ಚಾಲನೆ ವೇಳೆ ಆಪಲ್ ವಾಚ್ ಬಳಕೆ ಮಾಡಿದ ಚಾಲಕನಿಗೆ ದಂಡ

ನಿಮ್ಮಲ್ಲಿ ಆಪಲ್ ವಾಚ್ ಇದೆಯೇ? ಹಾಗಿದ್ದರೆ ಎಚ್ಚರ! ಯಾಕೆಂದರೆ ಯಾವ ಸಮಯ ಬೇಕಾದರೂ ನೀವು ಪೊಲೀಸರ ಕಣ್ಣಿಗೆ ಬೀಳಬಹುದು. ಕೆನಡಾದಲ್ಲಿ ಇಂತಹದೊಂದು ಆಸಕ್ತಿದಾಯಕ ಘಟನೆ ವರದಿಯಾಗಿದೆ.

ಚಾಲನೆ ವೇಳೆ ಆಪಲ್ ಫೋನ್ ಬಳಕೆ ಮಾಡಿದ್ದಕ್ಕಾಗಿ ಅಲ್ಲಿನ ಪೊಲೀಸರು ಬರೋಬ್ಬರಿ 120 ಅಮೆರಿಕನ್ ಡಾಲರ್ ದಂಡ ವಿಧಿಸಿದ್ದಾರೆ. ಚಾಲನೆ ವೇಳೆ ಸಂಗೀತ ಆಲಿಸುತ್ತಿದ್ದ ಚಾಲಕ ಪದ್ಯ ಬದಲಾಯಿಸಲು ಶ್ರಮಿಸುತ್ತಿದ್ದರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

apple

ಕ್ಯೂಬೆಲ್ ಹೈವೇ ಸುರಕ್ಷಾ ನಿಯಮ ಪ್ರಕಾರ ಚಾಲನೆ ಮಾಡುತ್ತಿರುವ ವೇಳೆ ಕೈಯಲ್ಲಿ ಹಿಡಿಯಬಹುದಾದ ಮೊಬೈಲ್ ಸೇರಿದಂತೆ ಯಾವುದೇ ಡಿವೈಸ್ ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿ ಜೆಫ್ರಿ ಮೆಕ್‌ಸಿಗನ್ ಎಂಬವರು ಈಗ ದಂಡನೆಗೊಳಗಾಗಿದ್ದಾರೆ.

ಒಟ್ಟಿನಲ್ಲಿ ಈ ಘಟನೆಯು ವಾಹನೋದ್ಯಮದ ಪಾಲಿಗೆ ಅತಿ ವಿರಳಗಳಲ್ಲಿ ವಿರಳ ಸಂಭವೆನಿಸಿದೆ. ಅಲ್ಲದೆ ಮಾಧ್ಯಮಗಳಿಗೆ ರಸವತ್ತಾದ ವರದಿಯಾಗಿ ಪರಿಣಮಿಸಿದೆ.

Most Read Articles

Kannada
English summary
A Canadian driver has been fined for using an Apple Watch while driving. The driver was fined because he used his Apple Watch to change the song!
Story first published: Saturday, May 30, 2015, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X