ಫೋರ್ಡ್ ಆಸ್ಪೈರ್; ಈ 10 ವಿಚಾರಗಳ ಬಗ್ಗೆ ಗಮನವಿರಲಿ!

By Nagaraja

ಆಗಲೇ ಫೋರ್ಡ್ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು ಭಾರತ ಮಾರುಕಟ್ಟೆ ಪ್ರವೇಶಿಸುತ್ತಿರುವುದಾಗಿ ಎಲ್ಲ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದೆ. ಆದರೆ ತನ್ನ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಇತರ ಕಾರುಗಳಿಗಿಂತ ಹೊಸ ಫೋರ್ಡ್ ಕಾರು ಭಿನ್ನವಾಗಿ ಗುರುತಿಸಿಕೊಳ್ಳುವುದು ಹೇಗೆ?

ವಿಶೇಷವೆಂದರೆ ಫೋರ್ಡ್ ಗುಜರಾತ್ ನ ಸನಂದ್ ನಲ್ಲಿ ನಿರ್ಮಿಸಿರುವ ನೂತನ ಘಟಕದಿಂದ ಆಸ್ಪೈರ್ ಕಾರನ್ನು ಹೊರ ತರುತ್ತಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಟಾಟಾ ಬೋಲ್ಟ್ ಮತ್ತು ಹ್ಯುಂಡೈ ಎಕ್ಸ್ ಸೆಂಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಈಗ ಹೊಸ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳ ಬಗ್ಗೆ ವಿವರವಾಗಿ ವಿವರಿಸಲಿದ್ದೇವೆ.

10. ಬಿಡುಗಡೆ

10. ಬಿಡುಗಡೆ

2015 ಮಧ್ಯಂತರ ಅವಧಿಯಲ್ಲಿ ಫೋರ್ಡ್ ಆಸ್ಪೈರ್ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಇದು ವಾಹನ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

09. ಇಂಧನ ಕ್ಷಮತೆ

09. ಇಂಧನ ಕ್ಷಮತೆ

ಫೋರ್ಡ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್ ಗೆ 16ರಿಂದ 18 ಹಾಗೂ ಡೀಸೆಲ್ ಮಾದರಿಯು 23ರಿಂದ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿದೆ.

08. ಎಂಜಿನ್

08. ಎಂಜಿನ್

ನೂತನ ಫೋರ್ಡ್ ಕಾರಿನಲ್ಲಿ 1.2 ಲೀಟರ್ ಟಿಐವಿಸಿಟಿ ಪೆಟ್ರೋಲ್ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. ಇನ್ನು ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಸಿಕ್ಸ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಗಳು ಇದರಲ್ಲಿರಲಿದೆ.

07. ರಫ್ತು

07. ರಫ್ತು

ಭಾರತದಿಂದಲೇ ಯುರೋಪ್, ದಕ್ಷಿಣ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಿಗೂ ಫೋರ್ಡ್ ಆಸ್ಪೈರ್ ರಫ್ತು ಮಾಡುವ ಉದ್ದೇಶವನ್ನು ಫೋರ್ಡ್ ಹೊಂದಿದೆ.

06. ಸನಂದ್ ಘಟಕ

06. ಸನಂದ್ ಘಟಕ

ಗುಜರಾತ್ ನ ಸನಂದ್ ಘಟಕದಿಂದ ಹೊರಬರಲಿರುವ ಮೊದಲ ಕಾರು ಇದಾಗಿರಲಿದೆ. ಬರೋಬ್ಬರಿ 468 ಎಕ್ರೆ ಜಾಗದಲ್ಲಿ ಫೋರ್ಡ್ ಸನಂದ್ ಘಟಕ ತಲೆಯೆತ್ತಿದೆ.

05. ವಿನ್ಯಾಸ

05. ವಿನ್ಯಾಸ

ಆಕ್ರಮಣಕಾರಿ ವಿನ್ಯಾಸ ಶೈಲಿಯು ಬಹು ಬೇಗನೇ ವಾಹನ ಪ್ರೇಮಿಗಳ ಗಮನ ಸೆಳೆಯುವ ಸಾಧ್ಯತೆಯಿದೆ. ಇದರಲ್ಲೂ ಮುಂದುಗಡೆ ಇಕೊಸ್ಪೋರ್ಟ್ ಗೆ ಸಮಾನವಾದ ಗ್ರಿಲ್ ಬಳಕೆ ಮಾಡಲಾಗಿದೆ.

