ವಾರಂತ್ಯದ ಪ್ರವಾಸಕ್ಕೆ ಭಾರತೀಯರು ಹೆಚ್ಚು ಉತ್ಸುಕತೆ

By Nagaraja

ಅಮೆರಿಕ ಮೂಲದ ಹೆಸರಾಂತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಇಂಡಿಯಾ ನಡೆಸಿರುವ ಅಧ್ಯಯನದಲ್ಲಿ ವಾರಂತ್ಯದ ಪ್ರವಾಸದಲ್ಲಿ ಭಾರತೀಯರು ಹೆಚ್ಚು ಉತ್ಸುಕತೆ ತೋರಿರುವುದು ಕಂಡುಬಂದಿದೆ.

ಫೋರ್ಡ್ ಸಂಸ್ಥೆಯು ನಡೆಸಿರುವ 'ಫೋರ್ಡ್ ಡ್ರೈವಿಂಗ್ ಹ್ಯಾಬಿಟ್ಸ್ ಸರ್ವೆ'ಯಲ್ಲಿ ಈ ಅಂಶ ದಾಖಲಾಗಿದೆ. ಇದರಲ್ಲಿ ಬಯಲಾಗಿರುವಂತೆ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರು ವಾರಂತ್ಯದ ಸಣ್ಣ ಪಯಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ.

ford road trip

ವಿವಿಧ ದೇಶಗಳಲ್ಲಿನ ಪ್ರವಾಸದ ಆಸಕ್ತಿಯ ಸ್ಪಷ್ಟ ಮಾಹಿತಿ ಕಲೆ ಹಾಕುವುದು 'ಫೋರ್ಡ್ ಡ್ರೈವಿಂಗ್ ಹ್ಯಾಬಿಟ್ಸ್ ಸರ್ವೆ'ಯ ಇರಾದೆಯಾಗಿತ್ತು. ಇದರಂತೆ 10ರಲ್ಲಿ ಎಂಟು ಭಾರತೀಯರು ತಿಂಗಳಲ್ಲಿ ಕನಿಷ್ಠ ಒಮ್ಮೆಯಾದರೂ ಸಣ್ಣ ಪ್ರವಾಸ ಹಮ್ಮಿಕೊಳ್ಳುತ್ತಿರುವುದಾಗಿ ಕಂಡುಬಂದಿದೆ.

ವಿಕೇಂಡ್ ಸಣ್ಣ ಪ್ರವಾಸದ ವಿಚಾರಕ್ಕೆ ಬಂದಾಗ ನಾವು ಚೀನಾದೊಂದಿಗೆ ಸಮಾನತೆಯನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ದೇಶದಲ್ಲಿ ಯುವ ಗ್ರಾಹಕರು ಹೆಚ್ಚೆಚ್ಚು ವಾಹನಗಳನ್ನು ಖರೀದಿಸಿದ್ದು, ಹೊಸ ಹೊಸ ಜಾಗಗಳಿಗೆ ಪ್ರಯಾಣ ಹೋಗುವುದನ್ನು ಇಷ್ಟಪಡುತ್ತಿರುವುದಾಗಿ ಕಂಡಬಂದಿದೆ. ಇದೇ ಸಂದರ್ಭದಲ್ಲಿ ವಾಹನಗಳಲ್ಲಿ ವ್ಯಯಿಸುವ ಸಯಮದಲ್ಲೂ ಭಾರತದಲ್ಲಿ ವರ್ಧನೆ ಕಂಡುಬಂದಿದೆ.

ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ

ford time spent chart
Most Read Articles

Kannada
English summary
Ford India has conducted a rather interesting survey in which we have beaten all other nations. The American based manufacturer has conducted on of their ‘Ford Driving Habits Survey'.
Story first published: Saturday, March 14, 2015, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X