ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

By Nagaraja

ಕಳೆದ ದಿನವಷ್ಟೇ ಹೊಚ್ಚ ಹೊಸತಾದ 595 ಕಾಂಪಿಟಿಝಿಯೋನಿ ಅತಿ ದುಬಾರಿ ಕಾರನ್ನು ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿತ್ತು. ಇದೇ ಸಂದರ್ಭದಲ್ಲಿ ಮಗದೊಂದು ಜನಪ್ರಿಯ ಮಾದರಿಯನ್ನು ಅನಾವರಣಗೊಳಿಸಲಾಗಿದೆ.

ಅದುವೇ, ಫಿಯೆಟ್ ಪುಂಟೊ ಅಬಾರ್ತ್

ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನಲ್ಲೇ ಅಂದರೆ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಾಗುವಾಗ ಫಿಯೆಟ್ ಪುಂಟೊ ಅಬಾರ್ತ್ ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

ಹೊಸ ಫಿಯೆಟ್ ಪುಂಟೊ ಕಾರಲ್ಲಿ ಹೆಚ್ಚಿನ ಬದಲವಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಹೊರಭಾಗದಲ್ಲಿ ಹೊಸ ಗ್ರಿಲ್, ಬಂಪರ್, ಆಕರ್ಷಕ ಅಬಾರ್ತ್ ಲಾಂಛನ ಮುಂತಾದ ಸೌಲಭ್ಯಗಳಿರಲಿದೆ.

ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

ಇನ್ನು ಕಾರಿನೊಳಗೆ ಸಂಪೂರ್ಣ ಕಪ್ಪು ವರ್ಣದ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

ಮಗದೊಂದು ಗಮನಾರ್ಹ ವಿಷಯವೆಂದರೆ ಅಬಾರ್ತ್ ಚೇಳು ಪ್ರಮುಖ ಆಕರ್ಷಣೆಯಾಗಿ ಕಂಡುಬರಲಿದೆ.

ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

ಅಂತೆಯೇ ಕಾರಿನಡಿಯಲ್ಲಿ 1.4 ಲೀಟರ್ ಟಿ-ಜೆಟ್ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.

ಮೇಡ್ ಇನ್ ಇಂಡಿಯಾ ಫಿಯೆಟ್ ಪುಂಟೊ ಅಬಾರ್ತ್ ಬಿಡುಗಡೆಗೆ ಸಿದ್ಧ

ಒಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಾಧ್ಯವಾದರೆ ಫಿಯೆಟ್‌ನ ಈ ಗರಿಷ್ಠ ನಿರ್ವಹಣೆಯ ಕಾರು ನೈಜ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

Most Read Articles

Kannada
Read more on ಫಿಯೆಟ್ fiat
English summary
The Fiat Punto Abarth was revealed today at the launch of the Fiat Abarth 595 Competizione at the Buddh International Circuit.
Story first published: Wednesday, August 5, 2015, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X