ಪ್ರಸಕ್ತ ಸಾಲಿನಲ್ಲಿ ಫೋರ್ಡ್ ನಿಂದ ಮೂರು ಕೊಡುಗೆಗಳು

By Nagaraja

ಹೌದು, ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಪ್ರಸಕ್ತ ಸಾಲಿನಲ್ಲಿ ಮೂರು ನೂತನ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ದೇಶದ ಜನತೆಯಲ್ಲಿ ಹೊಸ ಹುಮ್ಮಸನ್ನು ಸೃಷ್ಟಿಮಾಡಲಿದೆ.

2015ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋರ್ಡ್ ಮಾದರಿಗಳು

  • ಫಿಗೊ ಆಸ್ಪೈರ್,
  • ಫಿಗೊ ಹ್ಯಾಚ್ ಬ್ಯಾಕ್,
  • ಎಂಡೀವರ್ ಎಸ್ ಯುವಿ
ಫಿಗೊ ಆಸ್ಪೈರ್
ಈ ಪೈಕಿ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದ್ದು, ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ತದಾ ಬಳಿಕ ಹಳೆಯ ಫಿಗೊ ಸಣ್ಣ ಕಾರನ್ನು ನೂತನ ಫಿಗೆ ಹ್ಯಾಚ್ ಬ್ಯಾಕ್ ಬದಲಾಯಿಸಲಿದೆ. ಹಾಗೆಯೇ ಎಂಡೀವರ್ ಕ್ರೀಡಾ ಬಳಕೆಯ ವಾಹನ ಸಹ ಭಾರತ ಪ್ರವೇಶವಾಗುತ್ತಿದೆ.

ಭಾರತದಲ್ಲಿರುವ ತನ್ನ ಶ್ರೇಣಿಯ ವಾಹನಗಳಿಗೆ ಹೊಸ ಆಯಾಮ ನೀಡುವುದರೊಂದಿಗೆ ನೂತನ ಸೆಗ್ಮೆಂಟ್ ನಲ್ಲಿ ಹೊಸ ಕಾರುಗಳನ್ನು ಪರಿಚಯಿಸುವುದು ಫೋರ್ಡ್ ಗುರಿಯಾಗಿದೆ. ಇವೆಲ್ಲಕ್ಕೂ ಇಕೊಸ್ಪೋರ್ಟ್ ದೇಶದಲ್ಲಿ ಸಾಧಿಸಿರುವ ಯಶಸ್ಸಿಗೆ ಸ್ಪೂರ್ತಿಯಾಗಿದೆ.

ಫಿಗೊ ಹ್ಯಾಚ್ ಬ್ಯಾಕ್

ಇನ್ನು ವಿಶೇಷವೆಂದರೆ ಈ ಎಲ್ಲ ಮೂರು ಮಾದರಿಗಳು ಭಾರತದಲ್ಲೇ ನಿರ್ಮಾಣವಾಗಲಿದೆ. ಅಲ್ಲದೆ ಇಲ್ಲಿಂದರೆ ರಫ್ತು ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇವೆಲ್ಲವೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಈ ಪೈಕಿ ಫೋರ್ಡ್ ಆಸ್ಪೈರ್ ಮತ್ತು ಫಿಗೊ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಸಮಾನ ಎಂಜಿನ್ ಬಳಕೆಯಾಗಲಿದೆ. ಒಟ್ಟಿನಲ್ಲಿ ನೂತನ ಹಾಗೂ ಪರಿಷ್ಕೃತ ಮಾದರಿಗಳು ದೇಶದಲ್ಲಿ ಫೋರ್ಡ್ ಮಾರಾಟಕ್ಕೆ ಉತ್ತೇಜನ ನೀಡಲಿದೆ.

ಫೋರ್ಡ್ ಎಂಡೀವರ್

ಇಲ್ಲಿಗೆ ಫೋರ್ಡ್ ಕೊಡುಗೆ ಕೊನೆಗೊಳ್ಳುವುದಿಲ್ಲ. ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಕೆಲವು ಅಚ್ಚರಿಗಳನ್ನು ವಾಹನ ಪ್ರೇಮಿಗಳು ನಿರೀಕ್ಷೆ ಮಾಡಬಹುದಾಗಿದೆ. ಇವುಗಳಲ್ಲಿ ಐಕಾನಿಕ್ ಫೋರ್ಡ್ ಮಸ್ಟಾಂಗ್ ಹಾಗೂ ಇಕೊಸ್ಪೋರ್ಟ್ ಫೇಸ್ ಲಿಫ್ಟ್ ಮಾದರಿಗಳು ಆಗಮಿಸುವ ಸಾಧ್ಯತೆಯಿದೆ.
Most Read Articles

Kannada
Read more on ಫೋರ್ಡ್ ford
English summary
American automobile giant, Ford has huge plans for India during 2015. They will be introducing three all-new products to the market during 2015.
Story first published: Wednesday, July 15, 2015, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X