ಹ್ಯುಂಡೈ ಎಲಂಟ್ರಾ 2015 ಬಿಡುಗಡೆ; ಅಂತದ್ದೇನಿದೆ?

By Nagaraja

ಆಧುನಿಕತೆಗೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿರುವ ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಯು ಎಲ್ಲ ಹೊಸತನದ 2015 ಹ್ಯುಂಡೈ ಎಲಂಟ್ರಾ ಕಾರನ್ನು ಬಿಡುಗಡೆ ಮಾಡಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಕಾರಲ್ಲಿ ಕಂಡುಬರುವ ಪ್ರಮುಖ ವೈಶಿಷ್ಟ್ಯಗಳೇನು ? ಈ ಬಗ್ಗೆ ಇಲ್ಲಿ ಮಾಹಿತಿ ಕೊಡುವ ಪ್ರಯತ್ನ ಮಾಡಲಾಗುವುದು.

 07. ತ್ರಿಡಿ ತತ್ವಶಾಸ್ತ್ರ

07. ತ್ರಿಡಿ ತತ್ವಶಾಸ್ತ್ರ

ನೂತನ ಎಲಂಟ್ರಾ ಕಾರಿನಲ್ಲಿ ತ್ರಿಡಿ ಅಥವಾ ಮೂರು ಡಿಗಳ ತತ್ವಶಾಸ್ತ್ರಗಳನ್ನು ಅನುಸರಿಸಲಾಗಿದೆ. ಇಲ್ಲಿ ಮೂರು ಡಿ ಎಂಬುದು ಡಿಲೈಟ್ ಫುಲ್ ಫರ್ಫಮನ್ಸ್, ಡಿಸೈನ್ ಫಿನೆಸ್ ಹಾಗೂ ಡ್ರೈವಿಂಗ್ ಪ್ಲೆಶರ್ ಎಂಬುದನ್ನು ಬಿಂಬಿಸುತ್ತದೆ.

06. ಪ್ರೀಮಿಯಂ ಸೆಡಾನ್

06. ಪ್ರೀಮಿಯಂ ಸೆಡಾನ್

ಪ್ರೀಮಿಯಂ ವಿಭಾಗದಲ್ಲಿ ಹೊಸ ಎಲಂಟ್ರಾ ಗರಿಷ್ಠ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಎಲಂಟ್ರಾ ಭಾರತದಲ್ಲೂ ಮೋಡಿ ಮಾಡುವ ನಿರೀಕ್ಷೆ ಹೊಂದಿದೆ.

05. ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

05. ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

2015 ಎಲಂಟ್ರಾ ಎಸ್ ಪೆಟ್ರೋಲ್ - 14,13 ಲಕ್ಷ ರು.

2015 ಎಲಂಟ್ರಾ ಎಸ್ ಎಕ್ಸ್ ಪೆಟ್ರೋಲ್ - 15,41 ಲಕ್ಷ ರು.

2015 ಎಲಂಟ್ರಾ ಎಸ್ ಎಕ್ಸ್ ಆಟೋಮ್ಯಾಟಿಕ್ ಪೆಟ್ರೋಲ್ 16,49 ಲಕ್ಷ ರು.

2015 ಎಲಂಟ್ರಾ ಬೇಸ್ ಡೀಸೆಲ್ - 14,57 ಲಕ್ಷ ರು.

2015 ಎಲಂಟ್ರಾ ಎಸ್ ಡೀಸೆಲ್ - 15,35 ಲಕ್ಷ ರು.

2015 ಎಲಂಟ್ರಾ ಎಸ್ ಎಕ್ಸ್ ಡೀಸೆಲ್ - 16,67 ಲಕ್ಷ ರು.

2015 ಎಲಂಟ್ರಾ ಎಸ್ ಎಕ್ಸ್ ಆಟೋಮ್ಯಾಟಿಕ್ ಡೀಸೆಲ್ - 17,94 ಲಕ್ಷ ರು.

