ಅತಿ ಶೀಘ್ರದಲ್ಲೇ ಫಿಯೆಟ್ 500 ಅಬಾರ್ತ್ ಭಾರತದಲ್ಲಿ ಬಿಡುಗಡೆ

By Nagaraja

ಇಟಲಿಯ ಅತಿ ಪುರಾತನ ಹಾಗೂ ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಫಿಯೆಟ್, ಅತಿ ಶೀಘ್ರದಲ್ಲೇ ಭಾರತಕ್ಕೆ ನೂತನ ಕಾರೊಂದನ್ನು ಪರಿಚಯಿಸಲಿದೆ. ವರದಿಗಳ ಪ್ರಕಾರ ಈಗಾಗಲೇ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲಿ ನೂತನ ಫಿಯೆಟ್ 500 ಅಬಾರ್ತ್ ಮೊದಲ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಇದರಂತೆ ಫಿಯೆಟ್ ಕಾರು ಅಭಿಮಾನಗಳಲ್ಲಿ ಹೊಸ ಮಾದರಿಯಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಫಿಯೆಟ್ ತನ್ನ ಐಕಾನಿಕ್ ಮಾದರಿಯನ್ನು ಪ್ರದರ್ಶಿಸಿತ್ತು.

fiat abarth 500

ಎಂಜಿನ್ ತಾಂತ್ರಿಕತೆ
  • ಎಂಜಿನ್: 1.4 ಲೀಟರ್ ಮಲ್ಟಿ ಏರ್
  • ಅಶ್ವಶಕ್ತಿ: 160
  • ತಿರುಗುಬಲ: 230
  • ಗೇರ್ ಬಾಕ್ಸ್: 5 ಸ್ಪೀಡ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್

ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಹೊಸ ಫಿಯೆಟ್ 500 ಅಬಾರ್ತ್ ಮಾದರಿಯು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು ದರ ಸ್ವಲ್ಪ ದುಬಾರಿಯೆನಿಸಲು ಕಾರಣವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಜೋಡಣೆ ಪ್ರಕ್ರಿಯೆ ಸ್ಥಳೀಯವಾಗಿಸಲು ನೆರವಾಗಲಿದೆ.

ಅದೇ ಹೊತ್ತಿಗೆ ಫಿಯೆಟ್ ಅಬಾರ್ತ್ ಪುಂಟೊ ಭಾರತಕ್ಕಾಗಮಿಸುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಎಲ್ಲದರ ಬಗ್ಗೆ ಸದ್ಯದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದೇವೆ.

Most Read Articles

Kannada
Read more on ಫಿಯೆಟ್ fiat
English summary
The Abarth 500 has finally been teased on Fiat India's website. Italian based manufacturer has confirmed that it will be coming soon and its launch has been highly anticipated.
Story first published: Monday, May 25, 2015, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X