ಡೌಟ್ ಬೇಡ, ಫಿಯೆಟ್ ಜೀಪ್ ಭಾರತದಲ್ಲೇ ನಿರ್ಮಾಣ

By Nagaraja

ಇಟಲಿಯ ಐಕಾನಿಕ್ ಫಿಯೆಟ್ ಕ್ರೈಸ್ಲರ್ಸ್ ಆಟೋಮೊಬೈಲ್ಸ್ ಭಾಗವಾಗಿರುವ ಅಮೆರಿಕದ ಪ್ರಖ್ಯಾತ ಜೀಪ್ ಬ್ರಾಂಡ್ ಭಾರತದತ್ತ ತನ್ನ ದೃಷ್ಟಿ ಹಾಯಿಸಿ ವರ್ಷಗಳೇ ಸರಿದಿವೆ. ಆದರೆ ಭಾರತ ಪ್ರವೇಶಕ್ಕೆ ಮಾತ್ರ ಇದುವರೆಗೆ ಕಾಲ ಕೂಡಿ ಬಂದಿಲ್ಲ.

ಈಗ ಬಂದಿರುವ ತಾಜಾ ವರದಿಗಳ ಪ್ರಕಾರ ಫಿಯೆಟ್ ಜೀಪ್ ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಮೂಲಕ ದೇಶದ ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಅಂತೆಯೇ ಅತಿ ಹೆಚ್ಚಿನ ಮಾರಾಟವನ್ನು ನಿರೀಕ್ಷೆ ಮಾಡುತ್ತಿದೆ.

ಜೀಪ್ ಕೆರೊಕೆ

ಏನೇ ಆದರೂ ಅಮೆರಿಕದ ಐಕಾನಿಕ್ ಜೀಪ್ ಬ್ರಾಂಡ್ ಅಂತೂ ಭಾರತ ಪ್ರವೇಶಿಸುವುದು ಖಚಿತವೆನಿಸಿದೆ. ಭಾರತದಲ್ಲಿ ಜೀಪ್ ಕ್ರೀಡಾ ಬಳಕೆಯ ವಾಹನವು 15 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಭಾರಿ ಸಂಚಲನವನ್ನೇ ಮೂಡಿಸಲಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2017ನೇ ಸಾಲಿನ ಎರಡನೇ ಅವಧಿಯಲ್ಲಿ ಜೀಪ್ ಬ್ರಾಂಡ್ ಭಾರತ ಪ್ರವೇಶವಾಗಲಿದೆ. ಹಾಗೊಂದು ವೇಳೆ ಜೀಪ್ ಭಾರತಕ್ಕೆ ಆಮದು ಮಾಡುವುದಾದ್ದಲ್ಲಿ 50 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅಂದರೆ ಭಾರತದಲ್ಲೇ ನಿರ್ಮಾಣ ಮಾಡುವ ಮೂಲಕ ಶೇಕಡಾ 180ರಷ್ಟು ಆಮದು ಶುಲ್ಕವನ್ನು ಉಳಿತಾಯ ಮಾಡಲಾಗುವುದು. ಇದಕ್ಕೂ ಮುಂಚಿತವಾಗಿ 2017 ವರ್ಷಾರಂಭದಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಜನಪ್ರಿಯ ಗ್ರಾಂಡ್ ಕೆರೊಕೆ ಮತ್ತು ವ್ರ್ಯಾಂಗ್ಲರ್ ಮಾದರಿಗಳನ್ನು ಪ್ರದರ್ಶಿಸಲಾಗುವುದು.

ಮಗದೊಂದು ಮೂಲದ ಪ್ರಕಾರ ಫಿಯೆಟ್‌ನ ಈ 'ಸಿ' ವಿಭಾಗದ ಎಸ್‌ಯುವಿಗಳು ಟಾಟಾ ಮೋಟಾರ್ಸ್‌ನ ಮಹಾರಾಷ್ಟ್ರ ಘಟಕದಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ 290 ಮಿಲಿಯನ್ ಡಾಲರ್ ಗಳ ಬೃಹತ್ ಹೂಡಿಕೆ ಮಾಡಲಾಗುವುದು ಎಂಬುದು ತಿಳಿದು ಬಂದಿದೆ.

Most Read Articles

Kannada
English summary
Fiat to make Jeep in India
Story first published: Monday, August 10, 2015, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X