ದೇಶದ ಹಣೆಬರಹ ಬದಲಾಯಿಸಿತೇ ಬೆಂಝ್ ಬಸ್ಸುಗಳು

By Nagaraja

ಈಗಷ್ಟೇ ಬೆಂಗಳೂರಿನ ತನ್ನ ಘಟಕದಲ್ಲಿ ಸ್ಕಾನಿಯಾ ಸಂಸ್ಥೆಯು ಐಷಾರಾಮಿ ಬಸ್ಸುಗಳ ನಿರ್ಮಾಣವನ್ನು ಆರಂಭಿಸಿತ್ತು. ಇನ್ನೊಂದೆಡೆ ವೋಲ್ವೋ ಈಗಗಾಲೇ ತನ್ನ ಸಾನಿಧ್ಯವನ್ನು ಭದ್ರಪಡಿಸಿಕೊಂಡಿದೆ. ಹಾಗಿರುವಾಗ ದಕ್ಷಿಣ ಭಾರತದಲ್ಲಿ ಈ ಐಕಾನಿಕ್ ಸ್ವೀಡನ್ ಸಂಸ್ಥೆಗಳಿಗೆ ಪ್ರತಿಸ್ಪರ್ಧೆಯಾಗಿ ಮರ್ಸಿಡಿಸ್ ಬೆಂಝ್ ಮುಂದೆ ಬಂದಿದ್ದು, ನಿಕಟ ಪೈಪೋಟಿಗೆ ಕಾರಣವಾಗುತ್ತಿದೆ.

ಚೆನ್ನೈನಲ್ಲಿ ಸ್ಥಿತಗೊಂಡಿರುವ ಒರಗಡಂ ಘಟಕದಲ್ಲಿ ಮರ್ಸಿಡಿಸ್ ಬೆಂಝ್ ಜೊತೆಗೆ ಭಾರತ್ ಬೆಂಝ್ ಬಸ್ಸುಗಳ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾತೃಸಂಸ್ಥೆಯಾಗಿರುವ ಡೈಮ್ಲರ್ ಇಂಡಿಯಾ ಘೋಷಿಸಿದೆ.

10. 425 ಕೋಟಿ ರು. ಹೂಡಿಕೆ

10. 425 ಕೋಟಿ ರು. ಹೂಡಿಕೆ

113,000 ಚದರ ಅಡಿ ವಿಸ್ತಾರದಲ್ಲಿ ಹರಡಿರುವ ಚೆನ್ನೈನ ಒರಗಡಂ ಘಟಕದಲ್ಲಿ ಮರ್ಸಿಡಿಸ್ ಬೆಂಝ್ ಹಾಗೂ ಭಾರತ್ ಬೆಂಝ್ ಐಷಾರಾಮಿ ಬಸ್ಸುಗಳ ನಿರ್ಮಾಣ ಆರಂಭವಾಗಲಿದೆ. ಈ ಪೈಕಿ ವಾಣಿಜ್ಯ ಟ್ರಕ್ ಗಳನ್ನು ಉತ್ಪಾದಿಸುತ್ತಿದ್ದ ಭಾರತ್ ಬೆಂಝ್ ಸಹ ಈಗ ಬಸ್ ನಿರ್ಮಾಣದತ್ತವೂ ಗಮನ ಕೇಂದ್ರಿಕರಿಸಲಿದೆ.

09. ಒರಗಡಂ ಘಟಕ

09. ಒರಗಡಂ ಘಟಕ

ಈಗಗಾಲೇ ಒರಗಡಂನಲ್ಲಿ ಸ್ಥಿತಗೊಂಡಿರುವ ಡೈಮ್ಲರ್ ವಾಣಿಜ್ಯ ವಾಹನ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂಬುದನ್ನು ಜರ್ಮನಿಯ ಐಷಾರಾಮಿ ಸಂಸ್ಥೆಯು ಪ್ರಕಟಿಸಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಸಾನಿಧ್ಯವನ್ನು ಬಲಪಡಿಸಲಿದೆ.

08. ಎಕ್ಸ್ ಕ್ಲೂಸಿವ್ ಉತ್ಪನ

08. ಎಕ್ಸ್ ಕ್ಲೂಸಿವ್ ಉತ್ಪನ

ವರದಿಗಳ ಪ್ರಕಾರ ಚೆನ್ನೈನ ಘಟಕದಿಂದಲೇ ಐಷಾರಾಮಿ ಬಸ್ಸುಗಳು ವಿದೇಶಕ್ಕೆ ರಫ್ತುಗೊಳ್ಳುವ ಸಾಧ್ಯತೆಯಿದೆ. ಅದೇ ಹೊತ್ತಿಗೆ ಮರ್ಸಿಡಿಸ್ ಹಾಗೂ ಭಾರತ್ ಬೆಂಝ್ ತನ್ನ ಎಕ್ಸ್ ಕ್ಲೂಸಿವ್ ಉತ್ಪನ್ನಗಳನ್ನು ದೇಶದಲ್ಲೂ ಮಾರಾಟ ಮಾಡಲಿದೆ.

