ಇಸ್ರೋ ಸಹಯೋಗದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಅಭಿವೃದ್ಧಿ

By Nagaraja

ಕ್ರಾಂತಿಕಾರಿ ಬೆಳವಣಿಗೆಯೊಂದರಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಎಲೆಕ್ಟ್ರಿಕ್ ಬಸ್ಸುಗಳಿಗೆ ಬೇಕಾದ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಅಲ್ಲದೆ ಈ ಯೋಜನೆಯಂಗವಾಗಿ ಮುಂದಿನ ಆರು ತಿಂಗಳೊಳಗೆ 15ರಷ್ಟು ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆಯಿರುವುದಾಗಿ ಗಡ್ಕರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, "ಇಸ್ರೋ ಜೊತೆ ಸೇರಿ ಎಲೆಕ್ಟ್ರಿಕ್ ಸಾರಿಗೆ ಸಂಚಾರ ವ್ಯವಸ್ಥೆಯನ್ನು ರೂಪುಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಬದಲಾವಣೆಗಳಿಗೆ ಸಚಿವಾಲಯವು ಸದಾ ಬದ್ಧವಾಗಿದೆ" ಎಂದು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಬಸ್

"ಇಸ್ರೋ ಈಗಾಗಲೇ ಉಪಗ್ರಹಗಳ ಬಳಕೆಗಾಗಿ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಇದನ್ನು ವಾಹನಗಳಲ್ಲಿ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ" ಎಂದಿದ್ದಾರೆ.

"ಈಗಿರುವ ಬಸ್ಸುಗಳನ್ನು ವಿದ್ಯುತ್ ಚಾಲಿತವನ್ನಾಗಿಸುವುದು ನನ್ನ ಗುರಿಯಾಗಿದೆ. ಇದರ ಪ್ರಾಯೋಗಿಕ ಸಂಚಾರ ಪರೀಕ್ಷಾರ್ಥವಾಗಿ ಮುಂದಿನ ಆರು ತಿಂಗಳಲ್ಲಿ 15ರಷ್ಟು ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸಲಾಗುವುದು" ಎಂದವರು ಸೇರಿಸಿದರು.

"ವಾಯು ಮಾಲಿನ್ಯ ಅತಿ ದೊಡ್ಡ ಸಮಸ್ಯೆಯಾಗಿದ್ದು, ಸುಸ್ಥಿರ ಪರಿಸರಕ್ಕಾಗಿ ಬದಲಿ ವ್ಯವಸ್ಥೆ ಕಂಡು ಹುಡುಕುವುದು ಅತಿ ಅಗತ್ಯವಾಗಿದೆ. ಅಲ್ಲದೆ ಇಂಧನ ಬಳಕೆಯಿಂದಾಗಿ ಸಾರಿಗೆ ವಿಭಾಗಕ್ಕೆ ಉಂಟಾಗುವ ನಷ್ಟವನ್ನು ಬಹುಬೇಗನೇ ಸರಿದೂಗಿಸಬೇಕಾಗಿದೆ" ಎಂದು ವಿವರಿಸಿದ್ದಾರೆ.

Most Read Articles

Kannada
English summary
Electric Buses battery technology will be developed in collaboration with ISRO
Story first published: Friday, August 28, 2015, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X