ಹೊಸ ಡೀಸೆಲ್ ಎಂಜಿನ್‌ಗಳಿಂದ ಕ್ಯಾನ್ಸರ್ ಬರಲ್ಲ!

By Nagaraja

ವಾಹನ ಜಗತ್ತಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಇಂತಹದೊಂದು ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಡೀಸೆಲ್ ಎಂಜಿನ್‌ಗಳಿಂದ ಹೊರ ಚಿಮ್ಮುವ ಹೊಗೆಯು ಶ್ವಾಸಕೋಶದ ಕ್ಯಾನ್ಸರ್‌ಗೆ ಎಡೆಮಾಡಿಕೊಡುತ್ತಿದೆಯೇ?

ಇಲ್ಲ ಎನ್ನುತ್ತಿದೆ ಹೊಸ ಅಧ್ಯಯನ ವರದಿ. ಹೌದು, ಹೊಸತಾದ ಡೀಸೆಲ್ ಎಂಜಿನ್‌ಗಳಲ್ಲಿ ನವೀನ ತಂತ್ರಜ್ಞಾನವನ್ನು ಅವಿಷ್ಕರಿಸಲಾಗಿದ್ದು ಶೇಕಡಾ 90ರಷ್ಟು ಕಡಿಮೆ ಹೊಗೆ ಹೊರ ಸೂಸುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

diesel

ಲ್ಯಾಬ್ ರಾಟ್ಸ್ ಎನ್ನುವ ಸಂಸ್ಥೆಯು ಸಂಶೋಧನೆಯನ್ನು ಹಮ್ಮಿಕೊಂಡಿತ್ತು. ಇನ್ನು ಸಂಶೋಧನೆಗಾಗಿ ವಿವಿಧ ರೀತಿಯ ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡಲಾಗಿತ್ತು.

ಇದರಂತೆ ಬೆಳಕಿಗೆ ಬಂದಿರುವ ಸಂಗತಿಯೆಂದರೆ ಹಳೆಯ ಡೀಸೆಲ್ ಎಂಜಿನ್‌ಗಳಿಗೆ ಹೋಲಿಸಿದರೆ ಹೊಸ ಜನಾಂಗದ ಡೀಸೆಲ್ ಎಂಜಿನ್‌ಗಳು ಕಡಿಮೆ ಹೊಗೆಯನ್ನು ಹೊರಸೂಸುತ್ತಿದೆ. ಇದು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಚೋದನಾಕಾರಿಯಾಗುವುದಿಲ್ಲ.

ನ್ಯೂ ಜನರೇಷನ್ ಇಪಿಎ10 ಎಂಜಿನ್ ಆಳವಡಿಕೆಯಿಂದ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಇದು ಹೊಸ ಟ್ರೆಂಡ್ ಆಗಿ ಪರಿವರ್ತನೆಗೊಂಡಿದ್ದು, ಚೀನಾ ಕೂಡಾ ಇದೇ ನೀತಿಯತ್ತ ಹೆಜ್ಜೆಯನ್ನಿಟ್ಟಿದೆ.

Most Read Articles

Kannada
English summary
According to a recent study, fumes from the latest technology diesel engines do not cause lung cancer. The study showed that new generation diesel engines produce up to 90 percent less emission than the old ones.
Story first published: Thursday, January 29, 2015, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X