 07. ನಿರ್ಮಾಣ ಸಾಮರ್ಥ್ಯ

07. ನಿರ್ಮಾಣ ಸಾಮರ್ಥ್ಯ

ಪ್ರಾಥಮಿಕ ಹಂತದಲ್ಲಿ ವಾರ್ಷಿಕವಾಗಿ 1,500 ಯುನಿಟ್ ಗಳಷ್ಟು ಬಸ್ಸುಗಳನ್ನು ನಿರ್ಮಿಸಲಾಗುವುದು. ಬಳಿಕ ನಿರ್ಮಾಣ ಸಾಮರ್ಥ್ಯವನ್ನು 4,000ಕ್ಕೆ ಏರಿಸುವ ಇರಾದೆಯನ್ನು ಸಂಸ್ಥೆ ಹೊಂದಿರುತ್ತದೆ.

06. ತ್ರಿವಳಿ ಬ್ರಾಂಡ್

06. ತ್ರಿವಳಿ ಬ್ರಾಂಡ್

ಇದರೊಂದಿಗೆ ಮೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿರುವ ಡೈಮ್ಲರ್ ಘಟಕದಲ್ಲಿ ಮೂರು ಬ್ರಾಂಡ್ ಗಳ ನಿರ್ಮಾಣಗಳಿಗೆ ಚಾಲನೆ ದೊರಕಲಿದೆ. ಇಲ್ಲಿ ಡೈಮ್ಲರ್ ಟ್ರಕ್ ಜೊತೆಗೆ ಮರ್ಸಿಡಿಸ್ ಬೆಂಝ್ ಹಾಗೂ ಭಾರತ್ ಬೆಂಝ್ ಬ್ರಾಂಡ್ ನ ಬಸ್ಸುಗಳ ನಿರ್ಮಾಣ ಪ್ರಕಿಯೆ ಸಾಗಲಿದೆ.

05. ಡೈಮ್ಲರ್ ಬಸ್

05. ಡೈಮ್ಲರ್ ಬಸ್

ದೇಶದಲ್ಲಿ ಡೈಮ್ಲರ್ ಇಂಡಿಯಾ ಬಸ್ಸುಗಳು 9 ಟನ್, 16 ಟನ್ ಹಾಗೂ 16 ಟನ್ ಗಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಫ್ರಂಟ್ ಮತ್ತು ರಿಯರ್ ಎಂಜಿನ್ ಸಂರಚನೆಗಳಲ್ಲಿ ಲಭ್ಯವಾಗಲಿದೆ.

04. ಡೈಮ್ಲರ್ ಎಜಿ

04. ಡೈಮ್ಲರ್ ಎಜಿ

ನಿಮ್ಮ ಮಾಹಿತಿಗಾಗಿ ಡೈಮ್ಲರ್ ಎಸಿ ಕೇಂದ್ರ ಕಚೇರಿ ಜರ್ಮನಿಯ ಸ್ಟುಟ್ ಗಾರ್ಟ್ ನಲ್ಲಿ ಸ್ಥಿತಗೊಂಡಿದೆ. ಇದು ಜಗತ್ತಿನ 13ನೇ ಅತಿದೊಡ್ಡ ಕಾರು ಹಾಗೂ ಎರಡನೇ ಅತಿದೊಡ್ಡ ಟ್ರಕ್ ತಯಾರಕ ಸಂಸ್ಥೆಯಾಗಿದೆ.

03. ಡೈಮ್ಲರ್ ಇಂಡಿಯಾ

03. ಡೈಮ್ಲರ್ ಇಂಡಿಯಾ

ಇನ್ನು ಡೈಮ್ಲರ್ ಎಜಿ ಉಪ ವಿಭಾಗವಾಗಿರುವ ಡೈಮ್ಲಾರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೈವೇಟ್ ಲಿಟಿಮೆಡ್ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇದು ಭಾರತ್ ಬೆಂಝ್, ಮರ್ಸಿಡಿಸ್ ಬೆಂಝ್ ಹಾಗೂ ಫ್ಯೂಸೊಗಳೆಂಬ ಬ್ರಾಂಡ್ ಗಳಲ್ಲಿ ದೇಶದಲ್ಲಿ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡುತ್ತಿದೆ.

02. ಪುಣೆಯಿಂದ ಚೆನ್ನೈಗೆ

02. ಪುಣೆಯಿಂದ ಚೆನ್ನೈಗೆ

ಪ್ರಸ್ತುತ ಪುಣೆ ಘಟಕದಲ್ಲಿ ಬೆಂಝ್ ಬಸ್ಸುಗಳು ನಿರ್ಮಾಣವಾಗುತ್ತಿದೆ. ಈಗ ಚೆನ್ನೈನಲ್ಲೂ ಆರಂಭಿಸುವ ಮೂಲಕ ದಕ್ಷಿಣ ಭಾರತಕ್ಕೂ ಕಾಲಿರಿಸಿದೆ.

01. ಹಣೆಬರಹ ಬದಲಾಯಿಸಿತೇ?

01. ಹಣೆಬರಹ ಬದಲಾಯಿಸಿತೇ?

ಇದರೊಂದಿಗೆ ವಾಣಿಜ್ಯ ವಿಭಾಗದಲ್ಲಿ ಅತ್ಯಂತ ಗುಣಮಟ್ಟದ ಟ್ರಕ್ ಹಾಗೂ ಬಸ್ ನಿರ್ಮಾಣವಾಗಲಿದೆ. ಇದು ದೇಶದ ಹಣೆಬರಹವನ್ನೇ ಬದಲಾಯಿಸಿತೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

Most Read Articles

Kannada
English summary
Daimler India to start bus production in Chennai
Story first published: Friday, April 17, 2015, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X