ಜರ್ಮನಿಯ ಆಟೋಬಾನ್ ಹೈವೇಯಲ್ಲಿ ಸ್ವಯಂಚಾಲಿತ ಕಾರು ಪರೀಕ್ಷೆ

By Nagaraja

ಜಗತ್ತಿನ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ಭವಿಷ್ಯದ ಸಂಚಾರ ವಾಹಕ ಎಂದೇ ಕರೆಯಲ್ಪಡುವ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇಂತಹದೊಂದು ಕನಸು ನನಸಾಗುವುದಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲು ಹೊರಟಿರುವ ಜರ್ಮನಿ ಸರಕಾರ, ವಿಶ್ವ ವಿಖ್ಯಾತ ಆಟೋಬಾನ್ ಹೈವೇಯಲ್ಲಿ ಸೆಲ್ಪ್ ಡ್ರೈವ್ ಕಾರುಗಳ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಆಟೋಬಾನ್ ಹೆದ್ದಾರಿಯ ವಿಶಿಷ್ಟತೆ ಏನು?

ಜರ್ಮನಿಯ ಆಟೋಬಾನ್ ಹೈವೇ ಅತ್ಯಾಧುನಿಕ ತಾಜಾ ತಂತ್ರಗಾರಿಕೆಯನ್ನು ಹೊಂದಿದ್ದು, ಇಲ್ಲಿ ರಸ್ತೆ ಸೆನ್ಸಾರ್ ಮುಂತಾದ ತಂತ್ರಜ್ಞಾನಗಳನ್ನು ಆಳವಡಿಸಲಾಗುತ್ತದೆ. ಇದರಂತೆ ಸ್ವಯಂ ಚಾಲಿತ ಕಾರುಗಳು ಪರೀಕ್ಷೆ ನಡೆಯಲಿದೆ.

germany autobahn

ಜರ್ಮನಿ ಸಾರಿಗೆ ಸಚಿವ ಅಲೆಕ್ಸಾಂಡರ್ ಡೊಬ್‌ರಿನ್ಡ್ಟ್ ಪ್ರಕಾರ, ಆರಂಭದಲ್ಲಿ ಅಸಿಸ್ಟಡ್ ತದಾ ಬಳಿಕ ಸಂಪೂರ್ಣವಾಗಿ ಆಟೋಮ್ಯಾಟಿಕ್ ಕಾರುಗಳನ್ನು ಪರೀಕ್ಷೆ ನಡೆಸಲಾಗುವುದು.

ಇನ್ನು ಗಮನಾರ್ಹ ಸಂಗತಿಯೆಂದರೆ ವಿಶ್ವದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಗಳನ್ನು ಜರ್ಮನಿಯ ಸರಕಾರವು, ಆಟೋಮ್ಯಾಟಿಕ್ ತಂತ್ರಜ್ಞಾನಕ್ಕಾಗಿ ಗೂಗಲ್‌ನ ಸಂಸ್ಥೆಗಳನ್ನು ಆಶ್ರಯಿಸಲು ಬಯಸುತ್ತಿಲ್ಲ. ಅಂದರೆ ಬಿಎಂಡಬ್ಲ್ಯು ಹಾಗೂ ಫೋಕ್ಸ್‌ವ್ಯಾಗನ್‌ಗಳಂತಹ ಸಂಸ್ಥೆಗಳೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ.

ಇದಕ್ಕೆ ಪೂರಕವಾಗಿ ಆಡಿ ಅಭಿವೃದ್ಧಪಡಿಸಿರುವ ಆರ್‌ಎಸ್7 ಸೆಲ್ಫ್ ಡ್ರೈವಿಂಗ್ ಕಾರು, ಫ್ರಾಂಕ್‌ಫರ್ಟ್ ರೇಸ್ ಟ್ರ್ಯಾಕ್‌ನಲ್ಲಿ ಗಂಟೆಗೆ 240 ಕೀ.ಮೀ. ವೇಗದಲ್ಲಿ ಸಂಚರಿಸಲು ಸಜ್ಜಾಗಿದೆ.

Most Read Articles

Kannada
English summary
The German government wants to use one section of the Autobahn in Bavaria to test latest technologies in cars, including self-driving cars.
Story first published: Wednesday, January 28, 2015, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X