ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಇಂಡೋನೇಷ್ಯಾ ಮಾರುಕಟ್ಟೆಗೆ ನೂತನ ಗ್ರಾಂಡ್ ಐ10ಎಕ್ಸ್ ಕ್ರಾಸೋವರ್ ಮಾದರಿಯನ್ನು ಪರಿಚಯಿಸಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಅಚ್ಚರಿಪಡಬೇಕಾಗಿಲ್ಲ.

ಇಂಡೋನೇಷ್ಯಾ ಮೂಲದ ಗ್ರಾಂಡ್ ಐ10ಎಕ್ಸ್ ಮಾದರಿಯು 7.46 ಲಕ್ಷ ರು.ಗಳಷ್ಟು (Rp 155,500,000) ದುಬಾರಿಯೆನಿಸಲಿದೆ. ಇದು ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಹ್ಯಾಚ್ ಬ್ಯಾಕ್ ತಳಹದಿಯ ಕ್ರಾಸೋವರ್ ಮಾದರಿಯಾಗಿದೆ.

ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಆಕ್ಟಿವ್ ಐ20 ಕ್ರಾಸೋವರ್ ಮಾರಾಟದಲ್ಲಿದೆ. ಹಾಗಿರುವಾಗ ಮಗದೊಂದು ಪ್ರೀಮಿಯಂ ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ಬ್ಲ್ಯಾಕ್ ಪ್ಲಾಸ್ಟಿಕ್ ಲೋವರ್ ಬಂಪರ್, ಸಿಲ್ವರ್ ಸ್ಕಿಡ್ ಪ್ಲೇಟ್, ಫಾಗ್ ಲ್ಯಾಂಪ್ , ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕ್ರೋಮ್ ಸ್ಪರ್ಶತೆ, ರೂಫ್ ಸ್ಪಾಯ್ಲರ್ ಹಾಗೂ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಹೊರಗಿನಿಂದ ಹೆಚ್ಚು ಆಕರ್ಷಕವಾಗಿಸಿದೆ.

ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ಇನ್ನು ಒಳಗಡೆ ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, 2 ಡಿನ್ ಎಂಪಿ3 ಪ್ಲೇಯರ್, ನಾಲ್ಕು ಸ್ಪೀಡ್, ಯುಎಸ್ ಬಿ, ಆಕ್ಸ್ ಇನ್ ಪೋರ್ಟ್, ಚಾಲಕ ಸೀಟು ಎತ್ತರ ಹೊಂದಾಣಿಕೆ, ಕೂಲ್ಡ್ ಗ್ಲೋವ್ ಬಾಕ್ಸ್ ಹಾಗೂ 256 ಲೀಟರ್ ಢಿಕ್ಕಿ ಜಾಗವಿರಲಿದೆ.

ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ಅಂದ ಹಾಗೆ ಗ್ರಾಂಡ್ ಐ10ಎಕ್ಸ್ ಕಾರಿನಡಿಯಲ್ಲಿರುವ 1.2 ಲೀಟರ್ ಕಪ್ಪ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ 83 ಅಶ್ವಶಕ್ತಿ (116 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹ್ಯುಂಡೈ ಗ್ರಾಂಡ್ ಐ10ಎಕ್ಸ್ ಬಿಡುಗಡೆ; ಮುಂದೆ ಭಾರತ?

ಒಟ್ಟಿನಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹ್ಯುಂಡೈ ಐ10 ಕಾರನ್ನು ಚೆನ್ನೈನ ಘಟಕದಿಂದ ರಫ್ತು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾದರಿಯು ಸಹ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ. ತಾಜಾ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
Now the Korean manufacturer has introduced an all-new derivative of its Grand i10 model. In Indonesia Hyundai has launched a crossover model called Grand i10x with attractive features.
Story first published: Monday, June 15, 2015, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X