04. ವಿನ್ಯಾಸ

04. ವಿನ್ಯಾಸ

ಸ್ಟೈಲಿಷ್ ಫ್ರಂಟ್ ಬಂಪರ್, ಕ್ರೋಮ್ ಗ್ರಿಲ್, ಪರಿಷ್ಕೃತ ಫಾಗ್ ಲ್ಯಾಂಪ್, ಪ್ರೊಜೆಕ್ಟರ್ ಹೆಡ್ ಲೈಟ್ ಮತ್ತು ಎಲ್ ಇಡಿ ಲೈಟ್ ಗಳು ಇನ್ನು ಹೆಚ್ಚು ಆಕರ್ಷಣೆಯನ್ನು ತುಂಬಲಿದೆ. ಹಾಗೆಯೇ 10 ಸ್ಪೋಕ್ 16 ಇಂಚುಗಳ ಅಲಾಯ್ ವೀಲ್, ರಿಯರ್ ಕಾಂಬಿನೇಷನ್ ಲ್ಯಾಂಪ್, ಹಿಂದುಗಡೆ ಸ್ಪೋರ್ಟಿ ಡ್ಯುಯಲ್ ಟೋನ್ ಬಂಪರ್ ಮತ್ತು ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್ ಕಂಡುಬರಲಿದೆ.

03. ಎಂಜಿನ್

03. ಎಂಜಿನ್

1.8 ಲೀಟರ್ ಡ್ಯುಯಲ್ ವಿಟಿವಿಟಿ ಪೆಟ್ರೋಲ್ - 147.40 ಅಶ್ವಶಕ್ತಿ, 177.50 ತಿರುಗುಬಲ, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 16.3 kpl, 6 ಸ್ಪೀಡ್ ಆಟೋಮ್ಯಾಟಿಕ್ ಮೈಲೇಜ್ 14.34 kpl.

1.6 ಲೀಟರ್ ವಿಜಿಟಿ ಸಿಆರ್ ಡಿಐ ಡೀಸೆಲ್ - 126.20 ಅಶ್ವಶಕ್ತಿ, 259.87 ತಿರುಗುಬಲ, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮೈಲೇಜ್ 22.7 kpl, 6 ಸ್ಪೀಡ್ ಆಟೋಮ್ಯಾಟಿಕ್ ಮೈಲೇಜ್ 19.11 kpl

02. ವಿಶೇಷತೆ

02. ವಿಶೇಷತೆ

ಆರು ಬಣ್ಣಗಳಲ್ಲಿ ಲಭ್ಯವಿರುವ ನೂತನ ಎಲಂಟ್ರಾ ಆಟೋ ಹೆಡ್ ಲ್ಯಾಂಪ್, ಸ್ಮಾರ್ಟ್ ಕೀ, ಪುಶ್ ಬಟನ್ ಸ್ಟ್ಯಾರ್ಟ್, ಸೂಪರ್ ವಿಷನ್ ಕ್ಲಸ್ಟರ್, ರಿಯರ್ ಎಸಿ ವೆಂಟ್ಸ್, ಬ್ಲ್ಯಾಕ್ ಸ್ಪೋರ್ಟಿ ಇಂಟಿರಿಯರ್, ಲೆಥರ್ ಸೀಟು, ಮೆಟ್ಯಾಲಿಕ್ ಸ್ಕಫ್ ಪ್ಲೇಟ್, ಟಿಎಫ್ ಟಿ ಡಿಸ್ ಪ್ಲೇ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

01. ಸುರಕ್ಷತೆ

01. ಸುರಕ್ಷತೆ

ಹಿಲ್ ಅಸಿಸ್ಟ್ ಕಂಟ್ರೋಲ್,

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,

ಎಬಿಎಸ್ ಜೊತೆ ಇಬಿಡಿ,

ವಾಹನ ಸ್ಥಿರತೆ ನಿರ್ವಹಣೆ,

ಆರು ಏರ್ ಬ್ಯಾಗ್,

ಎಲೆಕ್ಟ್ರೊ ಕ್ರೋಮಿಕ್ ಮಿರರ್,

ರಿಯರ್ ವ್ಯೂ ಮಿರರ್ ಜೊತೆ ಪಾರ್ಕಿಂಗ್ ಸೆನ್ಸಾರ್.

Most Read Articles

Kannada
English summary
Hyundai has launched its all-new 2015 Elantra in India on 20th of April, 2015. This new model follows the Korean manufacturers new philosophy of 3D- Delightful performance, Design finesse and Driving pleasure.
Story first published: Tuesday, April 21, 2015, 9:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X