2016ರಲ್ಲಿ ಫಿಯೆಟ್ ಕ್ರೈಸ್ಲರ್ ಜೀಪ್ ಬ್ರಾಂಡ್ ಭಾರತಕ್ಕೆ

By Nagaraja

ಭಾರತ ಪ್ರವೇಶ ಸಂಬಂಧಿಸಿದಂತೆ ಮೀನಾಮೇಷ ಎದುರಿಸುತ್ತಿರುವ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ (ಎಫ್‌ಸಿಎ) ಕೊನೆಗೂ ಅಧಿಕೃತ ಘೋಷಣೆಯೊಂದಿಗೆ ಮುಂದೆ ಬಂದಿದ್ದು, ಮುಂದಿನ ವರ್ಷ ಐಕಾನಿಕ್ ಜೀಪ್ ಬ್ರಾಂಡ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಈ ಸಂಬಂಧ ಹೇಳಿಕೆ ಕೊಟ್ಟಿರುವ ಎಫ್‌ಸಿಎ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕೆವಿನ್ ಫ್ಲೈನ್, ತಮ್ಮ ಸಂಸ್ಥೆಯೀಗ ಭಾರತದಲ್ಲಿ ಸರಿಯಾದ ದಿಶೆಯಲ್ಲಿ ಸಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ಭಾರತವನ್ನು ಸಂಸ್ಥೆಯ ಜಾಗತಿಕ ವಾಹನ ಕೇಂದ್ರವನ್ನಾಗಿ ಮಾರ್ಪಾಡಿಸುವ ಉದ್ದೇಶ ಹೊಂದಿರುವುದಾಗಿ ಭವಿಷ್ಯದ ದಿಟ್ಟ ಯೋಜನೆಯನ್ನು ಮುಂದಿಟ್ಟಿದ್ದಾರೆ.

ಫಿಯೆಟ್ ಜೀಪ್ ಗ್ರ್ಯಾಂಡ್ ಕೆರೊಕೆ

ಟಾಟಾ ಮೋಟಾರ್ಸ್ ಸಹಯೋಗದಲ್ಲಿ ಭಾರತದಲ್ಲಿನ ಘಟಕಕ್ಕೆ ಬರೋಬ್ಬರಿ 280 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿರುವ ಫಿಯೆಟ್ ಐಕಾನಿಕ್ ಜೀಪ್ ಮಾಡೆಲ್ ನಿರ್ಮಾಣ ಪ್ರಾರಂಭಿಸುವುದಾಗಿ ತಿಳಿಸಿದೆ.

ಇದಕ್ಕೆ ಮುನ್ನಡಿಯಾಗಿ ದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಜೀಪ್ ಬ್ರಾಂಡ್ ಭರ್ಜರಿ ಪ್ರದರ್ಶನ ಕಾಣಲಿದೆ. ಅಲ್ಲದೆ ಮುಂದಿನ ವರ್ಷ ಐದು ಮಹಾ ನಗರಗಳಲ್ಲಿ ಡೀಲರ್ ಶಿಪ್ ತೆರೆದುಕೊಳ್ಳುವ ಯೋಜನೆಯನ್ನು ವ್ಯಕ್ತಪಡಿಸಿದೆ.

ಜೀಪ್ ವ್ರ್ಯಾಂಗ್ಲರ್

ಭಾರತದಲ್ಲಿ ಒಂದೇ ಸಮಯದಲ್ಲಿ ಫಿಯೆಟ್ ಐಕಾನಿಕ್ ಮಾದರಿಗಳಾಗಿರುವ ಗ್ರ್ಯಾಂಡ್ ಕೆರೊಕೆ ಮತ್ತು ವ್ರ್ಯಾಂಗ್ಲರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತ ತಲುಪಲಿದೆ.

ಅದೇ ಹೊತ್ತಿಗೆ ಮಹಾರಾಷ್ಟ್ರದ ರಂಜನ್ ಗಾಂವ್ ಘಟಕದಲ್ಲಿ ಜೀಪ್ ತಳಹದಿಯ ಕ್ರೀಡಾ ಬಳಕೆಯ ವಾಹನವನ್ನು (ಸಿ-ಎಸ್‌ಯುವಿ) ಸ್ಥಳೀಯವಾಗಿ ನಿರ್ಮಿಸುವ ಯೋಜನೆಯಿದ್ದು, 2017ನೇ ಇಸವಿಯಲ್ಲಿ ಮಾರುಕಟ್ಟೆ ತಲುಪಲಿದೆ. ಆ ವೇಳೆಯಾಗುವಾಗ ಸಂಸ್ಥೆಯು 20ರಿಂದ 25ರಷ್ಟು ಡೀಲರ್ ಶಿಪ್ ಗಳನ್ನು ತೆರೆದುಕೊಳ್ಳುವ ಇರಾದೆಯಲ್ಲಿದೆ.

Most Read Articles

Kannada
Read more on ಜೀಪ್ jeep
English summary
Kevin Flynn: Jeep Brand To Be Sold In India Next Year
Story first published: Thursday, September 3, 2015, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X