ಲಂಬೋರ್ಗಿನಿ ಉರುಸ್ ಕ್ರೀಡಾ ಬಳಕೆಯ ವಾಹನ ಭಾರತಕ್ಕೆ?

By Nagaraja

ಅತಿ ದುಬಾರಿ ಸೂಪರ್ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರು ಮಾಡಿರುವ ಇಟಲಿ ಮೂಲದ ಐಕಾನಿಕ್ ಲಂಬೋರ್ಗಿನಿ ಸಂಸ್ಥೆಯೀಗ ಭಾರತಕ್ಕೆ ಐಷಾರಾಮಿ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಲಿದೆ.

ಬಲ್ಲ ಮೂಲಗಳ ಪ್ರಕಾರ ಲಂಬೋರ್ಗಿನಿ 'ಉರುಸ್' (Urus) ಕ್ರೀಡಾ ಬಳಕೆಯ ವಾಹನವು 2018ರ ವೇಳೆಗೆ ಭಾರತ ಪ್ರವೇಶವಾಗಲಿದೆ. ಈಗಾಗಲೇ ಹಲವು ಜಾಗತಿಕ ವಾಹನ ಪ್ರದರ್ಶನ ಮೇಳಗಳಲ್ಲಿ ತನ್ನ ತಾಕತ್ತು ಪ್ರದರ್ಶಿಸಿರುವ ಲಂಬೋರ್ಗಿನಿ ನೂತನ ಎಸ್ ಯುವಿ ವಾಹನ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು.

ಲಂಬೋರ್ಗಿನಿ ಉರುಸ್

ಸೂಪರ್ ಕಾರಿನ ತಳಹದಿಯನ್ನೇ ಗರಿಷ್ಠ ನಿರ್ವಹಣೆಯ ಉರುಸ್ ಎಸ್ ಯುವಿ ನಿರ್ಮಾಣಕ್ಕೂ ಬಳಕೆ ಮಾಡುವ ಸಾಧ್ಯತೆಯಿದೆ. ಅಲ್ಲದೆ ಕಾನ್ಸೆಪ್ಟ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರುವ ಸಾಧ್ಯತೆ ಕಡಿಮೆಯಾಗಿದೆ.
ಲಂಬೋರ್ಗಿನಿ ಉರುಸ್

ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಹ್ಯುರಕನ್ ಮತ್ತು ಅವೆಂಟಡೊರ್ ಸೂಪರ್ ಕಾರುಗಳು ಮಾರಾಟದಲ್ಲಿದೆ. ಅಲ್ಲದೆ ಹೊಸ ಮಾದರಿಯು ವಾಹನ ಮಾರುಕಟ್ಟೆಯಲ್ಲಿ ಭಾರಿ ಸಂಚಲನ್ನೇ ಮಾಡುವ ನಿರೀಕ್ಷೆಯಿದೆ.
ಲಂಬೋರ್ಗಿನಿ ಉರುಸ್

ಅಮೆರಿಕ, ಚೀನಾ, ರಷ್ಯಾ ಹಾಗೂ ಯುರೋಪ್ ಮಾರುಕಟ್ಟೆ ಸಂಸ್ಥೆಯ ಗುರಿಯಾಗಿದ್ದು, ವಾರ್ಷಿಕವಾಗಿ 3,000 ಯುನಿಟ್ ಗಳನ್ನು ಮಾರಾಟ ಮಾಡುವ ಇರಾದೆ ಹೊಂದಿದೆ.
Most Read Articles

Kannada
English summary
Lamborghini has showcased its performance SUV on several occasion at international motor shows. The Italian has now confirmed that final production model will look similar to concept vehicle.
Story first published: Monday, July 13, 2015, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X