ಹ್ಯುಂಡೈ ಕ್ರೆಟಾ 40,000 ಬುಕ್ಕಿಂಗ್ಸ್; ಡಿಸೆಂಬರ್ ವರೆಗೆ ಸೋಲ್ಡ್ ಔಟ್!

By Nagaraja

ಇತ್ತೀಚೆಗಷ್ಟೇ ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯ ಬಹುನಿರೀಕ್ಷಿತ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಕ್ರೆಟಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ 40,000ಕ್ಕೂ ಹೆಚ್ಚು ಮುಗಂಡ ಬುಕ್ಕಿಂಗ್ಸ್ ಗಳನ್ನು ದಾಖಲಿಸಿಕೊಂಡಿದೆ.

ಇದರ ಬೆನ್ನಲ್ಲೇ ಡಿಸೆಂಬರ್ ವರೆಗಿನ ಮಾರಾಟ ಸೋಲ್ಡ್ ಔಟ್ ಆಗಿದೆ ಎಂಬುದನ್ನು ಸಂಸ್ಥೆಯು ಖಚಿತಪಡಿಸಿದೆ. ಅಲ್ಲದೆ ಬಹುಬೇಗನೇ ಬುಕ್ ಮಾಡಿದ ಗ್ರಾಹಕರಿಗೆ ಕ್ರೆಟಾ ಕಾರನ್ನು ಹಸ್ತಾಂತರಿಸುವುದರಲ್ಲಿ ಮಗ್ನವಾಗಿರುವ ಸಂಸ್ಥೆಯು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ.

ಹ್ಯುಂಡೈ ಕ್ರೆಟಾ 40,000 ಬುಕ್ಕಿಂಗ್ಸ್; ಡಿಸೆಂಬರ್ ವರೆಗೆ ಸೋಲ್ಡ್ ಔಟ್

ಹ್ಯುಂಡೈ ಕ್ರೆಟಾ ಕ್ರೀಡಾ ಬಳಕೆಯ ವಾಹನವು ಜುಲೈ 21ರಂದು ಬಿಡುಗಡೆಯಾಗಿತ್ತು. ಇದು ಬಿಡುಗಡೆಗೂ ಮುಂಚೆಯೇ 15,000ದಷ್ಟು ಮುಂಗಡ ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಂಡಿತ್ತು. ಇದರ ಮುಂದುವರಿದ ಬೆಳವಣಿಯಂತೆಯೇ ಬಿಡುಗಡೆಯಾದ ಮೊದಲ ತಿಂಗಳಲ್ಲೇ 6700ರಷ್ಟು ಯುನಿಟ್ ಮಾರಾಟ ದಾಖಲಿಸಿತ್ತು.

ಹ್ಯುಂಡೈ ಕ್ರೆಟಾ 40,000 ಬುಕ್ಕಿಂಗ್ಸ್; ಡಿಸೆಂಬರ್ ವರೆಗೆ ಸೋಲ್ಡ್ ಔಟ್

ಬಲ್ಲ ಮೂಲಗಳ ಪ್ರಕಾರ ಈಗಾಗಲೇ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾರಾಟವನ್ನು ಹಿಂದಿಕ್ಕಿರುವ ಕ್ರೆಟಾ ಕಾಯುವಿಕೆ ಅವಧಿಯು ಆರು ತಿಂಗಳಷ್ಟು ವಿಸ್ತರಣೆಯಾಗಿದೆ. ಇದು ಈ ಜನಪ್ರಿಯ ಕಾರಿನ ಬೇಡಿಕೆಗೆ ಸಾಕ್ಷಿಯಾಗಿದೆ.

ಹ್ಯುಂಡೈ ಕ್ರೆಟಾ 40,000 ಬುಕ್ಕಿಂಗ್ಸ್; ಡಿಸೆಂಬರ್ ವರೆಗೆ ಸೋಲ್ಡ್ ಔಟ್

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹ್ಯುಂಡೈ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, "ಜುಲೈ ತಿಂಗಳಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ 6,000 ಯುನಿಟ್ ಗಳಷ್ಟು ಕ್ರೆಟಾ ಉತ್ಪಾದಿಸುವ ಯೋಜನೆ ಇರಿಸಿಕೊಳ್ಳಲಾಗಿತ್ತು. ಆದರೆ ಈಗ ಗ್ರಾಹಕರಿಂದ ಅತೀವ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆಯನ್ನು 7,000 ಯುನಿಟ್ ಗಳಿಗೆ ಹೆಚ್ಚಳಗೊಳಿಸಲಾಗಿದೆ" ಎಂದಿದ್ದಾರೆ.

ಹ್ಯುಂಡೈ ಕ್ರೆಟಾ 40,000 ಬುಕ್ಕಿಂಗ್ಸ್; ಡಿಸೆಂಬರ್ ವರೆಗೆ ಸೋಲ್ಡ್ ಔಟ್

8.59 ಲಕ್ಷ ರು.ಗಳಿಂದ 13.60 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಗೊಂಡಿರುವ ಕ್ರೆಟಾ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ 1.6 ಲೀಟರ್ ವಿಟಿವಿಟಿ ಪೆಟ್ರೋಲ್ ಎಂಜಿನ್ 151 ಎನ್ ಎಂ ತಿರುಗುಬಲದಲ್ಲಿ 121 ಅಶ್ವಶಕ್ತಿಯನ್ನು ಹಾಗೂ 1.6 ಲೀಟರ್ ಸಿಆರ್ ಡಿಐ ಡೀಸೆಲ್ ಎಂಜಿನ್ 259 ಎನ್ ಎಂ ತಿರುಗುಬಲದಲ್ಲಿ 126 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದೆ. ಮಗದೊಂದು 1.4 ಲೀಟರ್ ಸಿಆರ್‌ಡಿಐ ಎಂಜಿನ್ 220 ತಿರುಗುಬಲದಲ್ಲಿ 90 ಅಶ್ವಶಕ್ತಿ ಉತ್ಪಾದಿಸಲಿದೆ. ಈ ಪೈಕಿ ಪೆಟ್ರೋಲ್ ಹಾಗೂ 1.4 ಡೀಸೆಲ್ ಎಂಜಿನ್ ಗಳು ಆರ್ ಸ್ಪೀಡ್ ಮ್ಯಾನುವಲ್ ಅಂತೆಯೇ 1.6 ಲೀಟರ್ ಡೀಸೆಲ್ ಎಂಜಿನ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದಿದೆ.

ಮೈಲೇಜ್:

ಮೈಲೇಜ್:

  • ಕ್ರೆಟಾ ಪೆಟ್ರೋಲ್ 1.6: 15.29 km/l
  • ಕ್ರೆಟಾ ಡೀಸೆಲ್ 1.4: 21.38 km/l
  • ಕ್ರೆಟಾ ಡೀಸೆಲ್ 1.6 ಮ್ಯಾನುವಲ್: 19.67 km/l
  • ಕ್ರೆಟಾ ಡೀಸೆಲ್ 1.6 ಆಟೋಮ್ಯಾಟಿಕ್: 17.01 km/l

Most Read Articles

Kannada
English summary
Hyundai To Increase Production Numbers For Creta
Story first published: Thursday, September 3, 2015, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X