ಭಾರತಕ್ಕೆ ಬಹುಬೇಗನೇ ಬರಲಿದೆ ಷೆವರ್ಲೆ ಸ್ಪಿನ್ ಎಂಪಿವಿ

By Nagaraja

ಈ ಹಿಂದೆ ಬರೆದಿರುವ ಲೇಖನದಲ್ಲಿ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ನೂತನ ಸ್ಪಿನ್ ಬಹು ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ವರದಿ ಮಾಡಿದ್ದೆವು.

2016ನೇ ಇಸವಿಯಲ್ಲಿ ಷೆವರ್ಲೆ ಭಾರತಕ್ಕೆ ಪರಿಚಯವಾಗುವ ಬಗ್ಗೆ ನಾವು ಉಲ್ಲೇಖಿಸಿದ್ದೆವು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಷೆವರ್ಲೆ ಸ್ಪಿನ್ ಭಾರತಕ್ಕೆ ನಿರೀಕ್ಷೆಗೂ ಮುಂಚಿತವಾಗಿ ಆಗಮನವಾಗುವ ಸಾಧ್ಯತೆಯಿದೆ.

chevrolet spin

ನೂತನ ಸ್ಪಿನ್ ಕಾರಿನಲ್ಲಿ 1.3 ಲೀಟರ್ ಫೋರ್ ಸಿಲಿಂಡರ್ ಕಾಮನ್ ರೈನ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದು 73.95 ಅಶ್ವಶಕ್ತಿ (190 ತಿರುಗುಬಲ) ಉತ್ಪಾದಿಸಲಿದೆ. ಇದು ಫೈವ್ ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಷೆವರ್ಲೆ ಸ್ಪಿನ್ ಈಗಾಗಲೇ ಭಾರತದಲ್ಲಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದೆ. ಇದು ಭಾರತದಲ್ಲಿ ಷೆವರ್ಲೆ ಭಾಗ್ಯ ರೇಖೆಯನ್ನೇ ಬದಲಾಯಿಸಲಿದೆ ಎಂಬುದು ಸಂಸ್ಥೆಯ ನಂಬಿಕೆಯಾಗಿದೆ.

chevrolet spin

ಪ್ರಸ್ತುತ ಬ್ರೆಜಿಲ್, ಥಾಯ್ಲೆಂಡ್ ಹಾಗೂ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಷೆವರ್ಲೆ ಸ್ಪಿನ್ ಮಾರಾಟವಾಗುತ್ತಿದೆ. ಇದು ಸದ್ಯ ಭಾರತದಲ್ಲಿರುವ ಷೆವರ್ಲೆ ಎಂಜಾಯ್ ಮೇಲ್ದರ್ಜೆಯಲ್ಲಿ ಗುರುತಿಸಲ್ಪಡಲಿದ್ದು, ಇದಕ್ಕಿಂತಲೂ ದುಬಾರಿಯೆನಿಸಲಿದೆ.

ಒಮ್ಮೆ ಷೆವರ್ಲೆ ಸ್ಪಿನ್ ಭಾರತ ಪ್ರವೇಶಿಸಿದರೆ ಪ್ರಮುಖವಾಗಿಯೂ ಮಾರುತಿ ಸುಜುಕಿ ಎರ್ಟಿಗಾ ಹಾಗೂ ಹೋಂಡಾ ಮೊಬಿಲಿಯೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
In an attempt to boost sales in India, they could pre-pone the launch of their Spin MPV. 
Story first published: Monday, March 2, 2015, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X