04. ಕನೆಕ್ಟಿವಿಟಿ

04. ಕನೆಕ್ಟಿವಿಟಿ

ನೂತನ ಆಸ್ಪೈರ್ ಕಾರಿನಲ್ಲಿ ಫೋರ್ಡ್ ಸಿಂಕ್ (ಎಸ್ ವೈಎನ್ ಸಿ) ಜೊತೆ ಆಪ್ ಲಿಂಕ್ ತಂತ್ರಜ್ಞಾನ ಆಳವಡಿಕೆಯಾಗಲಿದೆ. ಬ್ಲೂಟೂತ್ ಆನ್ ಮಾಡಿ ಫೋನ್ ಗೆ ಸಂಪರ್ಕಿಸುವ ಮೂಲಕ ಹ್ಯಾಂಡ್ ಫ್ರೀಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ.

03. ತುರ್ತು ನೆರವು

03. ತುರ್ತು ನೆರವು

ಈ ಮೊದಲು ಇಕೊಸ್ಪೋರ್ಟ್ ನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಎರ್ಮಜನ್ಸಿ ಅಸಿಸ್ಟನ್ಸ್ ಸೇವೆಯು ಹೊಸ ಕಾಂಪಾಕ್ಟ್ ಕಾರಿನಲ್ಲೂ ಲಭ್ಯವಾಗಲಿದೆ ಎಂಬುದು ಧನಾತ್ಮಕ ಅಂಶವಾಗಿದೆ. ಇಲ್ಲಿ ಬ್ಲೂಟೂತ್ ಸಂಪರ್ಕಿತ ಫೋನ್ ಅಪಘಾತ ಸಂದರ್ಭದಲ್ಲಿ ನೆರವಾಗಿ ತುರ್ತು ಸಹಾಯ ಕೇಂದ್ರಗಳಿಗೆ ಸಂದೇಶವನ್ನು ರವಾನಿಸಲಿದ್ದು, ಅಪಘಾತ ನಡೆದ ಸ್ಥಳ ಹಾಗೂ ವಾಹನದ ಬಗೆಗಿನ ಅಗತ್ಯ ಮಾಹಿತಿಗಳನ್ನು ರವಾನಿಸಲಿದೆ.

02. ಸುರಕ್ಷತೆ

02. ಸುರಕ್ಷತೆ

ಪ್ರಯಾಣಿಕರ ಸುರಕ್ಷತೆಗೂ ಅಮೆರಿಕ ಮೂಲದ ಈ ಐಕಾನಿಕ್ ಸಂಸ್ಥೆಯು ಆದ್ಯತೆ ಕೊಡುತ್ತಿದ್ದು, ಇದೇ ಮೊದಲ ಬಾರಿಗೆ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಚಾಲಕ, ಪ್ರಯಾಣಿಕ, ಬದಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಸೌಲಭ್ಯಗಳು ಲಭ್ಯವಾಗಲಿದೆ.

01. ನಿರೀಕ್ಷಿತ ಬೆಲೆ

01. ನಿರೀಕ್ಷಿತ ಬೆಲೆ

ನೂತನ ಫೋರ್ಡ್ ಆಸ್ಪೈರ್ ಕಾರು ಐದು ಲಕ್ಷ ರು.ಗಳಿಂದ ಏಳು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಹ್ಯಾಚ್ ಬ್ಯಾಕ್ ಗಿಂತಲೂ ಮಿಗಿಲಾಗಿ ಹೆಚ್ಚು ಸ್ಥಳಾವಕಾಶಯುಕ್ತ ಕಾರು ಎದುರು ನೋಡುತ್ತಿರುವವರಿಗೆ ಹೆಚ್ಚು ಸೂಕ್ತವೆನಿಸಲಿದೆ.

Most Read Articles

Kannada
English summary
The Ford Figo Aspire compact sedan was recently revealed by Ford India, and will aim to take on the Honda Amaze, Tata Zest, Maruti Swift Dzire and Hyundai Xcent from the word go.
Story first published: Saturday, March 28, 2015, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X