ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರಲಿರುವ ಇಕೊಸ್ಪೋರ್ಟ್

By Nagaraja

ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಕಾಪಾಡಿಕೊಂಡಿರುವ ಫೋರ್ಡ್ ಇಕೊಸ್ಪೋರ್ಟ್, ಹೊಸ ಸ್ವರೂಪವನ್ನು ಪಡೆದುಕೊಳ್ಳುವ ತವಕದಲ್ಲಿದೆ. ಇದರಂತೆ ಇಕೊಸ್ಪೋರ್ಟ್ ಫೇಸ್ ಲಿಫ್ಟ್ ಮಾದರಿಯು ಮತ್ತಷ್ಟು ಶಕ್ತಿಶಾಲಿ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಬಿಡುಗಡೆಯಾದ ಬಳಿಕ ಇಕೊಸ್ಪೋರ್ಟ್ ಒಮ್ಮೆಯೂ ಪರಿಷ್ಕೃತಗೊಂಡಿರಲಿಲ್ಲ. ಈಗ ತನ್ನೆಲ್ಲ ಮಾದರಿಗಳಿಗೆ ತಾಜಾತನವನ್ನು ನೀಡುವ ಇರಾದೆಯಲ್ಲಿರುವ ಅಮೆರಿಕ ಮೂಲದ ಈ ದೈತ್ಯ ಸಂಸ್ಥೆಯು ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಉತ್ಸಾಹದಲ್ಲಿದೆ.

ಫೋರ್ಡ್ ಇಕೊಸ್ಪೋರ್ಟ್

ಪ್ರಸ್ತುತ ಇಕೊಸ್ಪೋರ್ಟ್ ಭಾರತದಲ್ಲಿ ಏಕಮಾತ್ರ ಡೀಸೆಲ್ ಮತ್ತು ಕ್ರಾಂತಿಕಾರಿ ಇಕೊಬೂಸ್ಟ್ ಸೇರಿದಂತೆ ಎರಡು ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈಗ ಡೀಸೆಲ್ ಆಯ್ಕೆಯಲ್ಲಿ ಹೆಚ್ಚು ಶಕ್ತಿಶಾಲಿ ಮಾದರಿಯನ್ನು ಪರಿಚಯಿಸುವುದು ಸಂಸ್ಥೆಯ ಗುರಿಯಾಗಿದೆ.

ಈಗ ಲಭ್ಯವಿರುವ ಡೀಸೆಲ್ ಎಂಜಿನ್

  • ಎಂಜಿನ್ - 1.5 ಲೀಟರ್
  • ಅಶ್ವಶಕ್ತಿ: 89.81
  • ತಿರುಗುಬಲ: 204
  • ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ನಿಮ್ಮ ಮಾಹಿತಿಗಾಗಿ, ಪ್ರಸಕ್ತ ಸಾಲಿನಲ್ಲಿ ಮೂರು ಹೊಸ ಮಾದರಿಗಳನ್ನು ಫೋರ್ಡ್ ದೇಶದಲ್ಲಿ ಬಿಡುಗಡೆ ಮಾಡಲಿದೆ. ಅವುಗಳಲ್ಲಿ ಇಕೊಸ್ಪೋರ್ಟ್ ಫೇಸ್ ಲಿಫ್ಟ್ ಸೇರಿದಂತೆ ನೂತನ ಫಿಗೊ ಆಸ್ಪೈರ್ ಹಾಗೂ ಫಿಗೊ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಯಾಗಲಿದೆ.

Most Read Articles

Kannada
English summary
Ford has witnessed success with its first compact SUV in India, the EcoSport. It was launched in petrol and diesel engine options, along with their revolutionary EcoBoost engine as well.
Story first published: Friday, July 17, 2015, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X