ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

By Nagaraja

ದೇಶದಲ್ಲಿ ಹೋಂಡಾ ಭವಿಷ್ಯದ ಯೋಜನೆಗಳಲ್ಲಿ ಅತಿ ನೂತನ ಬಿಆರ್-ವಿ ಕೂಡಾ ಒಂದಾಗಿದೆ. ಆದರೆ ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಭಾರತದಲ್ಲಿ ಹೋಂಡಾ ಬಿಆರ್‌ವಿ ನಿರ್ಮಾಣ ಪ್ರಕ್ರಿಯೆಯು 2016ನೇ ಸಾಲಿನಲ್ಲಷ್ಟೇ ಆರಂಭವಾಗಲಿದೆ.

ಅಂದರೆ ಹೋಂಡಾ ಬಿಆರ್‌ವಿ ಆಗಮನಕ್ಕಾಗಿ ವಾಹನ ಪ್ರೇಮಿಗಳು ಮತ್ತಷ್ಟು ಸಮಯ ಕಾಯಬೇಕಾಗಿದ್ದು, 2016 ವರ್ಷಾಂತ್ಯದಲ್ಲಿ ಅಥವಾ 2017ನೇ ವರ್ಷಾರಂಭದಲ್ಲಷ್ಟೇ ಮಾರುಕಟ್ಟೆಯನ್ನು ತಲುಪಲಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ನಿಮ್ಮ ಮಾಹಿತಿಗಾಗಿ ಬಿಆರ್-ವಿ ಒಂದು ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವಾಗಿದ್ದು, ಬ್ರಿಯೊ ತಳಹದಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ಇಂಡೋನೇಷ್ಯಾ ಮೋಟಾರು ಶೋದಲ್ಲಿ ಈಗಾಗಲೇ ಪ್ರದರ್ಶನ ಕಂಡಿರುವ ಹೋಂಡಾ ಬಿಆರ್-ವಿ ರಾಜಸ್ತಾನದ ತಪುಕರ ಘಟಕದಲ್ಲಿ ನಿರ್ಮಾಣ ಆರಂಭವಾಗಲಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲ ನೂತನ 1.6 ಡೀಸೆಲ್ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಸಿವಿಟಿ ಆಯ್ಕೆಯೂ ಪಡೆಯಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದೇ ಎಂಜಿನ್ ಆಯ್ಕೆಯನ್ನು ಜನಪ್ರಿಯ ಸಿಆರ್-ವಿ ಹಾಗೂ ಸಿವಿಕ್ ಮಾದರಿಗಳಲ್ಲಿ ನೀಡಲಾಗುತ್ತಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುವುದು. ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಐರ್ ಬ್ಯಾಗ್ ಪ್ರಮುಖ ಆಯ್ಕೆಯಾಗಿರಲಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ಭಾರತದಲ್ಲಿ ಕಾರಿನಲ್ಲಿ ಕುಟುಂಬ ಸಮೇತ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ಕೊಡುವುದರಿಂದ ಇದನ್ನೇ ಗಮನದಲ್ಲಿಟ್ಟುಕೊಂಡು 2+3+2 ಆಸನ ವ್ಯವಸ್ಥೆಯನ್ನು ಕೊಡಲಾಗುವುದು.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ದೇಶದಲ್ಲಿ ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್, ನಿಸ್ಸಾನ್ ಟೆರನೊ ಮಾದರಿಗಳಿಗೆ ನೂತನ ಎಚ್ ಆರ್ ವಿ ಪ್ರತಿಸ್ಪರ್ಧಿಯಾಗಲಿದೆ.

ಭಾರತಕ್ಕೆ ಹೋಂಡಾ ಬಿಆರ್‌ವಿ ಕಾಂಪಾಕ್ಟ್ ಎಸ್‌ಯುವಿ

ಅಂತಿಮವಾಗಿ ಹೋಂಡಾ ಬಿಆರ್ ವಿ ಮಿನಿ ಎಸ್‌ಯುವಿ 2016 ವರ್ಷಾರಂಭದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

Most Read Articles

Kannada
Read more on ಹೋಂಡಾ honda
English summary
Honda BR-V Compact SUV To Be Produced In India By Mid-2016
Story first published: Friday, October 9, 2015, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X