ಬೆಂಝ್‌ಗೆ ಸೆಡ್ಡು ನೀಡುವುದೇ ಹ್ಯುಂಡೈ ಗರಿಷ್ಠ ನಿರ್ವಹಣಾ ವಿಭಾಗ?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮರ್ಸಿಡಿಸ್ ಬೆಂಝ್‌ನ ಗರಿಷ್ಠ ನಿರ್ವಹಣೆಯ ಕಾರುಗಳು 'ಎಎಂಜಿ' ಗಳೆಂದೂ ಅದೇ ರೀತಿ ಬಿಎಂಡಬ್ಲ್ಯು ಹೈ ಫರ್ಫಮನ್ಸ್ ಕಾರುಗಳು 'ಎಂ' ಬ್ರಾಂಡ್ ಗಳೆಂದು ಗುರುತಿಸಿಲ್ಪಟ್ಟಿದೆ. ಇವುಗಳನ್ನು ಅತೀವ ಶ್ರದ್ಧೆ ವಹಿಸಿ ಪ್ರತ್ಯೇಕ ತಂಡವು ತಯಾರು ಮಾಡುತ್ತದೆ.

ಈಗ ಜರ್ಮನಿಯ ಈ ಪ್ರಖ್ಯಾತ ಸಂಸ್ಥೆಗಳಿಗೆ ಸಮಾನವಾದ ಗರಿಷ್ಠ ನಿರ್ವಹಣಾ ವಿಭಾಗವನ್ನು ಹ್ಯುಂಡೈ ಆರಂಭಿಸುತ್ತಿದ್ದು, ವಾಹನ ವಲಯದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಬಲ್ಲ ಮೂಲಗಳ ಪ್ರಕಾರ ಹ್ಯುಂಡೈನ ಹೈ ಫರ್ಫಮನ್ಸ್ ಸಬ್ ಬ್ರಾಂಡ್ ಮುಂಬರುವ 2015 ಫ್ರಾಂಕ್ ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ಹುಂಡೈನ ಗರಿಷ್ಠ ನಿರ್ವಹಣೆಯ ಕಾರುಗಳು 'ಎನ್' ಬ್ರಾಂಡ್ ನಿಂದ ಗುರುತಿಸಿಲ್ಪಡಲಿದೆ. ಇದರೊಂದಿಗೆ ವಾಹನೋದ್ಯಮದಲ್ಲಿ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ದಿಟ್ಟ ಹೆಜ್ಜೆಯನ್ನಿಡಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ವಿಶ್ವ ರಾಲಿ ಚಾಂಪಿಯನ್ ಶಿಪ್ (ಡಬ್ಲ್ಯುಆರ್ ಸಿ) ನತ್ತವೂ ಗಮನ ಕೇಂದ್ರಿಕರಿಸಲಿರುವ ಹ್ಯುಂಡೈನ ಎನ್ ಡಿವಿಷನ್ ಗರಿಷ್ಠ ನಿರ್ವಹಣೆಯ ಕಾರುಗಳನ್ನು ನಿರ್ಮಾಣ ಮಾಡಲು ನೆರವಾಗಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ಇದಕ್ಕೆ ಮುನ್ನುಡಿಯಾಗಿ ಮುಂಬರುವ ಆಟೋ ಶೋದಲ್ಲಿ ಹ್ಯುಂಡೈ ಐ20 ಡಬ್ಲ್ಯುಆರ್‌ಸಿ ಮಾದರಿಯನ್ನು ಅನಾವರಣಗೊಳಿಸಲಿದೆ. ಇದು ಹ್ಯುಂಡೈ ಅಪರ್ಣಾ ಮನೋಭಾವವನ್ನು ಸಾದರಪಡಿಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ವರದಿಗಳ ಪ್ರಕಾರ ಹ್ಯುಂಡೈ ಐ20 ಡಬ್ಲ್ಯುಆರ್‌ಸಿ ಕಾರು ಮುಂದಿನ ವರ್ಷ ರಾಲಿ ಮಾಂಟೆ ಕಾರ್ಲೊದಲ್ಲಿ ನಡೆಯಲಿರುವ ಎಫ್‌ಐಎ ವರ್ಲ್ಡ್ ರಾಲಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ಅಷ್ಟೇ ಅಲ್ಲದೆ ಪ್ರಸ್ತುತ ಆಟೋ ಶೋದಲ್ಲಿ ಭವಿಷ್ಯದ ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳ ಕಾನ್ಸೆಪ್ಟ್ ಮಾದರಿಗಳನ್ನು ಪರಿಚಯಿಸಲಾಗುವುದು. ಇದರಲ್ಲಿ ಹ್ಯುಂಡೈ ಎನ್ 2025 ವಿಷನ್ ಗ್ರ್ಯಾನ್ ಟರಿಸ್ಮೊ ಸಹ ಸೇರಿರಲಿದೆ.

ಹ್ಯುಂಡೈ ಗರಿಷ್ಠ ನಿರ್ವಹಣೆಯ ಕಾರುಗಳಿಗೆ 'ಎನ್' ಬ್ರಾಂಡ್

ಇವೆರಡು ನಿರ್ವಹಣಾ ಕಾರುಗಳ ಹೊರತಾಗಿ ಆರ್‌ಎಂ15 ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಇದರಲ್ಲಿ ಎನ್ ಚಾಲಕ ಕೇಂದ್ರಿತ ಗರಿಷ್ಠ ತಂತ್ರಜ್ಞಾನವನ್ನು ಬಳಕೆ ಮಾಡಲಾಗುವುದು.

Most Read Articles

Kannada
English summary
Hyundai's new high performance sub-brand 'N'
Story first published: Friday, August 28, 2015, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X