ಭಾರತಕ್ಕೆ ಹ್ಯುಂಡೈ ಕೊಡುಗೆ ಮಿನಿ ಎಸ್‌ಯುವಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇತ್ತೀಚೆಗಷ್ಟೇ ಹ್ಯುಂಡೈ ಕ್ರೆಟಾ ಜಾಗತಿಕ ಬಿಡುಗಡೆಯನ್ನು ನಮ್ಮ ಭವ್ಯ ಭಾರತದಲ್ಲಿ ಕಂಡಿತ್ತು. ಈಗ ತನ್ನ ಮಾರಾಟ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿರುವ ದಕ್ಷಿಣ ಕೊರಿಯಾ ಮೂಲದ ಈ ಜನಪ್ರಿಯ ಸಂಸ್ಥೆಯು ಭಾರತದಲ್ಲಿ ಮಿನಿ ಎಸ್ ಯುವಿ ಅಥವಾ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಇತ್ತೀಚೆಗಷ್ಟೇ ಕ್ರೆಟಾ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು. ಆದರೆ ಈಗ ನಾಲ್ಕು ಮೀಟರ್ ನೊಳಗಿನ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹ್ಯುಂಡೈ

ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನೋದ್ಯಮ ಶಿಪ್ರಗತಿಯಲ್ಲಿ ಬೆಳೆದು ಬರುತ್ತಿದೆ. ಇನ್ನೊಂದೆಡೆ ನಾಲ್ಕು ಮೀಟರ್ ನೊಳಗಿನ ಕಾರುಗಳಿಗೆ ತೆರಿಗೆ ವಿನಾಯಿತಿಗೂ ದೊರಕುತ್ತಿದೆ. ಇವೆಲ್ಲವನ್ನೂ ಪರಿಗಣಿಸಿರುವ ಹ್ಯುಂಡೈ ದೇಶದಲ್ಲಿ ಯಶಸ್ಸನ್ನು ಗುರಿಯಿರಿಸಿಕೊಂಡಿದೆ.

ನಿಸ್ಸಂಶವಾಗಿಯೂ ಹ್ಯುಂಡೈ ಕಾಂಪಾಕ್ಟ್ ಎಸ್ ಯುವಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ಮಹೀಂದ್ರದ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಕಾಂಪಾಕ್ಟ್ ಎಸ್ ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹ್ಯುಂಡೈ ಎಲೈಟ್ ಐ20 ತಳಹದಿಯಲ್ಲೇ ನೂತನ ಕಾರು ನಿರ್ಮಾಣವಾಗುವ ಸಾಧ್ಯತೆಯಿದೆ. ಅಲ್ಲದೆ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಈ ನಡುವೆ ಹೆಚ್ಚು ಉಪಯುಕ್ತ ಬಹು ಬಳಕೆಯ ವಾಹನದ (ಎಂಪಿವಿ) ಬಿಡುಗಡೆಯನ್ನು ಸಂಸ್ಥೆಯು ಈಗಾಗಲೇ ಖಚಿತಪಡಿಸಿದೆ. ಇವೆಲ್ಲದರೂ ಸಂಸ್ಥೆಯ ನೂತನ ಫ್ಲೂಯಿಡಿಕ್ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗುವುದು.

Most Read Articles

Kannada
English summary
Korean based manufacturer has now already confirmed that it will be entering the MPV segment. Hyundai is mulling development of a sub-4-metre compact SUV for India.
Story first published: Saturday, July 25, 2015, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X