ದೇಶದ ಭವಿಷ್ಯ ಬದಲಾಯಿಸಿತೇ ಮಹೀಂದ್ರ ಹ್ಯಾಲೊ

By Nagaraja

ಭಾರತದ ವಾಹನೋದ್ಯಮದಲ್ಲಿ ಅತ್ಯಂತ ಕ್ರಾಂತಿಕಾರಿ ಬದಲಾವಣೆಯೆಂದೇ ವಿಶ್ಲೇಷಿಸಬಹುದಾದ ಬೆಳವಣಿಗೆಯೂಂದರಲ್ಲಿ ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರದ ಎಲೆಕ್ಟ್ರಿಕ್ ವಿಭಾಗವಾಗಿರುವ ಮಹೀಂದ್ರ ರೇವಾ, ಎರಡು ಸೀಟುಗಳ ವಿದ್ಯುತ್ ಚಾಲಿತ ಕ್ರೀಡಾ ಕಾರೊಂದರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಈ ಸಂಬಂಧ ಸಂಸ್ಥೆಯು ಎಕ್ಸುಕ್ಲೂಸಿವ್ ಚಿತ್ರಗಳನ್ನು ತನ್ನ ಮಹೀಂದ್ರ ರೇವಾ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ರೋಚಕತೆಗೆ ಸಾಕ್ಷಿಯಾಗಿದೆ. ವರದಿಗಳ ಪ್ರಕಾರ 2016ರಲ್ಲೇ ಬ್ರಿಟನ್ ತಲುಪಲಿರುವ ನೂತನ ಮಹೀಂದ್ರ ಕ್ರೀಡಾ ಕಾರು ನಿಕಟ ಭವಿಷ್ಯದಲ್ಲೂ ತವರೂರಾದ ಭಾರತದಲ್ಲೂ ಮೋಡಿ ಮಾಡಲಿದೆ.

ಮಹೀಂದ್ರ ಹ್ಯಾಲೊ

ಮಹೀಂದ್ರ ಹ್ಯಾಲೊ

ಮಹೀಂದ್ರ ಸಂಸ್ಥೆಯ ಎಲೆಕ್ಟ್ರಿಕ್ ವಾಹನ ವಿಭಾಗವಾದ ಮಹೀಂದ್ರ ರೇವಾ, ನೂತನ 'ಹ್ಯಾಲೊ' ಎಲೆಕ್ಟ್ರಿಕ್ ಕಾರಿನ ನಿರ್ಮಾಣ ಮಾಡಲಿದೆ. ಇದು ಎರಡು ಸೀಟುಗಳ ಕ್ರೀಡಾ ವಿದ್ಯುತ್ ಚಾಲಿತ ಕಾರಾಗಿರಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಮಹೀಂದ್ರ ಹ್ಯಾಲೊ ಭಾರತ ಬಿಡುಗಡೆ ಸಂಬಂಧ ಮಹೀಂದ್ರ ಸಂಸ್ಥೆಯು ಅನಿಶ್ಚಿತತೆಯಲ್ಲಿದೆ. ಹಾಗೊಂದು ವೇಳೆ ಇದು ಭಾರತ ಮಾರುಕಟ್ಟೆ ಪ್ರವೇಶ ಪಡೆದ್ದಲ್ಲಿ 25ರಿಂದ 35 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಅಂದರೆ ಆಂಡಬರ ಕಾರು ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸರಕಾರ ಸಬ್ಸಿಡಿ ನೀಡಬೇಕಾಗಿರುವುದು ಅವಶ್ಯಕ.

ಕ್ರಾಂತಿಕಾರಿ ವಿನ್ಯಾಸ

ಕ್ರಾಂತಿಕಾರಿ ವಿನ್ಯಾಸ

ಆಧುನಿಕ ವಿನ್ಯಾಸಕ್ಕೆ ಮೊರೆ ಹೋಗಿರುವ ಮಹೀಂದ್ರ ಸಂಸ್ಥೆಯು ಈ ಎರಡು ಸೀಟುಗಳ ಎಲೆಕ್ಟ್ರಿಕ್ ಕ್ರೀಡಾ ಕಾರಿನಲ್ಲಿ ಸಣ್ಣದಾದ ಚಾಸೀ, ಏರೋಡೈನಾಮಿಕ್ ದೇಹ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಇನ್ನು ಮಹೀಂದ್ರ ರೇವಾ ಘಟಕದಲ್ಲಿ ಅಭಿವೃದ್ಧಿಪಡಿಸಲಾದ ಮಲ್ಟಿ ಟಚ್ ಸ್ಕ್ರೀನ್, ಲೆಥರ್ ಸೀಟು ಮುಂತಾದ ಸೌಲಭ್ಯಗಳಿರಲಿದೆ.

