ಜಿನೆವಾದಲ್ಲಿ ಪ್ರದರ್ಶನ ಕಾಣಲಿರುವ ಫಿಯೆಟ್‌ನ 2 ಅತ್ಯಾಕರ್ಷಕ ಮಾದರಿಗಳು

By Nagaraja

ಇಟಲಿಯ ಅತಿ ಪುರಾತನ ವಾಹನ ಸಂಸ್ಥೆಯಾಗಿರುವ ಫಿಯೆಟ್ ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಅಲ್ಲದೆ ಮುಂಬರುವ 2015 ಜಿನೆವಾ ಮೋಟಾರು ಶೋದಲ್ಲಿ ಎರಡು ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

2015 ಮಾರ್ಚ್ 5ರಿಂದ 15ರ ವರೆಗೆ ಸಾಗುವ ಜಿನೆವಾ ಆಟೋ ಶೋದಲ್ಲಿ ಪ್ರದರ್ಶನಗೊಳ್ಳಲಿರುವ ಫಿಯೆಟ್‌ನ ಎರಡು ಪ್ರಮುಖ ಮಾದರಿಗಳು ಇಂತಿದೆ.

  • ಫಿಯೆಟ್ 500 ವಿಂಟೇಜ್ 57
  • ಫಿಯೆಟ್ ಡೊಬ್ಲೊ ಟ್ರೆಕ್ಕಿಂಗ್

fiat 500 vintage
ಇಲ್ಲಿ ಗಮನಾರ್ಹ ಸಂಗತಿಯೆಂದರೆ ಫಿಯೆಟ್ ಸಾಂಪ್ರಾದಾಯಿಕ ವಿನ್ಯಾಸವನ್ನು ಈ ಮಾದರಿಗಳು ಕಾಯ್ದುಕೊಂಡಿದ್ದು, ಸಂಸ್ಥೆಯ ಪರಂಪರೆಯ ಸಂಕೇತವಾಗಿರಲಿದೆ. ಈ ಎರಡು ಮಾದರಿಗಳು 2015 ಎಪ್ರಿಲ್ ವೇಳೆಯಾಗುವಾಗ ಬ್ರಿಟನ್ ಮಾರುಕಟ್ಟೆಯನ್ನು ತಲುಪಲಿದೆ.

ಫಿಯೆಯ್ 500 ವಿಂಟೇಜ್ 57 ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಲ್ಪಡಲಿದ್ದು, 69 ಅಶ್ವಶಕ್ತಿ ಉತ್ಪಾದಿಸಲಿದೆ. ಇದರಲ್ಲಿ 0.9 ಲೀಟರ್ ಟ್ವಿನ್ ಏರ್ ಟರ್ಬೊ ಪೆಟ್ರೋಲ್ ಎಂಜಿನ್ (85 ಅಶ್ವಶಕ್ತಿ) ಆಯ್ಕೆಯೂ ಇರಲಿದೆ.

fiat doblo treckking

ಪ್ರಸ್ತುತ ಕಾರಲ್ಲಿ ಏಳು ಏರ್ ಬ್ಯಾಗ್, ಸ್ಟ್ಯಾಟ್/ಸ್ಟಾಪ್ ಸಿಸ್ಟಂ, ಇಎಸ್‌ಪಿ ಜೊತೆ ಎಎಸ್‌ಆರ್/ಎಂಎಸ್‌ಆರ್, ಎಚ್‌ಬಿಎ, ಹಿಲ್ ಹೋಲ್ಡರ್, ಎಸ್, ಬ್ಲೂಟೂತ್ ಮುಂತಾದ ಸೌಲಭ್ಯಗಳು ಇರಲಿದೆ.

ಇನ್ನೊಂದೆಡೆ ಡೊಬ್ಲೊ ವ್ಯಾನ್ ತನ್ನದೇ ಆದ ಯೂನಿಕ್ ವಿನ್ಯಾಸದಿಂದ ಗಮನ ಸೆಳೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಜಿನೆವಾದಲ್ಲಿ ಲಭ್ಯವಾಗಲಿದೆ.

Most Read Articles

Kannada
English summary
Italian automobile giant Fiat will be debuting two new models at the upcoming Geneva Motor Show. The motor show is scheduled to commence on 5th and will go on to 15th of March, 2015. The first will be an all-new Fiat 500 Vintage '57 and a Doblo Trekking.
Story first published: Wednesday, February 25, 2015, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X