ಸಣ್ಣದರಿಂದ ದೊಡ್ಡ ಕಾರುಗಳತ್ತ ವಾಲುತ್ತಿರುವ ಭಾರತ

By Nagaraja

ಭಾರತ ವಾಹನ ಮಾರುಕಟ್ಟೆ ನಿಧಾನವಾಗಿ ಬದಲಾವಣೆಯ ಪರ್ವದಲ್ಲಿದ್ದು, ಜಾಗತಿಕ ಮಾರುಕಟ್ಟೆ ಮಾಹಿತಿ ಸೇವಾ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ಅಂಕಿಅಂಶಗಳ ಪ್ರಕಾರ ಭಾರತೀಯರು ನಿಧಾನವಾಗಿ ಸಣ್ಣ ಕಾರುಗಳಿಂದ ದೊಡ್ಡ ಕಾರು ಖರೀದಿಯತ್ತ ವಾಲುತ್ತಿದ್ದಾರೆ ಎಂದಿದೆ.

ಜೆಡಿ ಪವರ್ ಬಿಡುಗಡೆ ಮಾಡಿರುವ 2015 ಇಂಡಿಯಾ ಎಸ್ಕೇಪ್ಡ್ ಶಾಪರ್ ಅಧ್ಯಯನ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದ್ದು, ಕಲೆದ ನಾಲ್ಕು ವರ್ಷಗಳಲ್ಲಿ ನೂತನ ಕಾರು ಖರೀದಿಗಾರರು ದೊಡ್ಡ ಮಾದರಿಗಳನ್ನೇ ಆಯ್ಕೆ ಮಾಡುತ್ತಿದ್ದಾರೆ ಎಂದಿದೆ.

ಹೋಂಡಾ ಸಿಟಿ

2012ರಲ್ಲಿ ಶೇಕಡಾ 65ರಷ್ಟಿದ್ದ ನೂತನ ಸಣ್ಣ ಕಾರು ಖರೀದಿಗಾರರ ಸಂಖ್ಯೆ 2015ರ ವೇಳೆಯಾಗುವಾಗ ಶೇಕಡಾ 45ಕ್ಕೆ ಇಳಿಕೆಯಾಗಿದೆ. ಅಂದರೆ ಉಪಯುಕ್ತ ಹಾಗೂ ಮಧ್ಯಮ ಗಾತ್ರದ ಕಾರುಗಳ ಖರೀದಿ ಸಂಖ್ಯೆಯು ಅನುಕ್ರಮವಾಗಿ ಶೇಕಡಾ 12 ಹಾಗೂ 7ರಷ್ಟು ಹೆಚ್ಚಳಗೊಂಡಿದೆ.

2014 ಸೆಪ್ಟೆಂಬರ್‌ನಿಂ 2015 ಎಪ್ರಿಲ್ ವೆರಗಿನ ಅವಧಿಯಲ್ಲಿ ನೂತನ ಹಾಗೂ ಉಪಯುಕ್ತ ವಾಹನಗಳ ಪೈಕಿ 8116ರಷ್ಟು ಖರೀದಿಗಾರರು ಹಾಗೂ 2,983ರಷ್ಟು ತಿರಸ್ಕೃತರಿಂದ ಅಭಿಪ್ರಾಯ ಸಂಗ್ರಹಿಸಿ 2015 ಇಂಡಿಯಾ ಎಸ್ಕೇಪ್ಡ್ ಶಾಪರ್ ಸ್ಟಡಿ ವರದಿ ತಯಾರು ಮಾಡಲಾಗಿದೆ.

Most Read Articles

Kannada
Read more on ಕಾರು cars
English summary
Now Indians prefers to buy utility and midsize cars
Story first published: Thursday, October 1, 2015, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X