ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

By Nagaraja

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಾಹನವನ್ನು ವಿಶಿಷ್ಟ ರೀತಿಯಲ್ಲಿ ಮಾರ್ಪಾಡುಗೊಳಿಸುವುದರಲ್ಲಿ ನಿಸ್ಸೀಮವೆನಿಸಿರುವ ದೇಶದ ಪ್ರತಿಷ್ಠಿತ ಕಸ್ಟಮೈಸ್ಡ್ ಸಂಸ್ಥೆ ಡಿಸಿ ಡಿಸೈನ್, ಜಪಾನ್‌ನ ಪ್ರಖ್ಯಾತ ಕಾರು ಸಂಸ್ಥೆ ಇಸುಝು ಜನಪ್ರಿಯ ಎಂಯು-7 ಮಾದರಿಗೆ ಹೊಸ ವಿನ್ಯಾಸ ಕಲ್ಪಿಸಿಕೊಟ್ಟಿದೆ.

ಇದೀಗಷ್ಟೇ ಇಸುಝು ಎಂಯುವಿ-7 ಆಟೋಮ್ಯಾಟಿಕ್ ಕ್ರೀಡಾ ಬಳಕೆಯ ವಾಹನವು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ [ಇಸುಝು ಎಂಯು 7 ಆಟೋಮ್ಯಾಟಿಕ್ ಎಸ್‌ಯುವಿ ಬಿಡುಗಡೆ]. ಕಾರಿನೊಳಗೆ ಹೊರಗೂ ಸೇರಿದಂತೆ ಸಂಪೂರ್ಣ ಪ್ರೀಮಿಯಂ ನೋಟಕ್ಕೆ ಡಿಸಿ ಡಿಸೈನ್ ಆದ್ಯತೆ ಕೊಟ್ಟಿದೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಡಿಸಿ ಡಿಸೈನ್ ಮಾಲಿಕರರಾಗಿರುವ ದಿಲೀಪ್ ಛಾಬ್ರಿಯಾ, "ಎಂಯು-7 ಕ್ರೀಡಾ ಬಳಕೆಯ ವಾಹನಕ್ಕೆ ವಿಶಿಷ್ಟ ಆಯಾಮ ನೀಡುವಲ್ಲಿ ಯಶಸ್ವಿಯಾಗಿದ್ದು, ಹೊಸ ವಿನ್ಯಾಸವು ಇಸುಝು ವಾಹನ ಪ್ರೇಮಿಗಳಿಗೆ ಹೊಸತನದ ಅನುಭವವನ್ನುಂಟು ಮಾಡಲಿದೆ" ಎಂದಿದ್ದಾರೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

ಪ್ರಮುಖವಾಗಿಯೂ ಕಾರಿನ ಒಳಮೈಯಲ್ಲಿರುವ ಡ್ಯಾಶ್ ಬೋರ್ಡ್, ಸೆಂಟ್ರಲ್ ಕನ್ಸೋಲ್ ಹಾಗೂ ವಿಶೇಷ ಡ್ಯುಯಲ್ ಟೋನ್ ಲೆಥರ್ ಹೋದಿಕೆಗಳನ್ನು ಕಾಣಬಹುದಾಗಿದೆ. ಇವೆಲ್ಲದಕ್ಕೂ 3.45 ಲಕ್ಷ ರುಪಾಯಿ ಹೆಚ್ಚುವರಿ ವೆಚ್ಚ ತಗುಲಲಿದೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

ಪರಿಷ್ಕೃತ ಎಸಿ ವೆಂಟ್ಸ್, ಬಾಟಲಿ ಹೋಲ್ಡರ್, ಸಹ ಪ್ರಯಾಣಿಕರ ಬದಿಯಲ್ಲೂ ಕ್ರೋಮ್ ಸ್ಪರ್ಶತೆ, ಕಪ್ಪುವ ವರ್ಣದ ರೂಫ್ ಹೆಡ್ ಲೈನಿಂಗ್ ಮುಂತಾದವುಗಳು ಪ್ರಮುಖ ವೈಶಿಷ್ಟ್ಯಗಳಾಗಿವೆ. ಇಲ್ಲಿ ಐ-ಪಾಡ್ ಗಳ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

ಕಾರಿನ ಹೊರಭಾಗದಲ್ಲೂ ಗಮನಾರ್ಹ ಆಕರ್ಷಣೆಗೆ ಒತ್ತು ಕೊಡಲಾಗಿದೆ. ಮುಂಬೈ, ದೆಹಲಿ ಹಾಗೂ ಪುಣೆಯಲ್ಲಿ ಸ್ಥಿತಗೊಂಡಿರುವ ಡಿಸಿ ಡಿಸೈನ್ ಘಟಕದಲ್ಲಿ ಇದನ್ನು ನಿರ್ಮಿಸಿ ಕೊಡಲಾಗುತ್ತದೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

1993ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದ ಡಿಸಿ ಡಿಸೈನ್ ಈಗಾಗಲೇ ಹಲವಾರು ಜನಪ್ರಿಯ ಮಾದರಿಗಳಿಗೆ ತನ್ನ ವಿನ್ಯಾಸದ ರುಚಿ ತೋರಿಸಿಕೊಟ್ಟಿದೆ.

ಇಸುಝುಗೆ ಹೊಸ ವಿನ್ಯಾಸದ ರುಚಿ ತೋರಿಸಿಕೊಟ್ಟ ಡಿಸಿ ಡಿಸೈನ್

ಒಟ್ಟಿನಲ್ಲಿ ಸದ್ಯದಲ್ಲೇ ದೇಶದ ಚೊಚ್ಚಲ ಸೂಪರ್ ಕಾರು ಬಿಡುಗಡೆ ಮಾಡಲಿರುವ ಡಿಸಿ ಡಿಸೈನ್, ಕಸ್ಟಮೈಸ್ಡ್ ಮೂಲಕವೂ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಇಮ್ಮಡಿಗೊಳಿಸುವ ನಿರೀಕ್ಷೆಯಲ್ಲಿದೆ.

Most Read Articles

Kannada
English summary
DC Design, has unveiled a new exclusive interior design concept for the spacious and powerful Isuzu MU-7 Sports Utility Vehicle (SUV). Though, the customised interiors offered by ‘DC Design’ will not come as standard features of the MU-7, currently.
Story first published: Monday, August 10, 2015, 9:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X