125 ಟೋಲ್ ಪ್ಲಾಜಾ ಮುಚ್ಚುಗಡೆಗೊಳಿಸಲು ಸರಕಾರ ಆದೇಶ

By Nagaraja

ವಾಹನ ಸವಾರರಿಗೆ ಮಗದೊಂದು ಶುಭ ಸಮಾಚಾರ ಬಂದಿದ್ದು, ಕಿರಿಕ್ ತಪ್ಪಿಸುವ ನಿಟ್ಟಿನಲ್ಲಿ ದೇಶದ್ಯಾಂತ 125ರಷ್ಟು ಟೋಲ್ ಪ್ಲಾಜಾಗಳನ್ನು ಮುಚ್ಚಿಡಲು ಕೇಂದ್ರ ಸರಕಾರ ಆದೇಶಿಸಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ, "ಟೋಲ್ ಗೇಟ್ ತೆರಿಗೆ ಸಂಗ್ರಹ ಅವ್ಯವಹಾರದ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದ್ದು, ಈಗಾಗಲೇ ತೆರಿಗೆ ವಸೂಲಿ ತಲುಪಿರುವ ಟೋಲ್ ಪ್ಲಾಜಾಗಳನ್ನು ತಿಂಗಳಾಂತ್ಯದೊಳಗೆ ಮುಚ್ಚುಗಡೆಗೊಳಿಸಲು ಆದೇಶ ನೀಡಲಾಗಿದೆ" ಎಂದಿದ್ದಾರೆ.

toll plaza

ಇತರೆ ಮೂಲಗಳಿಂದ ತೆರಿಗೆ ಸಂಗ್ರಹಿಸುವ ಮೂಲಕ ರಸ್ತೆ ತೆರಿಗೆ ಸಂಗ್ರಹವನ್ನು ಮುಕ್ತಾಯಗೊಳಿಸುವ ಇರಾದೆಯನ್ನು ಸಾರಿಗೆ ಸಚಿವಾಲಯವು ಹೊಂದಿದೆ. ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಸ್ತೆ ಸೆಸ್ ಹೆಚ್ಚಿಸುವ ಯೋಜನೆಯಿದೆ. ಹಾಗೆಯೇ ಹೊಸ ವಾಹನಗಳ ಮೇಲೆ ಶೇಕಡಾ 2ರಷ್ಟು ಮೇಲ್ತೆರಿಗೆ ವಿಧಿಸಲು ಪ್ರಧಾನ ಮಂತ್ರಿ ಹಾಗೂ ವಿತ್ತ ಸಚಿವಾಲಯಕ್ಕೆ ಪ್ರಸ್ತಾಪವನ್ನಿಡಲಾಗಿದೆ.

ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ. 14ರಿಂದ 15ರಷ್ಟು ಬರುವ ಪ್ರಯಾಣಿಕ ಹಾಗೂ ವಾಣಿಜ್ಯ ರಹಿತ ವಾಹನಗಳ ಮೇಲಿನ ತೆರಿಗೆ ಹಿಂಪಡೆಯುವುದು ಸಚಿವಾಲಯದ ಇರಾದೆಯಾಗಿದೆ. 2013ನೇ ಸಾಲಿನಲ್ಲಿ ಸಂಗ್ರಹವಾದ ಒಟ್ಟು 11,400 ಕೋಟಿ ಟೋಲ್ ತೆರಿಗೆಯ ಪೈಕಿ 1,600 ಕೋಟಿ ಪ್ರಯಾಣಿಕ ವಾಹನಗಳಿಂದ ಸಂಗ್ರಹಿಸಲಾಗಿತ್ತು.

ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ಯಾನ್ ಇಂಡಿಯಾ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೂಲಕ ಒಟ್ಟು 88000 ಕೋಟಿ ರು.ಗಳ ಉಳಿತಾಯ ಮಾಡುವ ಯೋಜನೆ ಹೊಂದಿದೆ. ಇಲ್ಲಿ ಸಮಯದ ಜೊತೆಗೆ ಇಂಧನದ ಉಳಿತಾಯವಾಗಲಿದೆ ಎಂದು ಭಾರತ ಸಾರಿಗೆ ನಿಗಮ ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಕತ್ತ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ವಿವರಿಸಲಾಗಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಮುಂಬೈ-ದೆಹಲಿ ನಡುವೆ ಈಗಿರುವ 350 ಟೋಲ್ ಗೇಟ್‌ಗಳ ಪೈಕಿ 140ನ್ನು ಇ-ಟೋಲಿಂಗ್ ಆಗಿ ಪರಿವರ್ತಿಸಲಾಗಿದೆ.

Most Read Articles

Kannada
English summary
The Indian government has announced that it will scrap 125 toll plazas throughout India by the end of this month.
Story first published: Friday, February 13, 2015, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X