ದೇಶದ್ಯಾಂತ ಫಿಯೆಟ್ ಉಚಿತ ಚೆಕಪ್ ಕ್ಯಾಂಪ್

By Nagaraja

ಇಟಲಿ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ ಸಂಸ್ಥೆಯು ದೇಶದ್ಯಾಂತ ಚೆಕಪ್ ಕ್ಯಾಂಪ್ ಆಳವಡಿಸಲು ನಿರ್ಧರಿಸಿದೆ. ಈ ಉಚಿತ ವಾಹನ ಪರಿಶೋಧನಾ ಶಿಬಿರ ಮೂರು ದಿನಗಳ ಪರ್ಯಂತ ಸಾಗಲಿದೆ.

104 ನಗರಗಳಲ್ಲಿ ಸ್ಥಿತಗೊಂಡಿರುವ ಫಿಯೆಟ್ 122ರಷ್ಟು ಚೆಕಪ್ ಕ್ಯಾಂಪ್‌ಗಳಲ್ಲಿ 2015 ಫೆಬ್ರವರಿ 26ರಿಂದ 28ರ ವರೆಗೆ ಪರೀಶೀಲನೆ ನಡೆಯಲಿದೆ. ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಫಿಯೆಟ್ ಮಾಲಿಕರನ್ನು ವಿನಂತಿಸಿಕೊಳ್ಳಲಾಗಿದೆ.

fiat punto evo

ವಾಹನ ಮಾರಾಟದ ಬಳಿಕವೂ ಗರಿಷ್ಠ ಅನುಭವ ನೀಡುವಲ್ಲಿ ಬದ್ಧವಾಗಿರುವ ಫಿಯೆಟ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಉಚಿತ ಚೆಕಪ್ ಶಿಬಿರಗಳನ್ನು ನಡೆಸಿಕೊಳ್ಳುತ್ತಲೇ ಬಂದಿದೆ. ಈಗ ಮಗದೊಮ್ಮೆ ಇದೇ ನೀತಿ ಅನುಸರಿಸುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಯೆಟ್ ಕ್ರೈಸ್ಲರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾಗಿರುವ ಕೆವಿನ್ ಫ್ಲೈನ್, ಫಿಯೆಟ್ ಚೆಕಪ್ ಕ್ಯಾಂಪ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕೆಲವು ಆಫರುಗಳನ್ನು ನೀಡಲಾಗುತ್ತದೆ. 2011 ಜನವರಿ ಬಳಿಕ ವಾಹನ ವಿತರಣೆಯಾದವರಿಗೆ ಕಾರ್ಮಿಕ ಶುಲ್ಕದಲ್ಲಿ ಶೇಕಡಾ 15ರಷ್ಟು ಹಾಗೂ ಬಿಡಿಭಾಗ ಬದಲಾವಣೆ ಮಾಡಬೇಕಾದರೆ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

Most Read Articles

Kannada
English summary
Fiat Will be organising free check-up camps all across India for three days. The Italian based manufacturer will held camps in 104 cities from 26th to 28th of February, 2015. Approximately 122 workshop will be participating in free check-up of vehicles.
Story first published: Wednesday, February 25, 2015, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X