ಅತಿ ಶೀಘ್ರದಲ್ಲೇ ಮಹೀಂದ್ರ ಮಿನಿ ಎಸ್‍‌ಯುವಿ ಬಿಡುಗಡೆ

By Nagaraja

ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಅತಿ ಶೀಘ್ರದಲ್ಲೇ ಮಿನಿ ಎಸ್‌ಯುವಿ ಕಾರೊಂದನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಆಸಕ್ತಿಯನ್ನು ಕೆರಳಿಸಿರುವ ಮಹೀಂದ್ರ ನೂತನ ಎಸ್‌ಯುವಿ 'ಟಿಯುವಿ300'(TUV300) ಎಂದು ಅರಿಯಲ್ಪಡಲಿದೆ.

ಮುಖ್ಯಾಂಶಗಳು

  • ಹೊಚ್ಚ ಹೊಸ ಫ್ಲ್ಯಾಟ್ ಫಾರ್ಮ್,
  • ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ,
  • ಸ್ಟೈಲಿಷ್ ಮಹೀಂದ್ರ ಡಿಎನ್‌ಎಯಿಂದ ವಿನ್ಯಾಸ ಪ್ರೇರಣೆ,
  • ಹೈ ಟೈಕೆ ಎಂಹಾಕ್ ಎಂಜಿನ್

ಪ್ರೊಜೆಕ್ಟ್ ಕೋಡ್: ಯು301 (U301)

ಮಹೀಂದ್ರ ಟಿಯುವಿ300
ಟಿಯುವಿ300 ಪೂರ್ಣರೂಪ
ಇಲ್ಲಿ 'ಟಿಯುವಿ300' ಎಂಬ ಪದವು ಟಿಯುವಿ, 3 ಡಬಲ್ ಒ (oh) ಎಂದು ಉಚ್ಛಾರಿಸಲ್ಪಡಲಿದೆ. ಅಂತೆಯೇ 'ಟಿ' ಎಂಬುದು ಕಠಿಣ ಹಾಗೂ ಸ್ಟೈಲಿಷ್ ಎಸ್ ಯುವಿ ವಿನ್ಯಾಸವನ್ನು ಪ್ರತಿನಿಧಿಸಲಿದೆ. ಹಾಗೆಯೇ '300' ಅಂಕಿಗಳು ಶ್ರೇಣಿಯ ಹೆಸರನ್ನು ಸೂಚಿಸುತ್ತದೆ.

ಮಿನಿ ಬೊಲೆರೊ
ಬಲ್ಲ ಮೂಲಗಳ ಪ್ರಕಾರ ನೂತನ ಮಹೀಂದ್ರ ಟಿಯುವಿ300 ಮಿನಿ ಬೊಲೆರೊ ಎನಿಸಿಕೊಳ್ಳಲಿದೆ. ನೂತನ ಕಾರು ಉಪಯುಕ್ತ ವಿಭಾಗದಲ್ಲಿ ಭಾರಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.

4 ಮೀಟರ್ ಮ್ಯಾಜಿಕ್...
ನಾಲ್ಕು ಮೀಟರ್ ಪರಿಧಿಯೊಳಗೆ ನಿರ್ಮಾಣವಾಗಲಿರುವುದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಂಸ್ಥೆಗೆ ನೆರವಾಗಲಿದೆ. ಇದರಲ್ಲಿ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು, 100 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ನಿಮ್ಮ ಮಾಹಿತಿಗಾಗಿ, ನೂತನ ಮಹೀಂದ್ರ ಟಿಯುವಿ300 ಮಾದರಿಯು ಬೊಲೆರೊದ ಕಾಂಪಾಕ್ಟ್ ವರ್ಷನ್ ಆಗಿರಲಿದೆ. ಅಷ್ಟೇ ಯಾಕೆ ಆಟೋಮ್ಯಾಟಿಕ್ ಜೊತೆಗೆ ಆಲ್ ವೀಲ್ ಡ್ರೈವ್ ಆಯ್ಕೆಯೊಂದಿಗೂ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಮಹೀಂದ್ರ ಟಿಯುವಿ300
ವಿಶೇಷತೆ:
  • ಎದ್ದು ಕಾಣಿಸುವ ಭುಜ,
  • ಸಮತಲದ ಮೇಲ್ಛಾವಣಿ,
  • ಮುಂಭಾಗದಲ್ಲಿ ಎತ್ತರದ ಮೂಗಿನಂತಹ ವಿನ್ಯಾಸ,
  • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್,
  • ನೇರವಾದ ಬೊನೆಟ್

ಇನ್ನುಳಿದಂತೆ ಆಕರ್ಷಕ ನೋಟ, 5 ಸ್ಪೋಕ್ ಅಲಾಯ್ ವೀಲ್, ಕ್ಲಿಯರ್ ಲೆನ್ಸ್ ಹೆಡ್ ಲ್ಯಾಂಪ್, ಏಳು ಸೀಟುಗಳ ಆಯ್ಕೆ ಇವೆಲ್ಲವೂ ನೂತನ ಸಣ್ಣ ಎಸ್‌ಯುವಿ ಕಾರನ್ನು ವಿಭಿನ್ನವಾಗಿಸಲಿದೆ.

Most Read Articles

Kannada
English summary
Mahindra has named its much awaited SUV, the project U301 as the TUV 300. Pronounced ‘T' double ‘oh', the T stands for Tough while the 300 stands for the series name.
Story first published: Thursday, July 30, 2015, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X