ಹ್ಯುಂಡೈ ಸಣ್ಣ ಎಸ್ ಯುವಿ ಆಗಮನಕ್ಕೆ ಕಾಲ ಸನ್ನಿಹಿತ

ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಮುಂದಿನ ತಿಂಗಳಲ್ಲಿ ಬಹುನಿರೀಕ್ಷಿತ ಐಎಕ್ಸ್25 ಸಣ್ಣ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಕಾಂಪಾಕ್ಟ್ ಎಸ್ ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿರುವುದರಿಂದ ಹ್ಯುಂಡೈ ಐಎಕ್ಸ್25 ನಿರ್ಣಾಯಕ ಪಾತ್ರ ವಹಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹ್ಯುಂಡೈ ಐಎಕ್ಸ್25 ಅತಿ ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣಲಿದೆ.

hyundai ix25

ಎಂಜಿನ್ ತಾಂತ್ರಿಕತೆ
ಎರಡು ಡೀಸೆಲ್ ಹಾಗೂ ಏಕೈಕ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ನೂತನ ಐಎಕ್ಸ್25 ಲಭ್ಯವಾಗಲಿದೆ. ಅವುಗಳೆಂದರೆ.
  • 1.6 ಲೀಟರ್ ಡೀಸೆಲ್ - 126.19 ಅಶ್ವಶಕ್ತಿ (260 ತಿರುಗುಬಲ)
  • 1.4 ಲೀಟರ್ ಡೀಸೆಲ್ - 88.73 ಅಶ್ವಶಕ್ತಿ (219.66 ತಿರುಗುಬಲ)
  • 1.6 ಲೀಟರ್ ಪೆಟ್ರೋಲ್ - 121.26 ಅಶ್ವಶಕ್ತಿ (154.94 ತಿರುಗುಬಲ)

ಇವೆಲ್ಲದರಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಲಗತ್ತಿಸಲಾಗುವುದು. ಅಲ್ಲದೆ ನಿಕಟ ಭವಿಷ್ಯದಲ್ಲೇ ಆಟೋಮ್ಯಾಟಿಕ್ ಆಯ್ಕೆಯು ಲಭ್ಯವಾಗಲಿದೆ. ಅಂತೆಯೇ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹಾಗೂ ಇನ್ನು ಹೆಚ್ಚಿನ ಪ್ರೀಮಿಯಂ ಆಗಿರುವ ನಿಸ್ಸಾನ್ ಟೆರೆನೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

Most Read Articles

Kannada
English summary
Hyundai Motors is keen on entering new segments in Indian market. They recently introduced their very first crossover in the country, which has been christened 120 Active.
Story first published: Saturday, May 23, 2015, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X