ಸದ್ದಿಲ್ಲದೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಫೋರ್ಡ್

By Nagaraja

ಭಾರತಕ್ಕೆ ಅತ್ಯಾಕರ್ಷಕ ಮಾದರಿಗಳನ್ನು ಪರಿಚಯಿಸಿರುವ ಅಮೆರಿಕದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಮೋಟಾರು ಇಂಡಿಯಾ ಸಂಸ್ಥೆಯೀಗ ಸದ್ದಿಲ್ಲದೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

ಈಗಾಗಲೇ ಬಹುತೇಕ ಎಲ್ಲ ಸಂಸ್ಥೆಗಳು ಬೆಲೆ ಏರಿಕೆ ಘೋಷಿಸಿದೆ. ಇದೇ ಹಾದಿಯನ್ನು ಅನುಸರಿಸಿರುವ ಫೋರ್ಡ್ ಕೂಡಾ ತನ್ನ ಜನಪ್ರಿಯ ಫಿಯೆಸ್ಟಾ ಮಾದರಿಗೆ ಬೆಲೆ ಏರಿಕೆಗೊಳಸಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದಾಗ ಫಿಯೆಸ್ಟ್ ದೆಹಲಿ ಎಕ್ಸ್ ‌ಶೋರೂಂ ಬೆಲೆ 7.69 ಲಕ್ಷ ರು.ಗಳಿಂದ 9.29 ಲಕ್ಷ ರು.ಗಳಿಷ್ಟಿತ್ತು. ಹೊಸ ದರ ಇಂತಿದೆ.

2015 ford fiesta

ಎಕ್ಸ್ ಶೋ ರೂಂ ದೆಹಲಿ
ಫಿಯೆಸ್ಟಾ ಆಂಬಿಯಂಟ್ - 8.50 ಲಕ್ಷ ರು.
ಫಿಯೆಸ್ಟಾ ಟ್ರೆಂಡ್ - 9.39 ಲಕ್ಷ ರು.
ಫಿಯೆಸ್ಟಾ ಟೈಟಾನಿಯಂ - 10.18 ಲಕ್ಷ ರು.

ಪ್ರಸ್ತುತ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಫಿಯೆಸ್ಟಾ ಲಭ್ಯವಿರುತ್ತದೆ. ಇದರ 1.5 ಲೀಟರ್ ಡೀಸೆಲ್ ಎಂಜಿನ್ 91 ಅಶ್ವಶಕ್ತಿ (204 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇದರಲ್ಲಿರಲಿದೆ. ಆದರೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೊರತೆ ಕಾಡಲಿದೆ.

ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರ್ ಬ್ಯಾಗ್, ಎಬಿಎಸ್, ಇಬಿಡಿ, ಎಂಜಿನ್ ಇಂಮೊಬಿಲೈಜರ್, ಡೋರ್ ಬಲವರ್ಧನೆ, ಬಲ ಹೀರಿಕೊಳ್ಳುವ ಬಂಪರ್ ಮುಂತಾದ ವೈಶಿಷ್ಟ್ಯಗಳು ಲಭ್ಯವಿರಲಿದೆ.

ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಫೋರ್ಡ್ ಇಂತಹದೊಂದು ನಿರ್ಧಾರಕ್ಕೆ ಬಂದಿದೆ. ಇನ್ನೊಂದೆಡೆ ಕಳೆದ ವರ್ಷ ನೀಡಿಕೊಂಡು ಬರುತ್ತಿದ್ದ ಅಬಕಾರಿ ಸುಂಕ ವಿನಾಯಿತಿ ನಿಲುಗಡೆಗೊಳಿಸಿರುವುದು ಸಹ ಮಾರಕವಾಗಿ ಪರಿಣಮಿಸಿದೆ.

Most Read Articles

Kannada
English summary
Ford India too has silently increased the prices of its Fiesta sedan. This is due to excise benefit not continuing for 2015.
Story first published: Tuesday, January 27, 2015, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X