ಫೋರ್ಡ್ 2015 ಎಂಡೋವರ್ ಎಂಜಿನ್ ವಿಶಿಷ್ಟತೆ

By Nagaraja

ಅಮೆರಿಕದ ವಾಹನ ದೈತ್ಯ ಸಂಸ್ಥೆಯಾಗಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಪ್ರಸಕ್ತ ಸಾಲಿನಲ್ಲೂ ಗಮನಾರ್ಹ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈಗಾಗಲೇ ಫಿಗೊ, ಕ್ಲಾಸಿಕ್, ಫಿಯೆಸ್ಟಾ, ಇಕೊಸ್ಪೋರ್ಟ್ ಮತ್ತು ಎಂಡೀವರ್ ಮಾದರಿಗಳು ದೇಶದ ರಸ್ತೆಯಲ್ಲಿ ಓಡಾಡುತ್ತಿದೆ. ಪ್ರಸ್ತುತ ಸಂಸ್ಥೆಯು ಇನ್ನಷ್ಟು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಈಗಿರುವ ಮಾದರಿಗಳ ಸ್ವರೂಪವನ್ನೇ ಬದಲಾಯಿಸಲು ಹೊರಟಿದೆ. ಇವುಗಳಲ್ಲಿ ನೆಕ್ಸ್ಟ್ ಜನರೇಷನ್ ಫಿಗೊ ಹಾಗೂ ಎಂಡೀವರ್ ಪ್ರಮುಖವೆನಿಸಿದೆ. ಹಾಗೆಯೇ ಹೊಸ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಯ ಯೋಜನೆಯಲ್ಲಿದೆ.

ford endeavour

ಹಾಗಿರುವಂತೆಯೇ ಅಮೆರಿಕ ಮೂಲದ ಈ ಸಂಸ್ಥೆಯು 2015 ಫೋರ್ಡ್ ಎಂಡೀವರ್ ಎಂಜಿನ್ ವಿಶಿಷ್ಟತೆಗಳ ಬಗೆಗಿನ ವಿವರವನ್ನು ಬಹಿರಂಗಗೊಳಿಸಿದೆ. ವಿಶೇಷವೆಂದರೆ ಹೊಸ ಫೋರ್ಡ್ ಎಂಡೀವರ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಭಾರತವನ್ನು ತಲುಪುತ್ತಿದೆ. ಇದು ಎರಡು ಡೀಸೆಲ್ ಹಾಗೂ ಏಕಮಾತ್ರ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.

ಪೆಟ್ರೋಲ್ - 2.0 ಲೀಟರ್ ಟ್ವಿನ್ ಸ್ಕ್ರಾಲ್ ಇಕೊಬೂಸ್ಟ್ ಎಂಜಿನ್ (234 ಬಿಎಚ್‌ಪಿ, 360 ಎನ್‌ಎಂ ಟಾರ್ಕ್)
ಡೀಸೆಲ್ - 2.2 ಲೀಟರ್ ಡ್ಯುರಾಟೆಕ್ ಟಿಡಿಸಿಐ ಡೀಸೆಲ್ ಎಂಜಿನ್ (147 ಅಶ್ವಶಕ್ತಿ, 385 ಪೀಕ್ ಟಾರ್ಕ್) ಮತ್ತು ಫೈವ್ ಸಿಲಿಂಡರ್ 3.2 ಲೀಟರ್ ಡ್ಯುರಾಟೆಕ್ ಡೀಸೆಲ್ ಎಂಜಿನ್ (197 ಅಶ್ವಶಕ್ತಿ, 470 ಪೀಕ್ ಟಾರ್ಕ್).

ಇವೆಲ್ಲವೂ ಆರು ಸ್ಪೀಡ್ ಮ್ಯಾನವಲ್ ಹಾಗೂ ಐಚ್ಛಿಕ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಅಂತೆಯೇ ಸ್ಟ್ಯಾಂಡರ್ಡ್ ಫ್ರಂಟ್ ವೀಲ್ ಡ್ರೈವ್ ವ್ಯವಸ್ಥೆಯ ಜೊತೆಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಪಡೆದುಕೊಳ್ಳಲಿದೆ.

ಇನ್ನು 2015 ಎಂಡೀವರ್ ಭಾರತ ಮಾದರಿಯು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ. ಅಂದರೆ ಪೆಟ್ರೋಲ್ ವೆರಿಯಂಟ್ ಲಭ್ಯವಿರುವುದಿಲ್ಲ. ಅಂತೆಯೇ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಹಾಗೂ ಟೊಯೊಟಾ ಫಾರ್ಚ್ಯುನರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
American automobile giant, Ford currently offers a few of its products in India. They plan to introduce three new products to its existing range of vehicles. At the 2014, Auto Expo, which was held in Delhi the manufacturer showcased its upcoming vehicles.
Story first published: Thursday, January 29, 2015, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X