ಟಚ್ ಸ್ಕ್ರೀನ್ ವೈಶಿಷ್ಟ್ಯದೊಂದಿಗೆ ಹ್ಯುಂಡೈ ಎಲೈಟ್ ಐ20 ಎಂಟ್ರಿ

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈನ ಎರಡು ಜನಪ್ರಿಯ ಮಾದರಿಗಳಾಗಿರುವ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಐ20 ಆಕ್ಟಿವ್ ಕ್ರಾಸೋವರ್ ಕಾರುಗಳೀಗ ಮತ್ತಷ್ಟು ಶ್ರೀಮಂತವೆನಿಸಿಕೊಳ್ಳಲಿದೆ.

ಯಾಕೆಂದರೆ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಈ ಎರಡು ಜನಪ್ರಿಯ ಮಾದರಿಗಳಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ನೀಡುತ್ತಿದೆ. ಇವೆರಡು ಪೆಟ್ರೋಲ್ ಹಾಗೂ ಡೀಸೆಲ್ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

  • ಹ್ಯುಂಡೈ ಎಲೈಟ್ ಐ20 ಆಸ್ಟಾ (ಐಚ್ಛಿಕ)
  • ಹ್ಯುಂಡೈ ಐ20 ಆಕ್ಟಿವ್ ಎಸ್ ಎಕ್ಸ್
ಹ್ಯುಂಡೈ ಎಲೈಟ್ ಐ20
ಎವಿಎನ್ ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲಿ ಏಳು ಇಂಚುಗಳ ಟಚ್ ಸ್ಕ್ರೀನ್ ಜೊತೆಗೆ ಪ್ರಿ ಲೋಡಡ್ ಮ್ಯಾಪ್, ಸ್ಯಾಟಲೈಟ್ ಮಾರ್ಗದರ್ಶಿ ನೇವಿಗೇಷನ್ ಮತ್ತು ರಿಯರ್ ವ್ಯೂ ಕ್ಯಾಮೆರಾಗಳ ಸೌಲಭ್ಯಗಳಿರಲಿದೆ. ಅಷ್ಟೇ ಅಲ್ಲದೆ ಚಾಲಕನಿಗೆ ಫೋನ್ ಕರೆ ಸ್ವೀಕರಿಸಲು ನೆರವಾಗುವಂತಹ ಬ್ಲೂಟೂತ್ ಸಂಪರ್ಕ್ ಕೂಡಾ ಸಿಗಲಿದೆ.

ಬೆಲೆ ಮಾಹಿತಿ

ಹ್ಯುಂಡೈ ಎಲೈಟ್ ಐ20 ಆಸ್ಟಾ (ಐಚ್ಛಿಕ)

  • ಪೆಟ್ರೋಲ್: 7.16 ಲಕ್ಷ ರು.
  • ಡೀಸೆಲ್: 8.28 ಲಕ್ಷ ರು.

ಹ್ಯುಂಡೈ ಐ20 ಆಕ್ಟಿವ್ ಎಸ್ ಎಕ್ಸ್:

  • ಪೆಟ್ರೋಲ್: 7.92 ಲಕ್ಷ ರು.
  • ಡೀಸೆಲ್: 9.16 ಲಕ್ಷ ರು.
ಐ20 ಆಕ್ಟಿವ್
ಇವೆಲ್ಲ ಹೆಚ್ಚುವರಿ ವೈಶಿಷ್ಟ್ಯಗಳ ಹೊರತಾಗಿ ಹ್ಯುಂಡೈ ಎಲೈಟ್ ಐ20 ಮತ್ತು ಐ20 ಆಕ್ಟಿವ್ ಶೈಲಿ ಹಾಗೂ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಅಲ್ಲದೆ ಎಂಜಿನ್ ಕೂಡಾ ಸಮಾನವಾಗಿರಲಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಇರಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 83 ಅಶ್ವಶಕ್ತಿ (114 ಎನ್‌ಎಂ ತಿರುಗುಬಲ) ಮತ್ತು 90 ಅಶ್ವಶಕ್ತಿ (220 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.
Most Read Articles

Kannada
English summary
Hyundai Elite i20 & i20 Active Now Available With Touchscreen Infotain
Story first published: Wednesday, September 2, 2015, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X