀಡಿದೆ. ಅಲ್ಲದೆ ಮೇಲೆ ತಿಳಿಸಿದ ರಾಷ್ಟ್ರಗಳಲ್ಲಿ ತಾತ್ಕಾಲಿಕ ಬದಲಿ ಕಾರುಗಳನ್ನು ಒದಗಿಸಲು ಸಂಸ್ಥೆ ನಿರ್ಧರಿಸಿದೆ.

Most Read Articles

Kannada
English summary
Celerio Sales Stopped In Four Countries Due To Brake Failure Issue
Story first published: Tuesday, February 3, 2015, 9:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X