ಶಾಲಾ ಶೈಕ್ಷಣಿಕ ವರ್ಷದಲ್ಲೇ ರಸ್ತೆ ಸುರಕ್ಷಾ ಪಾಠ?

By Nagaraja

ಕಳೆದ ಕೆಲವು ತಿಂಗಳುಗಳಿಂದ ಶಾಲಾ ಪಠ್ಯ ಪುಸಕ್ತಗಳಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಪಾಠವನ್ನು ಕಡ್ಡಾಯಗೊಳಿಸಬೇಕೇ ಎಂಬುದರ ಕುರಿತಂತೆ ಚರ್ಚೆ ರಾಷ್ಟ್ರೀಯವಾಗಿ ಗಮನ ಸೆಳೆಯಿದೆ.

ಈ ನಡುವೆ ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ ಶಾಲಾ ಪಠ್ಯದಲ್ಲಿ ರಸ್ತೆ ಸುರಕ್ಷಾ ಪಾಠವನ್ನು ಪರಿಚಯಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಾಗಿದೆ.

road accident

ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾದಂತೆ ಅಪಘಾತಗಳ ಪ್ರಮಾಣದಲ್ಲೂ ಗಣನೀಯ ವರ್ಧನೆಯುಂಟಾಗುತ್ತಿದೆ. ಇದಕ್ಕೆ ರಸ್ತೆ ಸುರಕ್ಷತೆ ಬಗ್ಗೆ ಪರಿಪೂರ್ಣ ಜ್ಞಾನವಿಲ್ಲದ ಇಂದಿನ ಯುವ ಜನಾಂಗ ರಸ್ತೆಯಲ್ಲಿ ನಡೆಸುತ್ತಿರುವ ಎಡವಟ್ಟು ಕೂಡಾ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಗೆ ರಸ್ತೆ ಸುರಕ್ಷತೆಯ ಮಹತ್ವ ಹಾಗೂ ಬಗ್ಗೆ ಅದನ್ನು ಪಾಲಿಸಬೇಕಾದ ಬಗ್ಗೆ ಪಾಠ ಹೇಳಿಕೊಡಲಾಗುವುದು.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ವಿದೇಶಗಳಲ್ಲಿ ರಸ್ತೆ ಸುರಕ್ಷಾ ಪಾಠವನ್ನು ಪಠಿಸಲಾಗುತ್ತದೆ. ಆದರೆ ಭಾರತದಂತಹ ವಾಹನ ನಿಬಿಡ ದೇಶಗಳಲ್ಲೇ ಇದನ್ನು ಕಡೆಗಣಿಸುತ್ತಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ನಮ್ಮ ಕರ್ನಾಟಕ ಸರಕಾರವು ಸಹ ಇದಕ್ಕೆ ಸಂಬಂಧಿಸಿದಂತೆ ಪೂರಕವಾದ ನಿಲುವು ಅನುಸರಿಸಬೇಕೇ? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.

Most Read Articles

Kannada
English summary
Now the Maharashtra Government has decided to take another route at making our roads safer. They plan to introduce road safety as part of a students academics. 
Story first published: Friday, January 30, 2015, 9:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X