ಫಿನಿನ್ ಫರಿನಾ

ಫಿನಿನ್ ಫರಿನಾ

ಇತ್ತೀಚೆಗಷ್ಟೇ ಫೆರಾರಿಗಳಂತಹ ಐಕಾನಿಕ್ ಸೂಪರ್ ಕಾರುಗಳಿಗೆ ಡಿಸೈನ್ ಮಾಡಿರುವ ಫಿನಿನ್ ಫರಿನಾ ಸಂಸ್ಥೆಯನ್ನು ಮಹೀಂದ್ರ ಖರೀದಿಸಿತ್ತು. ಈಗ ನೂತನ ಹ್ಯಾಲೊ ಎಲೆಕ್ಟ್ರಿಕ್ ಕಾರಿನಲ್ಲೂ ಫಿನಿನ್ ಫರಿನಾ ತಂತ್ರಗಾರಿಕೆಯನ್ನು ಆಳವಡಿಸಲಾಗುತ್ತಿದೆ.

ಎಲೆಕ್ಟ್ರಿಕ್ ಮೋಟಾರು

ಎಲೆಕ್ಟ್ರಿಕ್ ಮೋಟಾರು

ಮಹೀಂದ್ರ ಹ್ಯಾಲೊ ಎಲೆಕ್ಟ್ರಿಕ್ ಮೋಟಾರು 141 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಒಂಬತ್ತು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಹಾಗೂ ಗಂಟೆಗೆ ಗರಿಷ್ಠ 160 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಎಲೆಕ್ಟ್ರಿಕ್ ವಾಹನಗಳ ದೃಷ್ಟಿಕೋನದಲ್ಲಿ ನೋಡಿದರೆ ಇದರ ಸಾಧನೆ ಮಹತ್ತರವಾಗಿದೆ.

ವ್ಯಾಪ್ತಿ

ವ್ಯಾಪ್ತಿ

ಸಂಸ್ಥೆಯ ಪ್ರಕಾರ ಮಹೀಂದ್ರ ಹ್ಯಾಲೊ ಡಿಲ್ಕ್ಸ ಹಾಗೂ ಸ್ಟ್ಯಾಂಡರ್ಡ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇವೆರಡು ಅನುಕ್ರಮವಾಗಿ 200 ಹಾಗೂ 150 ಕೀ.ಮೀ. ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಕೈಗೆಟುಕುವ ಕ್ರೀಡಾ ಕಾರು

ಕೈಗೆಟುಕುವ ಕ್ರೀಡಾ ಕಾರು

ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಹೀಂದ್ರ ಹ್ಯಾಲೊ ಎಲೆಕ್ಟ್ರಿಕ್ ಕನಸು ನನಸಾದ್ದಲ್ಲಿ ಮಹೀಂದ್ರ ಪಾಲಿಗೆ ದೊಡ್ಡ ಯಶ್ಸಸ್ಸನ್ನೇ ತರಲಿದೆ. ಅಲ್ಲದೆ ಕಡಿಮೆ ಬೆಲೆಯ ಕೈಗೆಟುಕುವ ಕ್ರೀಡಾ ಕಾರು ಎಂದು ಗುರುತಿಸಿಕೊಳ್ಳಲಿದೆ.

ಸ್ಟೈಲಿಷ್ ವಿನ್ಯಾಸ

ಸ್ಟೈಲಿಷ್ ವಿನ್ಯಾಸ

ನೂತನ ಹ್ಯಾಲೊ ಕಾರಿನಲ್ಲಿ ಒಂದು ನೈಜ ಕ್ರೀಡಾ ಕಾರು ಎನಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಅಲ್ಲದೆ ಮುಂಭಾಗದಲ್ಲಿ ಎಲ್ ಇಡಿ ಹೆಡ್ ಲೈಟ್, ಫಾಗ್ ಲ್ಯಾಂಪ್ ಮುಂತಾದ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.

ಒಳಮೈ

ಒಳಮೈ

ಇನ್ನು ಕಾರಿನೊಳಗೆ ಟ್ಯಾಬ್ಲಟ್ ಕಂಪ್ಯೂಟರ್ ಸೌಲಭ್ಯವಿರಲಿದೆ. ಇದು ಡಿಜಿಟಲ್ ಡಿಸ್‌ಪ್ಲೇ ತರಹನೂ ಕೆಲಸ ಮಾಡಲಿದೆ. ಅಂತೆಯೇ ಸ್ಟೀರಿಂಗ್ ವೀಲ್ ನಲ್ಲೇ ಡ್ಯಾಶ್ ಬೋರ್ಡ್ ನಿಯಂತ್ರಣ ವ್ಯವಸ್ಥೆಯೂ ಇರಲಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಈ ಎಲ್ಲದರ ಮೂಲಕ ತಂತ್ರಗಾರಿಕೆ ಹಾಗೂ ಭವಿಷ್ಯದ ಸಂಚಾರ ವಾಹಕ ದೃಷ್ಟಿಕೋನದಲ್ಲಿ ಮಹೀಂದ್ರ ಅಕ್ಷರಶ: ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ದೇಶದ ಭವಿಷ್ಯ ಬದಲಾಯಿಸಿತೇ ಮಹೀಂದ್ರ ಹ್ಯಾಲೊ

ಈಗ ನೂತನ ಮಹೀಂದ್ರ ಹ್ಯಾಲೊ ಎಲೆಕ್ಟ್ರಿಕ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Most Read Articles

Kannada
English summary
Mahindra currently sells the Reva e2o in India, which is a fully electric vehicle. They have now revealed images of their upcoming electric sports car on their website.
Story first published: Monday, May 18, 2015, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X