ಮಾರುತಿ ಡೆಸರ್ಟ್ ಸ್ಟ್ರೋಮ್‌ನಲ್ಲಿ ಸ್ಪರ್ಧಿಸಲಿರುವ ಸಂತೋಷ್

By Nagaraja

ದೇಶದ ಅಗ್ರ ಕ್ರಾಸ್ ಕಂಟ್ರಿ ರಾಲಿಯಲ್ಲಿ ಒಂದಾಗಿರುವ ಮಾರುತಿ ಸುಜುಕಿ ಡೆಸರ್ಟ್ ಸ್ಟ್ರೋಮ್‌ಗೆ ಫೆಬ್ರವರಿ 23ರಂದು (ಇಂದು) ಚಾಲನೆ ದೊರಕಿದ್ದು, ದೇಶದ ಹೆಮ್ಮೆಯ ರೇಸರ್ ಸಿಎಸ್ ಸಂತೋಷ್ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ದಕ್ಷಿಣ ಅಮೆರಿಕದಲ್ಲಿ ನಡೆದ ಡಕಾರ್ ರಾಲಿಯಲ್ಲಿ ಸ್ಪರ್ಧಿಸಿರುವ ಮೊಟ್ಟ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂತೋಷ್ ಸೇರಿದಂತೆ 130ರಷ್ಟು ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.

cs santosh

ಆರು ದಿನಗಳ ಪರ್ಯಂತ ಸಾಗಲಿರುವ ಮಾರುತಿ ಸುಜುಕಿ ಡೆಸರ್ಟ್ ಸ್ಟ್ರೋಮ್ ಕ್ರಾಸ್ ಕಂಟ್ರಿ ರಾಲಿಯು ನವದೆಹಲಿಯಿಂದ ಆರಂಭವಾಗಿ ಸರ್ದಾರ್‌ಶಹರ್, ಬಿಕಾನೆರ್, ಜೈಸಾಲ್ಮೆರ್ ಹಾದಿಯಾಗಿ ಕೊನೆಗೆ ಮಾರ್ಚ್ 1ರಂದು ಜೈಪುರವನ್ನು ತಲುಪಲಿದೆ.

ಈ ಮೂಲಕ ಒಟ್ಟು 2,300 ಕೀ.ಮೀ. ಕ್ರಮಿಸಲಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಡೆಸರ್ಟ್ ಸ್ಟ್ರೋಮ್ ಅತ್ಯಂತ ಕಠಿಣ ಹಾದಿಯನ್ನು ಪಡೆದುಕೊಂಡಿದ್ದು, ಹೆಚ್ಚು ಸವಾಲಿನಿಂದ ಕೂಡಿರಲಿದೆ.

ಆದರೆ ಕಳೆದ ಬಾರಿಯ ಚಾಂಪಿಯನ್ ಸಂತೋಷ್‌ಗೆ ಇಂದೊಂದು ದೊಡ್ಡ ವಿಷಯನೇ ಅಲ್ಲ. ಏಕೆಂದರೆ 2015 ಡಕಾರ್ ರಾಲಿಯಲ್ಲಿ 31ರ ಹರೆಯದ ಕನ್ನಡಿಗ ಒಟ್ಟಾರೆ 168ರಷ್ಟು ಸ್ಪರ್ಧಾಳುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 36ನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇದರಂತೆ ಈ ಬಾರಿಯೂ ಸುಲಭವಾಗಿ ನಂ.1 ಪಟ್ಟ ಉಳಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

Most Read Articles

Kannada
English summary
CS Santosh taking part in Maruti Suzuki Desert Storm
Story first published: Monday, February 23, 2015, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X